ಚುನಾವಣೆಯ ಸ್ಟ್ರಾಟಜಿ ಬಳಸ್ತಿದೆಯಾ ಮೋದಿ ಸರ್ಕಾರ..!?
-✍ ಪ್ರಕಾಶ್ ಡಿ.ರಾಂಪೂರ್ , ಪತ್ರಕರ್ತರು

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿದ್ದಾನೆ. ಉಕ್ರೇನ್ ನ ಕೀವ್ ಹಾಗೂ ಖಾರ್ಕಿವ್ ನಗರದಲ್ಲಿ ರಷ್ಯಾ ಸೇನೆ ಸುತ್ತುವರೆದಿದೆ. ಕ್ಲಸ್ಟರ್ ಬಾಂಬ್ ಸ್ಫೋಟಿಸಿ, ಉಕ್ರೇನ್ ನಾಗರಿಕರನ್ನ ಹತ್ಯೆ ಮಾಡಲಾಗ್ತಿದೆ. ಕೀವ್, ಖಾರ್ಕಿವ್ ನಗರದಲ್ಲಿ 20-30 ಸಾವಿರ ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಇದ್ರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಕೂಡ.. ಬಹುತೇಕ ವಿದ್ಯಾರ್ಥಿಗಳು MBBS ವ್ಯಾಸಂಗಕ್ಕಾಗಿಯೇ ಉಕ್ರೇನ್ ಗೆ ಹೋಗಿದ್ದು. ನೇರವಾಗಿ ವಿಚಾರಕ್ಕೆ ಬರೋಣ.. ಭಾರತೀಯ ವಿದ್ಯಾರ್ಥಿಗಳನ್ನ ಪೋಲೆಂಡ್, ಹಂಗೇರಿ, ರೋಮೇನಿಯಾ (ಉಕ್ರೇನ್ ನ ಪಶ್ಚಿಮ ಭಾಗ) ಬಾರ್ಡರ್ ಗಳಿಂದ ಏರ್ ಲಿಫ್ಟ್ ಮಾಡಲಾಗ್ತಿದೆ. ಈ ಪ್ರದೇಶಗಳಲ್ಲಿ ಯುದ್ದ ನಡೆಯುತ್ತಿಲ್ಲ.. ಜನಜೀವನ ಸಹಜ ಸ್ಥಿತಿಯಲ್ಲಿದೆ. ಈ ಭಾಗದಿಂದ ಏರ್ ಲಿಫ್ಟ್ ಮಾಡೋದು ಸಾಹಸನಾ ಅಂತ ಅವಲೋಕಿಸಿದಾಗ ಖಂಡಿತ ಇಲ್ಲ ಅನ್ನುತ್ತೆ ಸ್ಥಿತಿಗತಿಗಳು. ವಾಸ್ತವವಾಗಿ ಆಪತ್ತಿನಲ್ಲಿರೋರು, ಯಾವ ಕ್ಷಣದಲ್ಲಾದ್ರೂ ಜೀವವನ್ನ ಕಳೆದುಕೊಳ್ಳುವ ಆತಂಕ, ರಿಸ್ಕ್ ನಲ್ಲಿರುವವರು ಕೀವ್, ಖಾರ್ಕಿವ್ ನಗರಗಳಲ್ಲಿ ಇರುವ ಸಾವಿರಾರು ವಿದ್ಯಾರ್ಥಿಗಳು.. ಈ ನಗರಗಳಿಂದ ವಿದ್ಯಾರ್ಥಿಗಳನ್ನ ಏರ್ ಲಿಫ್ಟ್ ಮಾಡಬೇಕಾಗಿರೋದು.. ಆದ್ರೆ ಭಾರತ ಸರ್ಕಾರ ಇದಕ್ಕೆ ಮನಸ್ಸು ಮಾಡ್ತಿಲ್ಲ.. ಯುದ್ಧದ ರಣಾಂಗಣವಲ್ಲದ ಉಕ್ರೇನ್ ಗಡಿಯಿಂದ ಭಾರತೀಯರನ್ನ ಏರ್ ಲಿಫ್ಟ್ ಮಾಡಿ ಕೇಂದ್ರ ಸರ್ಕಾರ ಪುಕ್ಕಟೆ ಕ್ರೆಡಿಟ್ ಪಡೆಯುತ್ತಿದೆ.
ಏನು ಮಾಡಬಹುದು ಭಾರತ..!?
