ಸೂರು ಕೊಟ್ಟವರನ್ನು ಕೊಂದರು,ಉಸಿರು ಕೊಟ್ಟವರನ್ನೂ ಮರೆತರೇ?

– ಜೈನುಲ್ ಅಕ್ಬರ್.ಬಿ ಕಡೇಶಿವಾಲಯ “ಯಾರು ಒಂದು ಜೀವವನ್ನು ರಕ್ಷಿಸುತ್ತಾನೋ ಆತ ಒಂದು ಜಗತ್ತನ್ನೇ ರಕ್ಷಿಸಿದಂತೆ” ಎಂಬ ಯಹೂದಿ ಧರ್ಮದ ಸೂಕ್ತವೊಂದನ್ನು ಭಾವುಕರಾಗಿ ಪಟಿಸುತ್ತಾ ಫ್ಯಾಕ್ಟರಿಯ ನೌಕರರು ತಮ್ಮ ಮಾಲಕನಿಗೆ ಉಂಗುರವೊಂದನ್ನು ಕಾಣಿಕೆಯಾಗಿ ನೀಡುತ್ತಾರೆ.ಮಾಲಕನ ಕಣ್ಣಾಲಿಗಳು ತುಂಬಿ ಬಿಡುತ್ತವೆ. “ಇಲ್ಲ ..ನಾ ತಪ್ಪು ಮಾಡಿಬಿಟ್ಟೆ,ನನಗೆ ಇನ್ನೂ ಜಾಸ್ತಿ ಹಣ ಮಾಡಬಹುದಿತ್ತು. ಆ ಹಣದಿಂದ ಇನ್ನೂ ಒಂದಿಷ್ಟು ಜೀವಗಳನ್ನು ಉಳಿಸಬಹುದಿತ್ತು.ನನ್ನ ಈ ಕಾರಿನ ಬದಲು ಹತ್ತು ಜನರನ್ನು ಕಾಪಾಡಬಹುದಿತ್ತು.ನನ್ನ ಕೈಯಲ್ಲಿರುವ ಬಂಗಾರದ ಉಂಗುರವನ್ನು ಕೊಟ್ಟಿದ್ದರೆ ಇಬ್ಬರನ್ನು..ಕನಿಷ್ಟ ಒಬ್ಬರನ್ನು ಬದುಕಿಸಬಹುದಿತ್ತು. ಅಯ್ಯೋ ..ನನ್ನಿಂದ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ..”ಅನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾನೆ.ಇಲ್ಲ ನಿಮ್ಮಿಂದಾಗಿ ನಾವಿಷ್ಟು … Continue reading ಸೂರು ಕೊಟ್ಟವರನ್ನು ಕೊಂದರು,ಉಸಿರು ಕೊಟ್ಟವರನ್ನೂ ಮರೆತರೇ?

ಹಿಟ್ಲರನನ್ನು ವರ್ಷದ ವ್ಯಕ್ತಿಯಾಗಿ ಸಾರಿತ್ತು ಟೈಮ್ಸ್ ಪತ್ರಿಕೆ!

ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ!ಭಾಗ:-3 – ಮಹಮ್ಮದ್ ರಿಯಾಝ್(ಪತ್ರಿಕೋದ್ಯಮ ವಿದ್ಯಾರ್ಥಿ -ಮಂಗಳೂರು ವಿಶ್ವ ವಿದ್ಯಾನಿಲಯ) ಜರ್ಮನ್ ಹಿಟ್ಲರ್ ಎಂಬ ಸರ್ವಾಧಿಕಾರಿಯ ಅಧೀನದಲ್ಲಿತ್ತು. ಇಡೀ ಜರ್ಮನ್ ನ ಬಹುಸಂಖ್ಯಾತ ಸಮುದಾಯ ಹಿಟ್ಲರ್ ನ ಮಾತಿನ ಮೋಡಿಗೆ ಬಲಿಯಾಗಿತ್ತು. ಜನ ಅವನನ್ನು ದೇವ ಮಾನವನಂತೆ ಬಿಂಬಿಸಿ ಅವನ ಕ್ರೂರತೆ, ಅವನ ದ್ವೇಷದ ಚಿಂತನೆಗೆ ದೇಶ ಸೇವೆಯ ಪಟ್ಟ ನೀಡತೊಡಗಿದ್ದರು. ಹಿಟ್ಲರ್ ಅಲ್ಲಿನ ಜನರ ಮನಸ್ಸಿನಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷದ, ಭಯದ, ಆರ್ಯ ಜನಾಂಗದ ಶ್ರೇಷ್ಠತೆಯ ಅಮಲನ್ನು ಬಿತ್ತುವಲ್ಲಿ ಯಶಸ್ವಿಯಾಗಿದ್ದ. ಮದವೇರಿದ ಆನೆಯಂತೆ ಅಲ್ಲಿನ ಜನರು ತಮಗೆ ತಾವೇ ತಿಳಿಯದಂತೆ ಇತಿಹಾಸದ ಕ್ರೂರ ರಕ್ತ … Continue reading ಹಿಟ್ಲರನನ್ನು ವರ್ಷದ ವ್ಯಕ್ತಿಯಾಗಿ ಸಾರಿತ್ತು ಟೈಮ್ಸ್ ಪತ್ರಿಕೆ!

ಬುಲೆಟ್ಟುಗಳು ನುಣುಪಾಗಿಲ್ಲ ಅಮ್ಮ

ಬುಲೆಟ್ಟುಗಳು ನೋವು ತರಿಸುವಷ್ಟುನುಣುಪಾಗಿಲ್ಲ,ಅಮ್ಮಾಟಿಯರ್ ಗ್ಯಾಸ್ ಗಳೇನು ಮೂಗಿಗೆ ಬಡಿಯುವಷ್ಟು ಶಕ್ತವಾಗಿಲ್ಲ ಅಮ್ಮ ಸುರಿಯುವ ರಕ್ತದಿ ಕೆಂಪಾದ ಪಾದಮೈ ತುಂಬೆಲ್ಲಾ ಬೆವರಮಳೆಏದುಸಿರು ಬಿಡುತ್ತಾ ಓಡಿ ಬಂದ ಪೋರನಸಾಹಸದ ತುಸು ಹೆಮ್ಮೆಯಿಂದಲೇಅವನತ್ತ ಧಾವಿಸಿದಳು ನೋವೇನೋ?ಅಂಬೆಗಾಲಿಡುವಾಗ “ಪ್ಯಾಲೆಸ್ತೀನ್ ನಮ್ಮದು “ಎಂದವಳು ನೀನೇ ಅಮ್ಮಾಪ್ಯಾಂಟು ಹಾಕಲು ಬರದಾಗಹೊರಗೋಡಿ ಎಸೆದ ಕಲ್ಲುಅವರ ನೆತ್ತಿ ಒಡೆದದ್ದು ನೆನಪಿದೆ ಅಮ್ಮಾ ಈಗ ಹದಿಮೂರರ ಯುವಕ ನಾನುಬುಲೆಟ್ಟಿನ ನೋವನುಟಿಯರ್ ಗ್ಯಾಸಿನ ಅಮಲನುತಡೆಯುವ ಶಕ್ತಿ ಇದೆ ಅಮ್ಮಾ ಯಾಕಮ್ಮ ತೆಗೆದಿಲ್ಲ ಬುಲೆಟ್ಟನ್ನು?ಕಸಕ್ಕನೆ ಕಸಿದುಸತ್ತೇ ಹೋದೆನೆನ್ನುವಂತೆನೋವನುಂಗಿ‘ಅಮ್ಮಾ’ ಎಂದು ಚೀರುತ್ತಾಚಿಕ ಚಿಕನೇ ಬುಲೆಟ್ಟನ್ನು ಹೊರಗೆಳೆದ ಪೋರ ಬ್ಯಾಂಡೇಜು ಹಾಕು ಮಗನೆರಕ್ತ ಚೆಲ್ಲಿತು, ಜೋಕೆ !ಮಾಡಲಿನ್ನು ಬಾಕಿಯಿದೆ ಕೆಲಸುಗಳು … Continue reading ಬುಲೆಟ್ಟುಗಳು ನುಣುಪಾಗಿಲ್ಲ ಅಮ್ಮ

