ಹಸಿವಿನ ದೇಶದಲ್ಲಿ ಆಹಾರದ ರಾಜಕೀಯ – ಭಾಗ – 01

ಮಲಿನ ಆಹಾರ ಮತ್ತು ಮೈಲಿಗೆಯ ಮನಸ್ಸು ✍️ ಯೋಗಿಶ್ ಮಾಸ್ಟರ್, ಬರಹಗಾರರು ಭಾಷೆ, ಬಣ್ಣ, ಸಂಸ್ಕೃತಿ, ವರ್ಗವೇ ಮೊದಲಾದ ವಿಷಯಗಳಿಂದ ಒಬ್ಬ ಮತ್ತೊಬ್ಬನ ಮೇಲೆ, ಒಂದು ವರ್ಗ ಮತ್ತೊಂದು ವರ್ಗದ ಮೇಲೆ, ಒಂದು ಜಾತಿ ಮತ್ತೊಂದು ಜಾತಿಯ ಮೇಲೆ ತನ್ನ ಯಜಮಾನಿಕೆಯನ್ನು ಸ್ಥಾಪಿಸಿಕೊಂಡು ಮೆರೆಯುವ ಮೇಲರಿಮೆಯ ರೋಗ ನಮ್ಮ ದೇಶಕ್ಕೇನೂ ಹೊಸತಲ್ಲ. ಅಂತಹ ಆಹಾರವೂ ಕೂಡಾ ಒಂದು.ಒಂದಂತೂ ಸ್ಪಷ್ಟ. ಆಹಾರದ ವಿಷಯದಲ್ಲಿ ಭಾರತದಲ್ಲಾಗಲಿ, ಈಗ ನಮ್ಮ ಕರ್ನಾಟಕದಲ್ಲಾಗಲಿ ನಡೆಯುತ್ತಿರುವ ಚರ್ಚೆಗಳು ಸಾಮಾನ್ಯ ತಿಳುವಳಿಕೆಯ ವ್ಯಾಪ್ತಿಯಲ್ಲಿ ನೋಡಲು ಹೋದರೆ ‘ಅದು ಬೇಡದ್ದು’. ಹಸಿವಿನಿಂದ ಮುಕ್ತವಾಗಿರದ ದೇಶದಲ್ಲಿ ಆಹಾರದ ವಿಷಯದಲ್ಲಿ ಆಟವಾಡುವುದು ಅಮಾನವೀಯವೂ ಹೌದು … Continue reading ಹಸಿವಿನ ದೇಶದಲ್ಲಿ ಆಹಾರದ ರಾಜಕೀಯ – ಭಾಗ – 01

Sticky Post

ಹತ್ಯಾಕಾಂಡಗಳಿಗೆ ಬಾಗಿಲು ತೆರೆದು ನೀಡುತ್ತಿರುವ ಬೊಮ್ಮಾಯಿ ಆಳ್ವಿಕೆಯ ಕರ್ನಾಟಕ

✍️ಅಶ್ವಾನ್ ಸಾಧಿಕ್.ಪಿವಿದ್ಯಾರ್ಥಿ ಹೋರಾಟಗಾರರು ಕರ್ನಾಟಕದಲ್ಲಿ ಹತ್ತು ದಿನಗಳಲ್ಲಿ ಮೂರು ಕೊಲೆಗಳು ನಡೆದಿದೆ. ಮೂರು ಕೊಲೆಗಳಿಗೆ ಸಂಘಪರಿವಾರವೇ ನೇರ ಕಾರಣವೆಂದರೆ ತಪ್ಪಿಲ್ಲ. ದೇಶದ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಕೇಶವ ಕೃಪದ ಕೈಗೊಂಬೆಯೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮೂರು ಕೊಲೆ ಪ್ರಕರಣಗಳಲ್ಲಿ ಸರಕಾರದ ತಾರತಮ್ಯ ಧೋರಣೆಯು ಕರ್ನಾಟಕವನ್ನೇ ನಾಚಿಸಿದೆ. ಜೊತೆಗೆ ಕನ್ನಡ ಮಾಧ್ಯಮಗಳ ಮುಸ್ಲಿಂ ವಿರೋಧಿ ನೀಚ ಮನಸ್ಥಿತಿಯೂ ಬಹಿರಂಗಗೊಂಡಿದೆ. ಈ ಹಿಂದೆಯೂ ಪ್ರಮುಖವಾಗಿ ಕರಾವಳಿ ಹಾಗು ಇತರೆ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ದೈಹಿಕವಾಗಿ ಮಾನಸಿಕವಾಗಿ ಹಲವು ದಾಳಿಗಳಾಗಿವೆ, ರಾಜ್ಯದಲ್ಲಿ ಪ್ರಸಕ್ತ ನಡೆಯುತ್ತಿರುವ ಸನ್ನಿವೇಶ ಹಾಗು ರಾಜ್ಯದಲ್ಲಿ ಕಳೆದೊಂದು … Continue reading ಹತ್ಯಾಕಾಂಡಗಳಿಗೆ ಬಾಗಿಲು ತೆರೆದು ನೀಡುತ್ತಿರುವ ಬೊಮ್ಮಾಯಿ ಆಳ್ವಿಕೆಯ ಕರ್ನಾಟಕ

