ಕರ್ನಾಟಕದಲ್ಲಿ ಅಶೋಕ್ ಕಿಂಕಾರಿಯಂತಹ ಕಿತ್ತು ತಿನ್ನುವ ರಣ ಹದ್ದುಗಳಿವೆ

✍ ಫಝಲ್ ಸಮಹಾದಿ, ಬರಹಗಾರರು

ಅದು 1993 ರ ಕಾಲಾವಧಿ ಸುಡಾನ್ ದೇಶ ಬೀಕರ ಬರಗಾಲದಿಂದ ಅಕ್ಷರಶಃ ಬಸವಳಿದ ಕಾಲಘಟ್ಟವಾಗಿತ್ತು, ಜನರಿರುವ ಸ್ಥಳದಲ್ಲಿ ಬಾಂಬ್ ಸ್ಪೋಟವಾದರೆ ಹೇಗೆ ಹೆಣಗಳು ಉರುಳುತ್ತವೋ ಆ ರೀತಿಯಲ್ಲಿ ಹಸಿವು ಬಾಯಾರಿಕೆಗಳಿಂದ ಬೀದಿಯಲ್ಲಿ ಜನರ ಹೆಣಗಳು ಉರುಳುತ್ತಿದ್ದವು. ತಿನ್ನಲು ಆಹಾರ ವಿಲ್ಲ, ಬಾಯಾರಿಕೆ ನೀಗಿಸಲು ನೀರಿಲ್ಲ, ಜೀವವೇ ಉಳಿಯುವುದು ಕಷ್ಟಕರವಾದ ಸಂದರ್ಭದಲ್ಲಿ ಜೀವನದ ಮಾತನ್ನು ಕೇಳಲೇ ಬೇಡಿ. ಅಂತಹ ಹೃದಯ ವಿಧ್ರಾವಕ ಸ್ಥಿತಿ ಸುಡಾನ್ ದೇಶದಲ್ಲಿ ನಿರ್ಮಾಣ ವಾಗಿತ್ತು. ಅಲ್ಲಿನ ಘಟನೆ ಇಡೀ ಮನುಕುಲವನ್ನೆ ತಲ್ಲಣಗೊಳಿಸುವುದಲ್ಲದೇ ಕಲ್ಲು ಹೃದಯದ ವ್ಯಕ್ತಿಯ ಕಣ್ಣಲ್ಲೂ ರಕ್ತ ಕಣ್ಣೀರು ತರಿಸುವಂತಹ ಭಯಾನಕ ಪರಿಸ್ಥಿತಿ ಉಂಟಾದಂತಹ ಕಾಲವನ್ನು ಸುಡಾನ್ ದೇಶ ಅನುಭವಿಸಿತ್ತು. ಹಸಿವಿನಿಂದ ಕಂಗೆಟ್ಟ ಈ ದೇಶದ ಮಕ್ಕಳ ದುಸ್ಥಿತಿಯನ್ನು ಶಬ್ದದಲ್ಲಿ ವರ್ಣಿಸಲು ಅಸಾಧ್ಯ. ಎಂತಹ ಕಲ್ಲು ಹೃದಯವೂ ಕರಗಿ ನೀರಾಗುವಂತಹ ಅವಸ್ಥೆ ಯಾಗಿತ್ತು. ಅಲ್ಲಿನ ಜನರ ಹಸಿವನ್ನು ನೀಗಿಸಲು ವಿಶ್ವ ಸಂಸ್ಥೆಯು ಅನ್ನದ ಕೇಂದ್ರಗಳನ್ನು ತೆರೆದು ಹಸಿದವರ ನೆರವಿಗೆ ಮುಂದಾಗಿತ್ತು. ಈ ಸಂದರ್ಭದಲ್ಲಿ ನಡೆದ ಒಂದು ಘಟನೆ ಇಡೀ ಮನುಕುಲವನ್ನೇ ನೋವಲ್ಲಿ ಮುಳುಗಿಸಿ ಸಂಕಟದಲ್ಲಿ ತೇಲಿಸಿದರೆ, ಇದಕ್ಕೆ ಸಾಕ್ಷಿಯಾಗಿದ್ದ ಆ ವ್ಯಕ್ತಿಯ ಪ್ರಾಣ ಪಕ್ಷಿಯನ್ನೇ ಹಾರಿಸಿ ಬಿಟ್ಟಿತ್ತು.