ಕಥಾ ಮಂಥನ

ಕನ್ನಡಿಬ್ಲಾಗ್ ಅರ್ಪಿಸುತ್ತಿರುವ ಕಥಾ ಮಂಥನ(ಕಥಾ ಬರಹಗಾರರಿಗೊಂದು ಕಥಾಸ್ಪರ್ಧೆ) ನಾಡಿನ ಎಲ್ಲಾ ಆಸಕ್ತಿ ಕಥಾ ಬರಹಗಾರರು ಈ ಸುವರ್ಣಾವಕಾಶದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರಥಮ ಬಹುಮಾನ : 1000/- ಹಾಗೂ ಪ್ರಮಾಣ ಪತ್ರ ದ್ವಿತೀಯ ಬಹುಮಾನ : 500/- ಹಾಗೂ ಪ್ರಮಾಣ ಪತ್ರ ಸೂಚನೆಗಳು :- ಕಥೆಯ ಉಪಸಂಹಾರ ಸ್ವಾರಸ್ಯಕರ ಸಂದೇಶದೊಂದಿರಬೇಕು. ಕಥೆಯು 1500 ಪದಗಳಿಗಿಂತ ಹೆಚ್ಚು ಮೀರಬಾರದು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಆದ್ಯತೆ. ಮೇ 23 ರ ಒಳಗೆ ನೀವು ಬರೆದ ಕಥೆಯನ್ನು ಕೆಳಗಿನ ಇಮೇಲ್ ಲಿಂಕ್ ಗೆ ಕಳಿಸಬೇಕು.kannadiblog12@gmail.com ಮೇ 30 ರಂದು ಸ್ಪರ್ಧೆಯ ಫಲಿತಾಂಶವನ್ನು ಕನ್ನಡಿ ಫೇಸ್ … Continue reading ಕಥಾ ಮಂಥನ