Sticky Post

ಭಿಕ್ಷಾಟನೆಗೆ ಕೊನೆ ಎಂದು?

✍️ಜ್ಯೋತಿ.ಜಿ (ಉಪನ್ಯಾಸಕಿ, ಮೈಸೂರು) ಬಡತನ ಮುಕ್ತ ದೇಶ ನಿರ್ಮಾಣದ ಗುರಿ ಹೊಂದಿರುವ ನಮ್ಮ ದೇಶದಲ್ಲಿ ಭಿಕ್ಷಾಟನೆ ಮಾತ್ರ ಇನ್ನೂ ನಡೆಯುತ್ತಲೇ ಇದೆ. ಒಂದು ಕಡೆ ನಾವು ತಾಂತ್ರಿಕತೆಯಲ್ಲಿ,ಅವಿಷ್ಕಾರದಲ್ಲಿ ಮುಂದುವರಿದ್ದೇವೆ ಎಂದು ಬಹಳಷ್ಟು ರಾಜಕೀಯ ನಾಯಕರು ತಮ್ಮ ಪ್ರದರ್ಶನಗಳನ್ನು ಮಾಡುತ್ತಾರೆ. ಆದರೆ ತಮ್ಮ ಸುತ್ತ ಮುತ್ತಲಿನ ರಾಜಕೀಯ ನಾಯಕರಿಗೆ ಈ ಭಿಕ್ಷಾಟನೆಯ ಪರಿವೇ ಇರುವುದಿಲ್ಲ. ಸಿಗ್ನಲ್‌‌ಗಳಲ್ಲಿ,ಬಸ್ಸ್‌ ನಿಲ್ದಾಣಗಳಲ್ಲಿ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಹಾಗೂ ಇನ್ನಿತರ ಸಾರ್ವಜನಿಕ ಪ್ರದೇಶಗಳಲ್ಲಿ ಭಿಕ್ಷುಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೋಡುತ್ತಲೇ ಇರುತ್ತೇವೆ ಚಿಕ್ಕ ವಯಸ್ಸಿನ ಮಕ್ಕಳು ಹಣ ಕೊಡುವವರೆಗೂ ಬಿಡುವುದಿಲ್ಲ ಕೆಲವೊಮ್ಮೆ ಕಾಲಿಗೆ ಬಂದು ಎರಗುತ್ತಾರೆ. ನಾನು … Continue reading ಭಿಕ್ಷಾಟನೆಗೆ ಕೊನೆ ಎಂದು?

ಶಿಕ್ಷಕರ ಮೌನ

✍ ವಿವೇಕಾನಂದ ಹೆಚ್.ಕೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶಾಸಕರೊಬ್ಬರು ಒಂದು ಶಾಲೆಯ ಮುಖ್ಯೋಪಾಧ್ಯಾಯರಿಗೋ ಅಥವಾ ಪ್ರಾಂಶುಪಾಲರಿಗೋ ಸಾಕಷ್ಟು ಜನಗಳ ಮುಂದೆ ಕಪಾಳಕ್ಕೆ ಹೊಡೆಯುತ್ತಾರೆ. ಅದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಪ್ರಸಾರವಾಗುತ್ತದೆ. ಸರಿ ತಪ್ಪು ಏನೇ ಇರಲಿ ಯಾರದೇ ಇರಲಿ ಒಬ್ಬ ಶಿಕ್ಷಕರಿಗೆ ಜನ ಪ್ರತಿನಿಧಿಯೊಬ್ಬರು ಬಹಿರಂಗವಾಗಿ ಹೊಡೆಯುತ್ತಾರೆ ಎಂದರೆ ಅದು ಒಂದು ಗಂಭೀರ ಅಪರಾಧ. ಈ ದೇಶದ ಕಾನೂನು, ಇಲ್ಲಿನ ಪೋಲೀಸರು, ಇಲ್ಲಿನ ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಈಗಾಗಲೇ ಶಾಸಕರನ್ನು ಬಂಧಿಸಿ ಕ್ರಮಕೈಗೊಳ್ಳಬೇಕಾಗಿತ್ತು. ಮಾಧ್ಯಮಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸುದ್ದಿಗಳನ್ನು ಪ್ರಸಾರ ಮಾಡಿ ಸರ್ಕಾರದ ಮೇಲೆ ಒತ್ತಡ … Continue reading ಶಿಕ್ಷಕರ ಮೌನ