ಆಹಾರ ವಿಲ್ಲದೆ ಬಸವಳಿದು ಅನ್ನಕ್ಕಾಗಿ ಅಂಗಲಾಚುತ್ತಾ ಸೂಡಾನ್ ಬೀದಿಯಲ್ಲೊಂದು ಪುಟ್ಟ ಮಗು ತೆವಳುತ್ತಾ ವಿಶ್ವಸಂಸ್ಥೆ ಹಾಕಿದ್ದ ಗಂಜಿ ಕೇಂದ್ರದ ಕಡೆಗೆ ಹೊರಟಿತ್ತು. ಸಂಪೂರ್ಣ ನಿಶ್ಯಕ್ತಿಯಿಂದ ಬಳಲಿದ್ದ ಆ ಮಗು ಗಂಜಿ ಕೇಂದ್ರವನ್ನು ಮುಟ್ಟುವುದು ಅನುಮಾನ ವಾಗಿತ್ತು, ಇದೇ ಸಮಯಕ್ಕೆ ಸರಿಯಾಗಿ ಹದ್ದೊಂದು ಹೊಂಚು ಹಾಕಿ ಕುಳಿತು, ಅಸ್ತಿ ಪಂಜರದಂತಿರುವ ಈ ಮಗು ಸಾಯುತ್ತದೆ ನನಿಗೆ ಆಹಾರ ಸಿಗುತ್ತದೆ ಎಂದು ಎದುರು ನೋಡುತ್ತಾ ಕುಳಿತಿತ್ತು.

ಸುಮಾರು 20 ನಿಮಿಷಗಳ ಕಾಲ ಮಗು ಮತ್ತು ಹದ್ದು ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಆಹಾರಕ್ಕಾಗಿ ಹವಣಿಸುತ್ತಿದ್ದವು.ಈ ದೃಶ್ಯವನ್ನು ದಕ್ಷಿಣ ಆಫ್ರಿಕಾದ ಖ್ಯಾತ ಪತ್ರಕರ್ತ ಕೆವಿನ್ ಕಾರ್ಟರ್ ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದರು. ನಂತರದ ಕೆಲವು ದಿನಗಳ ಬಳಿಕ “ದ ವಲ್ಚರ್ ಆ್ಯಂಡ್ ದಿ ಲಿಟಲ್ ಗಲ್ಚರ್” ಎನ್ನುವ ಶೀರ್ಷಿಕೆಯಲ್ಲಿ ಅದನ್ನು ಪ್ರಕಟನೆ ಮಾಡಿದನು. ಈ ಪತ್ರಕರ್ತ ತಾನು ತೆಗೆದ ಈ ಫೋಟೋದ ಬಗ್ಗೆ ತುಂಬಾ ಹೆಮ್ಮೆಪಟ್ಟುಕೊಂಡನು. ಆ ಚಿತ್ರವೂ ಇಡೀ ಮನು ಕುಲವನ್ನೇ ಅಣುಕಿಸುವಂತಿತ್ತು. ಆ ಚಿತ್ರವನ್ನು ಕಂಡ ಜಗತ್ತು ಸುಡಾನ್ ದೇಶದ ಪರಿಸ್ಥಿತಿಯನ್ನು ಕಂಡು ಕಣ್ಣೀರು ಹರಿಸಿ ಅಪಾರ ಪ್ರಮಾಣದಲ್ಲಿ ಸಹಾಯ ಹಸ್ತವನ್ನು ಆ ದೇಶಕ್ಕೆ ನೀಡಿ ಮಾನವೀಯತೆ ಮೆರೆದರು. ಅಲ್ಲಿನ ವಾಸ್ತವ ಸ್ಥಿತಿಯನ್ನು ಜಗತ್ತಿನ ಮುಂದೆ ಪ್ರಸ್ತುತ ಪಡಿಸಿದ ಪತ್ರಕರ್ತ ಕೇವಿಯನ್ ಮಾರ್ಟರ್ ಗೆ ಪತ್ರಿಕೋದ್ಯಮದ ಪುಲಿಟ್ಜೆರ್ ಪ್ರಶಸ್ತಿ ದೊರೆಯಿತು. ನಂತರ ಹಲವಾರು ಮಂದಿ ಈ ಪತ್ರಕರ್ತ ನಿಗೆ ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.