ಫೆಲಸ್ತೀನ್ ಹೋರಾಟಗಾರರಿಗೆ ಅಜೀವ ಸ್ಪೂರ್ತಿ

– ಅಶ್ವಾನ್ ಸಾದಿಕ್ ಫೆಲಸ್ತೀನ್ ಅಥವಾ ಫಲಸ್ತೀನಿಯರು ಎಂದೊಡನೆ ಜಗತ್ತಿಗೆ ಭಯೋತ್ಪಾದಕ ರಾಷ್ಟ್ರ, ಹಿಂಸಾವಾದಿಗಳು, ಜಗತ್ತಿನ ಶಾಂತಿಹರಣ ಮಾಡುವುದಕ್ಕಾಯೇ ಹುಟ್ಟಿಕೊಂಡಿರುವ ಶತ್ರುಗಳು ಎಂಬ ಮನಸ್ಥಿತಿಯೊಂದು ಮೂಡಿ ಬಿಟ್ಟಿದೆ. ಆದರೆ ವಾಸ್ತವದಲ್ಲಿ ನಿರಂತರ ಬಾಂಬುಗಳ ದಾಳಿಯ ಶಬ್ದಗಳು, ದಾಳಿಗಳಿಂದ ಸಂಪೂರ್ಣ ಅಥವಾ ಭಾಗಶಃ ಧ್ವಂಸಗೊಂಡ ಕಟ್ಟಡಗಳನ್ನೊಳಗೊಂಡ ದೇಶವಾಗಿದೆ ಫೆಲಸ್ತೀನ್. ಇಸ್ರೇಲ್ ಎಂಬ ಜಾಗತಿಕ ಭಯೋತ್ಪಾದಕ ಶಕ್ತಿಯ ವಿರುದ್ಧ ತನ್ನ ಮನೋಬಲವನ್ನು ಉಪಯೋಗಿಸಿ ಹೋರಾಟ ಚಳುವಳಿಗಳನ್ನು ನಡೆಸುತ್ತಿರುವ ರಾಷ್ಟ್ರವಾಗಿದೆ ಫೆಲಸ್ತೀನ್. ಫೆಲಸ್ತೀನಿಗಿರುವ ಇತಿಹಾಸದ ಪುಟ ತೆರೆದು ನೋಡುವುದಾದರೆ 30ರ ದಶಕದಲ್ಲಿ ಜರ್ಮನಿಯಲ್ಲಿ ನಡೆದ ಭಯಂಕರ ಜನಾಂಗೀಯ ಹತ್ಯೆಯ ನಿರಾಶ್ರಿತ ಜನರಿಗೆ ನಾಡು ಕಟ್ಟಿಕೊಟ್ಟು, ಒಂದು … Continue reading ಫೆಲಸ್ತೀನ್ ಹೋರಾಟಗಾರರಿಗೆ ಅಜೀವ ಸ್ಪೂರ್ತಿ

ಗಾಳಿಗೋಪುರ

ಆತ್ಮನಿರ್ಭರತೆಯೆಂಬಗಾಳಿ ಗೋಪುರಆತ್ಮವಂಚನೆಯನ್ನಷ್ಟೆಸಮ್ಮಾನಿಸಿತು. ಭಾರತ್ ಮಾತಾಕೀಜೈಸಿದಳೋ ಇಲ್ಲವೋಮಕ್ಕಳಂತೂ ಅನಾಥರಾದರು. ಜೈ ಶ್ರೀರಾಂ ಎಂದುಕಿರುಚಿದ ವಾನರರುಮರ್ಯಾದಾ ಪುರುಷೋತ್ತಮನಮಾನ ಕಳೆದರು. ದನಗಳ ರಕ್ಷಣೆಯಬೀದಿ ರೌಡಿಗಳುಜನಗಳ ರಕ್ಷಣೆಗೆನಾಪತ್ತೆಯಾದರು. ನಾವೆಲ್ಲ ಹಿಂದುನಾವೆಲ್ಲ ಒಂದೆಂದ ಮಂದಿ,ದವಾಯಿ-ದಫನಿಗೂಬೆನ್ನು ತಿರುಗಿಸಿದರು. ಪ್ರಾಣವಾಯು ನೀಡಲುಮುಂದೆ ಬಂದ ಅದಾರೋಅನ್ಯ ಅರಬ-ಅರಬೇತರಮನುಷ್ಯ ಪ್ರಾಣಿಗಳು. ಮಹಾಮಾರಿ ಇಂದೋನಾಳೆಯೋತೊಲಗಬಹುದೆಂಬನಮ್ಮೆಲ್ಲರ ನಿರೀಕ್ಷೆ. ಆದರೆ ದೇಶಪ್ರೇಮಿಗಳಿಗಂತೂಈ ಕೋಮು ವೈರಸ್ನಿತ್ಯ ಪರೀಕ್ಷೆ..! – ಆರ್ ಕೆ Continue reading ಗಾಳಿಗೋಪುರ

ಈ ಸಂದಿಗ್ಧತೆಯಲ್ಲಾದರೂ ಧರ್ಮಾಂಧತೆಯೆಂಬ ಮಾನಸಿಕ ರೋಗದಿಂದ ಹೊರ ಬನ್ನಿ- ತೇಜಸ್ವಿ ಸೂರ್ಯ ಮತ್ತು ಬಿಜೆಪಿಯ ಶಾಸಕರಿಗೆ ‘ಕನ್ನಡಿ’ಯ ಕಳಕಳಿ