ಅಸ್ತಿತ್ವವನ್ನು ಕೆಡವಿದ ಬುಲ್ಡೋಝರ್

ಭಾಗ :6 ರಿಯಾಝ್ ಅಂಕತಡ್ಕಪತ್ರಿಕೋದ್ಯಮ ವಿದ್ಯಾರ್ಥಿ, ಮಂಗಳೂರು ವಿಶ್ವವಿದ್ಯಾನಿಲಯ “ಭಾರತದಲ್ಲಿ ಜೀವಿಸಬೇಕಾದರೆ ಜೈ ಶ್ರೀರಾಮ್ ಹೇಳಬೇಕು” ಎನ್ನುವ ಘೋಷಣೆಗಳನ್ನು ಕೂಗುತ್ತಾ, ಕೈಯಲ್ಲಿ ಕತ್ತಿ, ಖಡ್ಗ, ಪಿಸ್ತೂಲ್ ಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸುವ, ಮಸೀದಿಗಳ ಮುಂದೆ ಇಸ್ಲಾಮಿನ, ಮುಸಲ್ಮಾನರ ವಿರುದ್ಧ ಕೇಕೆಗಳನ್ನು ಹಾಕುವ ಭಯೋತ್ಪಾದಕರ ಗುಂಪನ್ನು ನೀವು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಕಂಡಿರಬಹುದು. ಇದು ಎಲ್ಲಾ ಪ್ರಜೆಗಳಿಗೂ ತಮ್ಮ ತಮ್ಮ ಧರ್ಮವನ್ನು ಆಚರಿಸುವ, ಅನುಸರಿಸುವ ಮತ್ತು ಪ್ರಚಾರಪಡಿಸುವ ಸಮಾನ ಅವಕಾಶ ನೀಡಿದಂತಹಾ ಧರ್ಮನಿರಪೇಕ್ಷ ದೇಶವಾದ ಭಾರತದಲ್ಲಿ ಎಂಬುದು ಆಘಾತಕಾರಿ ಮತ್ತು ಬೇಸರದ ಸಂಗತಿಯಾಗಿದೆ. ಗಲಭೆಕೋರರನ್ನು ತಡೆದು ಕಟ್ಟಿಹಾಕಬೇಕಾದ ಸರ್ಕಾರ ಮಾತ್ರ ತಮ್ಮ ಉಳಿವಿಗಾಗಿ, … Continue reading ಅಸ್ತಿತ್ವವನ್ನು ಕೆಡವಿದ ಬುಲ್ಡೋಝರ್

ಪೂರ್ವಜರು ಮಾಡಿದ ಅಪರಾಧಕ್ಕಾಗಿ ಇವರನ್ನೀಗ ನಾವು ದ್ವೇಷಿಸಬೇಕೇ?