ಆದರೆ ಕೊನೆಗೆ ಬಂದ ಒಂದು ಕರೆಯಲ್ಲಿ ಆಕಡೆಯಿಂದ ಕೇಳಿದ ಪ್ರಶ್ನೆಯು ಜಗತ್ತಿನ ಹೃದಯವನ್ನು ನಾಟಿತು ಮತ್ತು ಪತ್ರಕರ್ತ ಪ್ರಾಣ ಕಳೆದುಕೊಳ್ಳುವಂತಹ ಘಟನೆಗೂ ಸಾಕ್ಷಿಯಾಯಿತು.
ಈ ಕರೆ ಮಾಡಿದ ವ್ಯಕ್ತಿಯು ಪತ್ರಕರ್ತ ಕೇವಿಯನ್ ಮಾರ್ಟರ್ ನೊಂದಿಗೆ “ಸರ್,ಅಂದು ನೀವು ಸುಡಾನ್ ನಲ್ಲಿ ಹಸಿದ ಮಗುವಿನ ಫೋಟೋ ತೆಗೆದಿರಲ್ವಾ, ನಂತರ ಆ ಮಗು ಏನಾಯಿತು? ತನಗೆ ಬೇಕಾದ ಆಹಾರವನ್ನು ಪಡೆಯಿತೆ ಅಲ್ಲ ಹದ್ದಿಗೆ ಆಹಾರ ವಾಯಿತೆ ?
ಅದಕ್ಕೆ ಪತ್ರಕರ್ತ ಇಲ್ಲ, ಆ ಮಗು ಏನಾಯಿತು ಎಂದು ನನಿಗೆ ಗೊತ್ತಿಲ್ಲ, ನನ್ನ ವಿಮಾನ ಹೊರಡಲು ಸಮಯ ವಾದ್ದರಿಂದ ನನಗೆ ಅಲ್ಲಿಂದ ಬೇಗಾ ಬರಬೇಕಾಯಿತು ಎಂದು ಕೆವಿನ್ ಮಾರ್ಟರ್ ಉತ್ತರ ‌ನೀಡಿದ.

ಅದಕ್ಕೆ ಆ ಕಡೆಯಿಂದ

” ಓಹ್ ಅಲ್ಲಿದ್ದದ್ದು ಒಂದು ಹದ್ದಲ್ಲ ಬದಲಿಗೆ ಎರಡು ಹದ್ದುಗಳಿದ್ದವೂ,ಒಂದು ಹದ್ದು ತನ್ನ ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿದ್ದರೆ ಇನ್ನೊಂದು ಹದ್ದು ಕೈಯಲ್ಲಿ ಕ್ಯಾಮೆರಾ ಹಿಡಿದು ಫೋಟೋ ತೆಗೆಯುತ್ತಲಿತ್ತು” ಎಂದು ಹೇಳಿದ , ಅಲ್ಲಿಗೆ ಫೋನ್ ಕರೆ ಕಟ್ ಆಯಿತು. ಇದಾದ ಮೂರು ತಿಂಗಳಲ್ಲಿ ಕೆವಿನ್ ಕಾರ್ಟರ್ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡನು, ಈತನಿಗೆ 33 ವರ್ಷ ವಯಸ್ಸಾಗಿತ್ತು.

ಈ ಘಟನೆಯ ಸಾರಾಂಶ ಏನೆಂದರೆ ಎಲ್ಲವೂ ಸ್ವಾರ್ಥಕ್ಕಾಗಿ ನಡೆದ ಘಟನೆಗಳಾಗಿದ್ದವೂ. ಮಗು ತನ್ನ ಆಹಾರಕ್ಕಾಗಿ ಗಂಜಿ ಕೇಂದ್ರದ ಕಡೆಗೆ ತೆವಲುತ್ತಾ ಸಾಗುತ್ತಿತ್ತು, ಹದ್ದು ತನ್ನ ಆಹಾರಕ್ಕಾಗಿ ಮಗುವಿಗೆ ಹೊಂಚು ಹಾಕಿತ್ತು, ಪತ್ರಕರ್ತ ಆ ಮಗುವನ್ನು ಹದ್ದುವಿನ ಬಾಯಿಂದ ರಕ್ಷಿಸಿ ಗಂಜಿ ಕೇಂದ್ರದ ಕಡೆಗೆ ಕರೆದೊಯ್ಯದೆ ತನ್ನ ಆಹಾರಕ್ಕಾಗಿ ಆ ಘಟನೆಯನ್ನು ಕ್ಲಿಕ್ಕಿಸುತ್ತಿದ್ದ.

