-ರಿಯಾಝ್ ಪುತ್ತೂರು
ಗುಜರಾತಿನ ಆ ಮಣ್ಣಿನಲ್ಲಿ ಕ್ರೂರತೆಯ ಮೆರೆದವರೂ ಇವರೇ….
ಜೀವಂತ ಸುಟ್ಟು ಹಾಕಿ ವಿಘ್ನ ಸಂತೋಷ ಪಟ್ಟವರೂ ಇವರೇ….
ನೀ ಅಂಗಲಾಚಿ ಬೇಡಿದರೂ
ಬಿಡಲಿಲ್ಲವಲ್ಲ ನಿನ್ನ….
ಅಂದು ನಿನ್ನ ಧ್ವನಿಯ ದಫನ ಮಾಡ ಹೊರಟವರೂ ಇವರೇ…

ನೀ ಉಡುವ ಬಟ್ಟೆಗೆ
ತಕರಾರು ಎತ್ತಿದವರೂ ಇವರೇ….
ನಿನ್ನ ಹಕ್ಕುಗಳ ಮಾಲೆಗೆ
ಕತ್ತರಿ ಹಾಕಿದವರೂ ಇವರೇ….
ಇಂದು ನೀ ತಲೆ ಎತ್ತಿ ನಿಲ್ಲುವಾಗ
ನಿನ್ನ ದಫನ ಮಾಡ ಹೊರಟವರೂ ಇವರೇ…
ನಿನ್ನ ಇತಿಹಾಸದುದ್ದಕ್ಕೂ ಮನುಸ್ಮೃತಿಯ ಹೇರಿ
ದಮನಿಸ ನೋಡಿದವರೂ ಇವರೇ…
ಭೇಟಿ ಬಚಾವೋ ಎನ್ನತ್ತಾ….
ಕತ್ತು ಹಿಸುಕಿದವರೂ ಇವರೇ…..
ಹೊಟ್ಟೆಗೆ ತ್ರಿಶೂಲವ ತಿವಿದು
ನಿನ್ನ ಸಮುದಾಯವ ದಫನ ಮಾಡ ಹೊರಟವರೂ ಇವರೇ….
ಜಗತ್ತು ಕಂಡು ಕೇಳರಿಯದ ಕನಸುಗಳ ಹೊತ್ತು
ಊರು ಕೇರಿಗಳ ಗಡಿಯನು ದಾಟಿ
ನೀ ಹೊತ್ತು ತಂದಿರುವೆ
ಈ ಶಕ್ತಿಯನು
ಮಹಿಳಾ ಶಕ್ತಿಯನು….
ನಿನ್ನ ಆರ್ಭಟವ ಕೇಳಿ
ಇಂದು ನಡುಗುತಿಹರು ಇವರು …..
ಮತ್ತೆ ಗರ್ಜಿಸುವ ಸಮಯ ಬಂದಿದೆ
ಈ ದುಷ್ಟ ಶಕ್ತಿಗಳ ಮುಂದೆ…..