ದೇಶವು ಕೋವಿಡ್ -19 ರ 2ನೇ ಅಲೆಯ ಸಂಕಷ್ಟದಲ್ಲಿ ಮುಳುಗಿಹೋಗಿದೆ. ಜನಸಾಮಾನ್ಯರು ದಿಕ್ಕು ತೋಚದಂತಹ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ಇಂದು ಶವಗಳ ರಾಶಿ ಕಂಡು ಕುಟುಂಬಗಳ ರೋಧನ ಭುಗಿಲೇಳುತ್ತಿದೆ. ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರಕಾರದ ವರ್ತನೆ ಇಲ್ಲಿ ನೋಡಲು ಬಲುಭೀಕರವಾಗಿ ಕಾಣುತ್ತಿದೆ. ಆಮ್ಲಜನಕ ಪೂರೈಕೆಯಲ್ಲಿ ಕೊರತೆ, ವೆಂಟಿಲೇಟರ್ ಕೊರತೆ, ಆಸ್ಪತ್ರೆಯಲ್ಲಿ ಬೆಡ್ ಕೊರತೆ, ಇವೆಲ್ಲವನ್ನೂ ಪೂರೈಕೆ ಮಾಡಬೇಕಾದ ಸರ್ಕಾರ ರಾಜಕೀಯದ ಜೊತೆ ಕೋಮು ಬೇಳೆಯನ್ನು ಬೇಯಿಸುವುದರಲ್ಲಿ ತಲ್ಲೀಣವಾಗಿರುವುದು ಕಂಡುಬರುತ್ತಿದೆ. ಇದಕ್ಕೆ ಸೂಕ್ತ ಉದಾಹರಣೆಯಾಗಿದೆ ನಿನ್ನೆ ನಡೆದ ಬೆಡ್ ಬ್ಲಾಕಿಂಗ್ ಹಗರಣದ ಕುರಿತಾದ ಸಂಸದ ತೇಜಸ್ವಿಯವರ ನಡವಳಿಕೆ.ದೇಶದಾದ್ಯಂತ … Continue reading ಈ ಸಂದಿಗ್ಧತೆಯಲ್ಲಾದರೂ ಧರ್ಮಾಂಧತೆಯೆಂಬ ಮಾನಸಿಕ ರೋಗದಿಂದ ಹೊರ ಬನ್ನಿ- ತೇಜಸ್ವಿ ಸೂರ್ಯ ಮತ್ತು ಬಿಜೆಪಿಯ ಶಾಸಕರಿಗೆ ‘ಕನ್ನಡಿ’ಯ ಕಳಕಳಿ