-ಪ್ಲ್ಯಾನ್ A :
-ಕೀವ್ ಟು ಖಾರ್ಕಿವ್ ಗೆ 481 ಕೀ.ಮೀ..
-ಖಾರ್ಕಿವ್ ನಿಂದ ಪೋಲೆಂಡ್ ಗೆ 1404 ಕೀ.ಮೀ..
ಸದ್ಯ ಖಾರ್ಕಿವ್ ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಲಾಕ್ ಆಗಿದ್ದಾರೆ..ಅವ್ರನ್ನ ರಷ್ಯಾ ಬಾರ್ಡರ್ ಗೆ ಕರೆಸಿಕೊಳ್ಳಬಹುದಿತ್ತು..
ಪ್ಲ್ಯಾನ್ B :
- ಖಾರ್ಕಿವ್ ನಿಂದ ರಷ್ಯಾ ಬಾರ್ಡರ್ ( ಬೆಲ್ಗೊರೊಡ್, Belgorod) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 79 ಕೀ.ಮೀ ಅಂತರ. ಒಂದು ವರೆ ಘಂಟೆ ಜರ್ನಿ..
- ರಷ್ಯಾ ಬಾರ್ಡರ್ ನಿಂದಾದ್ರೂ ಏರ್ ಲಿಫ್ಟ್ ಮಾಡಬಹುದಿತ್ತು ಭಾರತ..ಆದ್ರೆ ಉಕ್ರೇನ್ ನ ಪಶ್ಚಿಮ ಗಡಿಯಿಂದ ಏರ್ ಲಿಫ್ಟ್ ಮಾಡ್ತಿದೆ..
ಪ್ಲ್ಯಾನ್ C: ಯುದ್ಧಪೀಡಿತ ರಾಷ್ಟ್ರಗಳ ಜೊತೆ ಭಾರತದ ಪ್ರಧಾನಿ ಮಾತನಾಡಿ, ಎರಡು ರಾಷ್ಟ್ರದ ನಾಯಕರನ್ನ ಮನವೊಲಿಸಿ, ಒಂದು ಅವಧಿಯನ್ನು ನಿಗಧಿ ಮಾಡಿ, ಆ ಅವಧಿಯಲ್ಲಿ ಏರ್ ಲಿಫ್ಟ್ ಮಾಡಬಹುದು
ಪ್ಲ್ಯಾನ್ D: ರಷ್ಯಾ ಬಾರ್ಡರ್ ನಿಂದ ಭಾರತೀಯರನ್ನ ಏರ್ ಲಿಫ್ಟ್ ಅಥ್ವಾ..ಬಸ್ ಗಳ ಮೂಲಕವಾದ್ರೂ ಬೆಲ್ಗೊರೊಡ್ ಗೆ ಕರೆಸಿಕೊಳ್ಳುವ ಅನಿವಾರ್ಯತೆ ಇದೆ.
ಕೀವ್, ಖಾರ್ಕಿವ್ ನಿಂದ ಭಾರತೀಯ ರಕ್ಷಣೆಗೆ ಮೋದಿ ಸರ್ಕಾರ ಹೆದರೋದ್ಯಾಕೆ…!?
- ಭಾರತೀಯರ ಮೇಲೆ ಉಕ್ರೇನ್ ಸೇನೆಯಿಂದಲೇ ದಾಳಿಯಾಗಬಹುದೆಂದು..( ಉಕ್ರೇನ್ ಗೆ ಬೆಂಬಲಿಸಿಲ್ಲ ಎಂದು)
- ಯುದ್ಧಪೀಡಿತ ಜಾಗಕ್ಕೆ ಹೋದ್ರೆ ಭಾರತೀಯ ಯುದ್ಧ ವಿಮಾನಗಳ ಮೇಲೆ ಹಾಗೂ ಭಾರತೀಯ ಸೈನಿಕರ ಮೇಲೆ ಅಟ್ಯಾಕ್ ಆಗಬಹುದೆಂದು
- ರಷ್ಯಾ ಗಡಿಗೆ ಹೋದ್ರು, ಭಾರತೀಯ ವಿಮಾನಗಳನ್ನ ಹೊಡೆದುರಿಳಿಸಬಹುದೆಂದು… ಹಾಗೂ ಇತರೆ ವಿದೇಶಾಂಗ ನೀತಿ, ರಾಜತಾಂತ್ರಿಕ ನೀತಿ, ನಿಲುವುಗಳಲ್ಲಿ ಭಾರತದ ಪ್ರತ್ಯೇಕ ನಿರ್ಧಾರಗಳಿಂದ ಅಟ್ಯಾಕ್ ಆಗುವ ಭೀತಿ…
- ಖಾರ್ಕಿವ್ ಗೆ ಹೋಗಲು ರಾಯಭಾರಿಯ ಅಧಿಕಾರಿಗಳಿಗೆ ಧೈರ್ಯ ಇಲ್ಲದೇ ಉಕ್ರೇನ್ ತೊಲಗಿದ್ದಾರೆ.
