ಧರೆಗುರುಳಿವೆ ಮಾನವೀಯತೆ

✍🏻 ಎಮೆಸ್ಸೆ ಸವಣೂರು

ನಿನಗಿದು ಕ್ಷಣಮಾತ್ರದ ಹೊಡೆತ
ನನ್ನ ಜೀವಮಾನದ ಬೆವರಿನ ದುಡಿತ.
ಮನುಷ್ಯತ್ವವೇ ಕಳೆದ ಹೋದ ನಿನ್ನಲ್ಲಿ
ಮನದ ನೋವ ತೋಡಿಕೊಂಡರೇನಿಲ್ಲಿ.

ಒಂದೈದು ನಿಮಿಷ ತಡೆಯಬಾರದಿತ್ತೆ?
ಹನಿ ನೀರಿನ ಸೀಸೆಯ ಬದಿಯಲ್ಲಿಡುತ್ತಿದ್ದೆ.
ನೀ ದಣಿದಾಗ ಕುಡಿಯಲು ಹಿಂಜರಿಯದಿರು,
ನೀನೊಮ್ಮೆಯೂ ಬಾಯಾರಿಕೆಯಿಂದ ಕಂಗಾಲಾಗದಿರು.

ನಿನಗಿಂತಲೂ ಮುಂಚೆ ಮೆರದವರು
ಸರ್ವಾಧಿಕಾರವ ತೋರಿ ಜರೆದವರು
ಒಂದೇ ಕ್ಷಣದಲ್ಲಿ ಗತಿಸಿ ಹೋದ ಮೇಲೆ
ನಿನ್ನನ್ನು ಬಿಡಬಹುದೇ ಭಗವಂತನ ಲೀಲೆ

ಬ್ರೂಣವ ಚುಚ್ಚಿ ಕೇಕೆ ಹಾಕಿದವರು
ಗರ್ಭವ ಸೀಳಿ ಪೆಟ್ರೋಲ್ ಸುರಿದವರು
ಬಡವನ ಹೊಟ್ಟೆಗೆ ಕಲ್ಲೆಸದವರು
ತುಂಡು ಇಟ್ಟಿಗೆಯ ಧರೆಗೆ ಉರುಳಿಸಿದವರು

ಕಾಲಚಕ್ರ ತಿರುಗಿದಾಗ ಎಲ್ಲವ ನೆನಪಿಸುವೆವು
ನಿನ್ನ ಸೋಲಿಸಿ ಮಂಡಿಯೂರಿ ನಿಲ್ಲಿಸುವೆವು
ಫರೋವನ ಪೌರುಷ ಮುಳುಗಿಸಿದ ಹಾಗೆ
ನಂದಿದೆ ನಂರೂದನ ಅಗ್ನಯ ಬೇಗೆ

ಅಧಿಕಾರದ ಕೋಟೆಗಳೇ ಧರೆಗುರುಳಿವೆ
ಅಹಂಕಾರದ ಗಜಗಳೇ ಸೋಲನ್ನೊಪ್ಪಿದೆ
ಅಧಿಕಾರದ ಮೇಲೆ ನೀನು ನೆಪ ಮಾತ್ರ
ಆಡಿಸುವವನಿಗೆ ತಿಳಿದಿದೆ ಎಲ್ಲಾ ಸೂತ್ರ.

Leave a comment