“ದಿನವೊಂದು ಕಾಯುತಿದೆ”

✍ ಫಯಾಝ್ ದೊಡ್ಡಮನೆ

ದಿನವೊಂದು ಕಾಯುತಿದೆ
ಹೊಸ ಹುರುಪನು ಹೊತ್ತು
ಸವಿ ಕನಸಿನ ತುತ್ತು
-ನೀಡಲು ದಾರಿ ಕಾಯುತಿದೆ

ಹುಚ್ಚು ಮನಸುಗಳು ಮುಕ್ತ
-ವಾಗಿ, ಸ್ವಚ್ಚ ಪ್ರೀತಿಯ ತೊಟ್ಟಿಲಾಗಿ
ಜೋಗುಳ ಪದಗಳ ಮಾರ್ದನಿ
-ಯಾಗಿ  ಬೀಸಿ ಕರೆಯಲಿವೆ

ಸರ್ವಾಧಿಕಾರದ ಸೊಕ್ಕನು ಮುರಿದು
ಅಮಾನವೀಯ ಸಿದ್ಧಾಂತವ ಒಗೆದು
ರಕ್ಕಸರ ರೆಕ್ಕೆಯನು ಕಡಿದು
ಕೆಂಪು ನದಿಗಳು ಹರಿಯಲಿವೆ

ನಾವು ನೀವು ಒಂದು
ಇನ್ನಿಲ್ಲ ಭೇದದ ಬಿಂದು
ನಮ್ಮೆಲ್ಲ ಕನಸುಗಳು ಒಂದು
-ಗೂಡಲಿವೆ ಭೋರ್ಗರೆಯಲಿವೆ.

ನಮ್ಮ ದೇಶ ನಮ್ಮ ಜನ
ಮಣ್ಣು ಮಾತ್ರ ಅಲ್ಲವೇ ಅಲ್ಲ
ಮಣ್ಣು- ಮಾತೆ ಗಾವರವಿಲ್ಲ
ಒಂದು ಗೂಡಲಿವೆ ಮನಸುಗಳು ಒಂದು ಗೂಡಲಿವೆ

ದಿನವೊಂದು ಕರೆಯುತಿದೆ
ಬನ್ನಿರೆಂದು ಬರಲು ಶುರುವಿದಿಂದು
ಆಗಲಿ ಹೆಜ್ಜೆ ಹೆಜ್ಜೆಗಳಾಗಲಿ
ಹೆಜ್ಜೆ ಸಪ್ಪಳ ಜೋರಿರಲಿ

ದಿನವೊಂದು ಕಾಯುತಿದೆ
ಹೊಸ ಹುರುಪನು ಹೊತ್ತು .

Leave a comment