ಈ ಘಟನೆಯನ್ನು ಈಗ ಯಾಕೆ ನೆನಪಿಸುತ್ತಿದ್ದೇನೆಂದರೆ ಈಗ ಕರ್ನಾಟಕದಲ್ಲಿ ಹಿಜಾಬ್ ಕುರಿತಾಗಿ ಪ್ರಸ್ತುತ ನಡೆಯುತ್ತಿರುವ ಘಟನಾವಳಿಗಳು ಇದೇ ರೀತಿ ಯಲ್ಲಾಗಿದೆ. ವಿಶೇಷವಾಗಿ ನಿನ್ನೆ ನಡೆದ ಘಟನೆ ಹಿಜಾಬ್ ಧರಿಸಿಕೊಂಡು ಬಂದ ಅಪ್ರಾಪ್ತ ಮುಸ್ಲಿಂ ವಿಧ್ಯಾರ್ಥಿನಿಯನ್ನು ಪತ್ರಕರ್ತನ ವೇಶದಲ್ಲಿರುವ ರಾಕ್ಷಸ ಸ್ವಭಾವದ ಮಾಧ್ಯಮ ವರದಿಗಾರ ಅಶೋಕ್ ಕಿಂಕಾರಿ ಎಂಬವನು ಅಟ್ಟಾಡಿಸಿಕೊಂಡು ಹೋಗಿ ವೀಡಿಯೋ ಚಿತ್ರೀಕರಣ ಮಾಡಿ ಹದ್ದಿನ ಮತ್ತು ಕೆವಿನ್ ಮಾರ್ಟರ್ ನ ಕಥೆಯನ್ನು ನೆನಪಿಸಿದ್ದ, ಈ ಪತ್ರಕರ್ತ ತನಗೂ ಪುಲಿಟ್ಜೆರ್, ಅಥವಾ ಪದ್ಮಶ್ರೀ,ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ನನ್ನನ್ನು ಹುಡುಕಿಕೊಂಡು ಬರಬಹುದೆಂದು ಎಣಿಸಿರಬಹುದು ಎಂದು ನಾವು ಆಲೋಚಿಸಿದರು ತಪ್ಪಲ್ಲ, ಕಾರಣ ಇಂದು ನಮ್ಮ ರಾಜ್ಯ ಮತ್ತು ರಾಷ್ಟ್ರವನ್ನು ಆಳುತ್ತಿರುವವರು ಅಂತಹ ಮನಸ್ಥಿತಿ ಉಲ್ಲವರಾಗಿದ್ದಾರೆ. ಬಟ್ಟೆ ಬಿಚ್ಚಿ ತನ್ನ ಬೆತ್ತಲೆ ದೇಹವನ್ನು ಜಗತ್ತಿನ ಮುಂದೆ ತೋರಿಸಿದವಳಿಗೆ ಪದ್ಮಶ್ರೀ ಪ್ರಶಸ್ತಿ Z+ ಭದ್ರತೆ ಒದಗಿಸಿದ ಈ ಸರ್ಕಾರ ಮೈ, ಕೈ, ತಲೆ ಯನ್ನು ಮುಚ್ಚುವ ಮುಸ್ಲಿಂ ವಿಧ್ಯಾರ್ಥಿನಿಯರನ್ನು, ಶಿರವಸ್ತ್ರ ಧರಿಸದಂತೆ ಬೆದರಿಸಿ ಪ್ರಾಂಶುಪಾಲರು ಮತ್ತು ಶಿಕ್ಷಕರ ಮೂಲಕ ಶಾಲೆಯಿಂದ ಮರಳಿ ಮನೆಗೆ ಕಳುಹಿಸುತ್ತಿದೆ. ಶಿಕ್ಷಣದಿಂದ ಮುಸ್ಲಿಂ ವಿಧ್ಯಾರ್ಥಿನಿಯರನ್ನು ವಂಚಿಸುತ್ತಿದೆ. ಇಲ್ಲಿ ಹಸಿದ ಮಗು ಹಿಜಾಬ್ ಧರಿಸಿದ ಮುಸ್ಲಿಂ ವಿಧ್ಯಾರ್ಥಿನಿಯರಾದರೆ ಹದ್ದಿನ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ.
ಈ ಘಟನೆಗಳನ್ನು ಮಾಧ್ಯಮಗಳು ತಮ್ಮ ಟಿಆರ್‌ಪಿ ಹೆಚ್ಚಳಕ್ಕಾಗಿ ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳು ಹಿಜಾಬ್ ಕುರಿತಾದ ವರದಿಗಳಲ್ಲಿ ತಮ್ಮ ಆಹಾರಕ್ಕಾಗಿ ಹದ್ದುವಿನ ಮತ್ತು ಕೆವಿನ್ ಮಾರ್ಟರ್ ನ ಕೆಲಸವನ್ನು ಮಾಡುತ್ತಲಿದೆ.
ತನ್ನ ಕೃತ್ಯದಿಂದ ಪಶ್ಚಾತ್ತಾಪ ಹೊಂದಿ ಕೊನೆಗೆ ತನ್ನ ಜೀವನಕ್ಕೆ ನಾಂದಿ ಹಾಡಿದ ಕೆವಿನ್ ಮಾರ್ಟರ್ ನ ಪರಿಸ್ಥಿತಿಯೆ ಇವರಿಗೂ ಬರಲಿದೆ, ಕಾಲವೂ ಸಾಕ್ಷಿಯಾಗಲಿದೆ.

Leave a comment