✍ ರವಿಕಿರಣ್ ರೈ, ಕದ್ರಿ, ಮಂಗಳೂರು ಆಗಿನ ಮುಸ್ಲಿಮರ ಪೂರ್ವಜರು ನವಾಬ ಸುಲ್ತಾನರ ಸೇನೆಯಲ್ಲಿದ್ದುಕೊಂಡು ಹಿಂದೂ ದೇವಸ್ಥಾನಗಳನ್ನು ಲೂಟಿ ಹೊಡೆದಿದ್ದಾರೆ, ಅದಕ್ಕಾಗಿ ಈಗಿನ ಮುಸ್ಲಿಮರನ್ನೂ ಹಿಂದೂ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂಬ ವಿವರಣೆ ಹಿಂದುತ್ವ ಸಂಘಟನೆಗಳದ್ದು. 1665ರಲ್ಲಿ ನಮ್ಮ ಕುಂದಾಪುರ ತಾಲೂಕಿನ ಬಸರೂರು ಒಂದು ದೊಡ್ಡ ಬಂದರಾಗಿದ್ದು ಅಲ್ಲಿ ಅರಬಿಗಳು, ಪೋರ್ಚುಗೀಸರು ಮತ್ತು ಸ್ಥಳೀಯ ಜೈನರು, ನಾಡವರು ವಿದೇಶದೊಂದಿಗೆ ಭಾರೀ ವ್ಯಾಪಾರ ಮಾಡುತ್ತಿದ್ದರು. ಬಸರೂರು ಬಂದರ್‌ನಿಂದ ದೊಡ್ಡ ಪ್ರಮಾಣದಲ್ಲಿ ಕರಿಮೆಣಸು, ಮಸಾಲೆ ಪದಾರ್ಥ ಮತ್ತು ಅಕ್ಕಿ ಅರಬಿ ದೇಶಕ್ಕೆ ನಿರ್ಯಾತವಾಗುತ್ತಿತ್ತು. ಆ ಸಮಯದಲ್ಲಿ ಬಸರೂರು ಅತ್ಯಂತ ಸಮೃದ್ಧ ಪ್ರದೇಶವಾಗಿತ್ತು. … Continue reading ಪೂರ್ವಜರು ಮಾಡಿದ ಅಪರಾಧಕ್ಕಾಗಿ ಇವರನ್ನೀಗ ನಾವು ದ್ವೇಷಿಸಬೇಕೇ?

Brave heroes of the Nation

✍Ifrath Zaheema The political prisoner,Rauf Shareef is indeed, a great man! In spite of the wife being pregnant, the man just didn’t stand at the back but rather went in the forefront to send his condolences to the rape-victim’s family. The father hasn’t seen his daughter for once. You are being ruthless, depriving the right of seeing his daughter. What a inhumane torture? Oh baby … Continue reading Brave heroes of the Nation

ಹಲಾಲ್_ಹಾಗೆಂದರೇನು…?

✍ ಇಸ್ಮತ್_ಪಜೀರ್ ಪ್ರಸ್ತುತ ಭಾರತದಲ್ಲಿ ಮುಸ್ಲಿಮರ ವಿರುದ್ಧದ ಅಸಹನೆಯ ಭಾಗವಾಗಿ ಮುಸ್ಲಿಮರು ಮಾಂಸದ ಪ್ರಾಣಿಯನ್ನು ಕೊಯ್ಯುವಾಗ ಅನುಸರಿಸುವ ವಿಧಿ ವಿಧಾನವನ್ನೂ ಕಟುವಾಗಿ ವಿರೋಧಿಸುವ ಒಂದು ನೀಚ ಟ್ರೆಂಡ್ ಚಲಾವಣೆಯಲ್ಲಿದೆ. ಭಾರತದಲ್ಲಿ ಕೇರಳವೆಂದರೆ ಅತ್ಯಂತ ವಿದ್ಯಾವಂತ ಮತ್ತು ಪ್ರಜ್ಞಾವಂತರುಳ್ಳ ನಾಡೆಂದು ಪರಿಗಣಿಸಲಾಗುತ್ತದೆ. ಆದುದರಿಂದಲೇ ಅಲ್ಲಿ ಕೋಮುವಾದಿ ರಾಜಕೀಯದ ಬೆಳೆ ತೆಗೆಯಲು ಬಲಪಂಥೀಯ ಪ್ರತಿಗಾಮಿ ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ. ಕೇರಳದಲ್ಲಿ ಇಂದಿಗೂ ಬ್ರಾಹ್ಮಣೇತರ ಹಿಂದೂಗಳಲ್ಲಿ ಬಹುತೇಕರು ದನದ ಮಾಂಸವನ್ನು ಸೇವಿಸುತ್ತಾರೆ. ಅಲ್ಲಿ ಅದನ್ನು ಕೇವಲ ಒಂದು ಕಡಿಮೆ ಬೆಲೆಗೆ ಲಭ್ಯವಿರುವ ಪೌಷ್ಟಿಕಾಂಶವಿರುವ ಆಹಾರ ಎಂದಷ್ಟೇ ನೋಡಲಾಗುತ್ತದೆ. ಅಲ್ಲಿ ಈ ವರೆಗೂ ಗೋ ಪಾಲಿಟಿಕ್ಸ್‌ಗೆ ದೊಡ್ಡ ಮಣ್ಣನೆ … Continue reading ಹಲಾಲ್_ಹಾಗೆಂದರೇನು…?

