ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

(ಪಂಚರಾಜ್ಯ ಚುನಾವಣೆ)

ಚಾಂದ್ ಸಲ್ಮಾನ್

ಕೇಂದ್ರದಲ್ಲಿ ಅಧಿಕಾರಕ್ಕೆರುವ ಮುಂಚೆ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ಹಾಕುವೆ ಎಂದು ಹುಸಿ ಸುಳ್ಳುಹೇಳಿ ಅಧಿಕಾರಕ್ಕೆ ಬಂದಿದನ್ನು
ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

ನೋಟ್ ಬ್ಯಾನ್ ಸಂದರ್ಭದಲ್ಲಿ ಬಡಜನ ಸರತಿ ಸಾಲಿನಲ್ಲಿ ನಿಂತು ನೋಟ್ ಬದಲಾವಣೆ ಮಾಡುವ ಸಮಯದಲ್ಲಿ ಎಷ್ಟೊಂದು ಜೀವಗಳು ಹೋಗಿವೆ ಇದನ್ನು ಕೂಡ ಕಂಡು
ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

ವಿದ್ಯಾವಂತ ಯುವಕರು ಉದ್ಯೋಗ ಕೇಳಿದರೆ ಉದ್ಯೋಗ ನೀಡದೆ ಪಕೋಡ ಮಾರಿ ಎಂದು ಹೇಳಿ ನಿರೋದ್ಯೋಗ ಸೃಷ್ಟಿಸಿದ ಫ್ಯಾಸಿಸ್ಟ ಸರಕಾರ,
ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

ಹತ್ರಾಸ್ ನಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿ ವಿಜೃಂಭಿಸಿದ ಫ್ಯಾಸಿಸ್ಟ ರನ್ನು, ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿಸಲು ಭೇಟಿಯಾಗಲು ಹೋದಾಗ ಸುಳ್ಳಾರೋಪಗಳ ಮೇಲೆ ಬಂಧನವಾಗಿ ಜೈಲಿನಲ್ಲಿರುವ ಅತೀಕ್, ಮಸೂದ್, ಸಿದ್ಧಿಕ್ ಕಪ್ಪನ್ ರನ್ನು
ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

ಕೋವಿಡ್ ಸಂದರ್ಭದಲ್ಲಿ ಪೂರ್ವ ತಯಾರಿಲ್ಲದೆಯೇ ದೇಶವನ್ನು ಲಾಕ್ಡೌನ್ ಮಾಡಿ ಅನ್ನ, ನೀರು ಇಲ್ಲದೆ ಅಮಾಯಕ ಕಾರ್ಮಿಕರ ಜೀವಗಳನ್ನು ತೆಗದದ್ದು, ಮತ್ತು ಬೆಡ್, ಆಕ್ಸಿಜನ್, ಕೊರತೆಯಿಂದ ಜನರು ನರಳಿ ನರಳಿ ಪ್ರಾಣ ಕಳೆದುಕೊಂಡದ್ದು, ಹೂಳಬೇಕಾದ ಸತ್ತ ದೇಹಗಳನ್ನು ನದಿಗಳಲ್ಲಿ ಎಸೆದಿದ್ದು
ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

ರೈತವಿರೋಧಿ ಕಾನೂನುಗಳನ್ನು ತಂದು, ರೈತರ ಮೇಲೆ ದಬ್ಬಾಳಿಕೆ ನಡೆಸಿ, ರೈತರ ಜೀವಗಳನ್ನು ತೆಗದದ್ದು
ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

ವಿದ್ಯಾರ್ಥಿನಿಯರನ್ನು ಹಿಜಾಬಿನ ಹೆಸರಿನಲ್ಲಿ ಅವರ ಸಂವಿಧಾನಿಕ ಹಕ್ಕನ್ನು ಕಸಿದು ಅವರನ್ನು ಶಾಲಾ-ಕಾಲೇಜುಗಳಿಂದ ಹೊರಹಾಕಿ ಬೀದಿಯಲ್ಲಿ ನಿಲ್ಲಿಸಿದ್ದನ್ನು
ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…
ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

Leave a comment