ಯುವ ಭಾರತ ಮತ್ತು ಅದರ ವರಾತ

– ಯೋಗೇಶ್ ಮಾಸ್ಟರ್ ಅಧ್ಯಾಯ -01ಸಮಸ್ಯೆಗಳದ್ದೊಂದು ಸ್ಥೂಲ ಪಟ್ಟಿಯಲ್ಲಿಭಾರತ ನರಳುತ್ತಿದೆ. ತೀವ್ರ ನಿಗಾ ಘಟಕದಲ್ಲಿ ಭಾರತ ನರಳುತ್ತಿದೆ. ಇನ್ನು ಯುವಭಾರತವಂತೂ ತೀರಾ ರೋಗಗ್ರಸ್ಥವಾಗಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಭಾರತೀಯ ಸಮಾಜದ ಆರೋಗ್ಯವು ಗಂಭೀರವಾಗಿ ಕ್ಷೀಣಿಸುತ್ತದೆ.ಯುವ ಸಮೂಹದ ಮಾನಸಿಕ ಮತ್ತು ಸಾಮಾನ್ಯ ಆರೋಗ್ಯದ ಬಗ್ಗೆ ನಿಜಕ್ಕೂ ಎಚ್ಚರಿಕೆಯ ಘಂಟೆ ನಮ್ಮ ಭಾರತೀಯ ಸಮಾಜದಲ್ಲಿ ಮೊಳಗುತ್ತಿದೆ. ಆ ಸದ್ದು ಕಿವಿಗೆ ಬೀಳದಂತೆ ಅನೇಕಾನೇಕ ವಿಷಯಗಳು ಗಲಾಟೆ ಮಾಡುತ್ತಿವೆ. ಯುವ ಭಾರತಕ್ಕೆ ವಕ್ಕರಿಸಿರುವ ಅಪಾಯದ ಬಗ್ಗೆ ಕೂಡಲೇ ಅಗತ್ಯವಾದ ಎಚ್ಚರಿಕೆಯ ಕ್ರಮವನ್ನು ಈಗ ತೆಗೆದುಕೊಳ್ಳದೇ ಹೋದರೆ ಇನ್ನು ಹತ್ತು ವರ್ಷಗಳಲ್ಲಿ ಈಗ ನಾವು ಯಾವ … Continue reading ಯುವ ಭಾರತ ಮತ್ತು ಅದರ ವರಾತ

ಮುಂದುವರೆಯುತ್ತಿರುವ ಕೊರೋನಾ ತಾಂಡವ : ಜನರ ಪಾಡಿಗೆ ಎಷ್ಟು ಒಳಿತು? ಎಷ್ಟು ಕೆಡುಕು?

– ಹರ್ಶದ್ ಸುನ್ನತ್ ಕೆರೆ ಜನರಲ್ಲಿ ಭಯ ಭೀತಿ ಹುಟ್ಟಿಸುತ್ತಿರುವ ಕೊರೊನಾ ಎಂಬ ಸಾಂಕ್ರಾಮಿಕ ರೋಗ ಪ್ರಪಂಚದ 188 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಬಂದ ಬಾಹುವನ್ನು ಚಾಚಿ ಲಕ್ಷಾಂತರ ಜನರ ಪ್ರಾಣ ಹೀರಿದೆ. ತನ್ನ ಅಸ್ತಿತ್ವವನ್ನು ಎಲ್ಲೆಡೆ ಹರಡಿಸುತ್ತಿದೆ. ಲಾಕ್ ಡೌನ್,ಕರ್ಫ್ಯೂ, ಸೀಲ್ ಡೌನ್ ನಂತಹ ಎಷ್ಟೇ ಜಾಗರೂಕತೆಯ ಕ್ರಮ ಕೈಗೊಂಡರೂ ಎಲ್ಲವನ್ನು ಮೀರಿ ಪಸರಿಸುತ್ತಿದೆ. ಜನರ ಜೀವ, ಜೀವನ, ಪ್ರಪಂಚದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಸಾವು ನೋವಿನ ಕೂಪಕ್ಕೆ ತಳ್ಳಿಬಿಟ್ಟಿದೆ. ಎಷ್ಟೋ ಜನರು ತಿನ್ನಲು ಅಸಾಧ್ಯವಾದ ಪರಿಸ್ಥಿತಿಗೆ ನೂಕಿಬಿಟ್ಟಿದೆ. ದೇಶವು ಕೊರೊನಾ ಎಂಬ ಮಹಾಮಾರಿಯ ಇಕ್ಕಟ್ಟಿನ ಸ್ಥಿತಿಯಿಂದ … Continue reading ಮುಂದುವರೆಯುತ್ತಿರುವ ಕೊರೋನಾ ತಾಂಡವ : ಜನರ ಪಾಡಿಗೆ ಎಷ್ಟು ಒಳಿತು? ಎಷ್ಟು ಕೆಡುಕು?