ದಿ ಕಾಶ್ಮೀರ್ ಫೈಲ್ಸ್..!

ಸಿನಿಮಾ ಸೃಷ್ಟಿಸುತ್ತಿರುವ ಭಾವನಾತ್ಮಕ ಅಲೆಯ ಸುತ್ತ…… ✍ ವಿವೇಕಾನಂದ ಹೆಚ್.ಕೆ. ಹಾಗೆಯೇ ಇತ್ತೀಚೆಗೆ ಜೈ ಭೀಮ್ ಸಿನಿಮಾ ಸೃಷ್ಟಿಸಿದ್ದ ವಿಷಾದನೀಯ ಅಲೆಯ ಒಳನೋಟ…….” ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ” ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳು ಹಿನ್ನೆಲೆಯಲ್ಲಿ….. ಇತಿಹಾಸ ವರ್ತಮಾನಕ್ಕೆ ಪಾಠವಾಗಬೇಕೆ ಹೊರತು ಭವಿಷ್ಯಕ್ಕೆ ಮಾರಕವಾಗಬಾರದು ಎಂಬ ಎಚ್ಚರಿಕೆಯಿಂದ……… ಹೌದು ಕಾಶ್ಮೀರ ಫೈಲ್ಸ್ ಸಿನಿಮಾ ನೋಡುತ್ತಿರುವ ದೇಶಭಕ್ತಿಯ ಉತ್ತುಂಗದಲ್ಲಿರುವ ಜನರು ದುಃಖ ಆಕ್ರೋಶದಿಂದ ಭುಗಿಲೇಳುವ ಮಾತುಗಳನ್ನಾಡುತ್ತಿದ್ದಾರೆ. ಜೈ ಭೀಮ್ ನೋಡಿದ ದೌರ್ಜನ್ಯಕ್ಕೊಳಗಾದವರು ಸಹ ನಕ್ಸಲೀಯ ಭಾವನೆಯ ಒಳ ಭೇಗುದಿಗೆ ಒಳಗಾಗಿದ್ದಾರೆ. ಇತಿಹಾಸದ ಹತ್ಯಾಕಾಂಡಗಳನ್ನು ಜಾತಿ ಧರ್ಮ ಪ್ರದೇಶಗಳ … Continue reading ದಿ ಕಾಶ್ಮೀರ್ ಫೈಲ್ಸ್..!

ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಯ ಸಾವಿಗೆ ಹೊಣೆ ಯಾರು..!?

ಚುನಾವಣೆಯ ಸ್ಟ್ರಾಟಜಿ ಬಳಸ್ತಿದೆಯಾ ಮೋದಿ ಸರ್ಕಾರ..!? -✍ ಪ್ರಕಾಶ್ ಡಿ.ರಾಂಪೂರ್ , ಪತ್ರಕರ್ತರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿದ್ದಾನೆ. ಉಕ್ರೇನ್ ನ ಕೀವ್ ಹಾಗೂ ಖಾರ್ಕಿವ್ ನಗರದಲ್ಲಿ ರಷ್ಯಾ ಸೇನೆ ಸುತ್ತುವರೆದಿದೆ. ಕ್ಲಸ್ಟರ್ ಬಾಂಬ್ ಸ್ಫೋಟಿಸಿ, ಉಕ್ರೇನ್ ನಾಗರಿಕರನ್ನ ಹತ್ಯೆ ಮಾಡಲಾಗ್ತಿದೆ. ಕೀವ್, ಖಾರ್ಕಿವ್ ನಗರದಲ್ಲಿ 20-30 ಸಾವಿರ ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಇದ್ರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಕೂಡ.. ಬಹುತೇಕ ವಿದ್ಯಾರ್ಥಿಗಳು MBBS ವ್ಯಾಸಂಗಕ್ಕಾಗಿಯೇ ಉಕ್ರೇನ್ ಗೆ ಹೋಗಿದ್ದು. ನೇರವಾಗಿ ವಿಚಾರಕ್ಕೆ ಬರೋಣ.. ಭಾರತೀಯ ವಿದ್ಯಾರ್ಥಿಗಳನ್ನ ಪೋಲೆಂಡ್, ಹಂಗೇರಿ, ರೋಮೇನಿಯಾ (ಉಕ್ರೇನ್ ನ ಪಶ್ಚಿಮ ಭಾಗ) ಬಾರ್ಡರ್ ಗಳಿಂದ ಏರ್ … Continue reading ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಯ ಸಾವಿಗೆ ಹೊಣೆ ಯಾರು..!?