“ದಿನವೊಂದು ಕಾಯುತಿದೆ”
✍ ಫಯಾಝ್ ದೊಡ್ಡಮನೆ ದಿನವೊಂದು ಕಾಯುತಿದೆಹೊಸ ಹುರುಪನು ಹೊತ್ತುಸವಿ ಕನಸಿನ ತುತ್ತು-ನೀಡಲು ದಾರಿ ಕಾಯುತಿದೆ ಹುಚ್ಚು ಮನಸುಗಳು ಮುಕ್ತ-ವಾಗಿ, ಸ್ವಚ್ಚ ಪ್ರೀತಿಯ ತೊಟ್ಟಿಲಾಗಿಜೋಗುಳ ಪದಗಳ ಮಾರ್ದನಿ-ಯಾಗಿ ಬೀಸಿ ಕರೆಯಲಿವೆ ಸರ್ವಾಧಿಕಾರದ ಸೊಕ್ಕನು ಮುರಿದುಅಮಾನವೀಯ ಸಿದ್ಧಾಂತವ ಒಗೆದುರಕ್ಕಸರ ರೆಕ್ಕೆಯನು ಕಡಿದುಕೆಂಪು ನದಿಗಳು ಹರಿಯಲಿವೆ ನಾವು ನೀವು ಒಂದುಇನ್ನಿಲ್ಲ ಭೇದದ ಬಿಂದುನಮ್ಮೆಲ್ಲ ಕನಸುಗಳು ಒಂದು-ಗೂಡಲಿವೆ ಭೋರ್ಗರೆಯಲಿವೆ. ನಮ್ಮ ದೇಶ ನಮ್ಮ ಜನಮಣ್ಣು ಮಾತ್ರ ಅಲ್ಲವೇ ಅಲ್ಲಮಣ್ಣು- ಮಾತೆ ಗಾವರವಿಲ್ಲಒಂದು ಗೂಡಲಿವೆ ಮನಸುಗಳು ಒಂದು ಗೂಡಲಿವೆ ದಿನವೊಂದು ಕರೆಯುತಿದೆಬನ್ನಿರೆಂದು ಬರಲು ಶುರುವಿದಿಂದುಆಗಲಿ ಹೆಜ್ಜೆ ಹೆಜ್ಜೆಗಳಾಗಲಿಹೆಜ್ಜೆ ಸಪ್ಪಳ ಜೋರಿರಲಿ ದಿನವೊಂದು ಕಾಯುತಿದೆಹೊಸ ಹುರುಪನು ಹೊತ್ತು . Continue reading “ದಿನವೊಂದು ಕಾಯುತಿದೆ”