ಅಪಾಯದಲ್ಲಿ ಸಿಲುಕಿರುವ ಭಾರತೀಯರನ್ನ ರಕ್ಷಣೆ ಮಾಡೋದು ಅನಿವಾರ್ಯ.. ರೆಸ್ಕ್ಯೂ ಮಾಡೋದು ರಿಸ್ಕಿ ಅಂತ ನಿರ್ಲಕ್ಷ್ಯ ಮಾಡಿದ್ರೆ ಸಾವಿರಾರು ಜನರ ರಕ್ತಸಿಕ್ತ ದೇಹಗಳನ್ನು ನೋಡಬೇಕಾಗುತ್ತೆ.. ಹಾಗೆ ಆಗೋದು ಬೇಡ. ದೇವರ ಕೃಪೆ ಆತರ ಆಗೋದು ಇಲ್ಲ…
ಮತ್ತೊಂದು ರಾಷ್ಟ್ರಕ್ಕೆ ನುಗ್ಗಿ ಬರುವಷ್ಟು ಶಕ್ತಿ ಇರುವ ನಮ್ಮ ಭಾರತೀಯ ಸೇನೆಗೆ, ಈ ವಿಷ್ಯ ದೊಡ್ಡದೇನಲ್ಲ.. ಹಾಗಿದ್ರೂ ಯಾಕೆ ಮನಸ್ಸು ಮಾಡ್ತಿಲ್ಲ.. ವಿದ್ಯಾರ್ಥಿಗಳ ಜೀವ ಈ ಸರ್ಕಾರಕ್ಕೆ ಮುಖ್ಯ ಆಗಿಲ್ವಾ..? ನಾಳೆ ದಿನ ಅನಾಹುತಗಳಾದ್ರೆ ಮೋದಿ ಸರ್ಕಾರವೇ ಹೊರತು ಬೇರ್ಯಾರು ಅಲ್ಲ… ( ಉದಾಹರಣೆಗೆ) ಬೆಂಗಳೂರಲ್ಲಿ ಯುದ್ಧ ಆದ್ರೆ ಬೀದರ್ ನಲ್ಲಿ ಸೇಫ್ ಇರೋರನ್ನ ರಕ್ಷಣೆ ಮಾಡಿದಂಗೆ..ಕೇಂದ್ರದ ನಡೆ ಇದೆ. ಮತ್ತೊಂದು ರಾಷ್ಟ್ರಕ್ಕೆ ನುಗ್ಗಿ ಭಾರತೀಯರನ್ನ ರಕ್ಷಣೆ ಮಾಡಿದ್ದೇವೆ. ದೇಶ, ದೇಶದ ಜನ ಮೊದ್ಲು ಎಂಬ ಲಾಜಿಕ್ ಬಳಸಿ ಚುನಾವಣೆ ಗೆಲ್ಲಬಹುದೆಂಬ ಅಲೋಚನೆಯಲ್ಲಿದೆ ಮೋದಿ ಸರ್ಕಾರ.. ಖಂಡಿತ ತಪ್ಪು ಹೆಜ್ಜೆಯನ್ನಿಡ್ತಿದೆ ಈ ಸರ್ಕಾರ..
ಡಾಕ್ಟರ್ ಆಗಬೇಕೆಂಬ ಸಾವಿರಾರು ಕನಸುಗಳನ್ನ ಕಂಡು ಆಗಸದೆತ್ತರಕ್ಕೆ ಹಾರಿ, ವಿದೇಶದಲ್ಲಿ ವ್ಯಾಸಂಗ ಮಾಡ್ತಿರುವ ಸಾವಿರಾರು ಹೃದಯಗಳ ( ವಿದ್ಯಾರ್ಥಿಗಳು) ಜೀವ, ಜೀವನ ಮುಖ್ಯ.. ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ. ನಿರ್ಲಕ್ಷ್ಯ ಬಿಟ್ಟು, ಸಾವಿರಾರು ಕನಸುಗಳನ್ನ ಉಳಿಸಬೇಕಿದೆ.