ಮತೀಯವಾದಿ ಭಾಷೆಯಲ್ಲಿರುವ ಎನ್ ಇ ಪಿ – 2020ನ್ನು ಜಾರಿಗೊಳಿಸಬಾರದು

– ಸಿದ್ದರಾಮಯ್ಯ(ಮಾಜಿ ಮುಖ್ಯಮಂತ್ರಿಗಳು – ಕರ್ನಾಟಕ ಸರಕಾರ) ಕೊರೋನಾ ಸಾಂಕ್ರಾಮಿಕ ಕಾರಣಕ್ಕೆ ಶೈಕ್ಷಣಿಕ ಚಟುವಟಿಕೆಗಳು ಸೇರಿ ಆಡಳಿತ ವ್ಯವಸ್ಥೆಯೇ ಸ್ಥಗಿತಗೊಂಡಿರುವ ಹೊತ್ತಿನಲ್ಲಿ ಸರ್ಕಾರ ತರಾತುರಿಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ಅನುಷ್ಠಾನಗೊಳಿಸಬಾರದು.‘ಪ್ರಜ್ಞಾವಂತರ, ಪೋಷಕರ, ಸಾರ್ವಜನಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಣ ತಜ್ಞರ, ವಿದ್ಯಾರ್ಥಿ ಸಂಘಟನೆಗಳ, ಬೋಧಕ ಮತ್ತು ಲೇಖಕ-ಬರಹಗಾರರ ವಲಯದಲ್ಲಿ ಚರ್ಚೆ ಆಗದ ಎನ್ಇಪಿ-2020 ನ್ನು ತರಾತುರಿಯಲ್ಲಿ ಜಾರಿ ಮಾಡಲು ಹೊರಟಿರುವುದೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಎನ್ಇಪಿ-2020 ಅನ್ನು ಇದುವರೆಗೂ ಸಂಸತ್ತಿನಲ್ಲಿ ಮಂಡಿಸಿಲ್ಲ, ಚರ್ಚೆಯೂ ಆಗಿಲ್ಲ. ಅದೇ ರೀತಿ ರಾಜ್ಯದಲ್ಲೂ ಕರಡು ಅಧಿಸೂಚನೆ ಹೊರಡಿಸಿಲ್ಲ. ವಿಧಾನಸಭೆ / … Continue reading ಮತೀಯವಾದಿ ಭಾಷೆಯಲ್ಲಿರುವ ಎನ್ ಇ ಪಿ – 2020ನ್ನು ಜಾರಿಗೊಳಿಸಬಾರದು

ಸ್ಟ್ಯಾನ್ ಸ್ವಾಮಿ: ಸರಕಾರಿ ಪ್ರಾಯೋಜಿತ ಕೊಲೆಯೇ?

– ಅಫ್ರಾ ಆದಿವಾಸಿಗಳ ಮಧ್ಯೆ ಸಾಗಿ ಹಲವಾರು ವರುಷಗಳಿಂದ ಅವರ ಸೇವೆಯಲ್ಲಿ ನಿರತರಾಗಿದ್ದ, ಅವರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದ ಫಾದರ್ ಸ್ಟಾನ್ ಸ್ವಾಮಿ ಜೈಲಿನಲ್ಲಿಯೇ ಮರಣವಪ್ಪಿದ್ದಾರೇ ಅಥವಾ ಈ ದೇಶದ ವ್ಯವಸ್ಥೆ ಅವರನ್ನು ಕೊಂದು ಹಾಕಿತೇ? ಹಲವು ಬಾರಿ ಅನಾರೋಗ್ಯದ ಕಾರಣಕ್ಕಾಗಿ ಜಾಮೀನಿಗೆ ಅಪೇಕ್ಷಿಸಿದರೂ ನಿರಾಕರಿಸಲಾಯಿತು. ಆಡಳಿತದ ವಿರುದ್ಧದ ಬಿನ್ನಾಭಿಪ್ರಾಯದ ಧ್ವನಿಗಳನ್ನು ಬಲಿಯಾಗಿಸುವ ಭಾಗವಾಗಿ ಸ್ಟಾನ್ ಸ್ವಾಮಿಯವರ ಜೀವ ಹೀರಲಾಗಿದೆ. ಸ್ಟ್ಯಾನ್ ಸ್ವಾಮಿ ಭಾರತದ ಪಾದ್ರಿ ಹಾಗೂ ಹೋರಾಟಗಾರ, ಸಮಾಜವಾದಿ ಮತ್ತು ಉದ್ಯಮಿಯಾಗಿದ್ದರು. ಅವರು ಕೇರಳದ ನಿವಾಸಿಯಾಗಿದ್ದರು. ದೇಶದ ಸಾಮಾಜಿಕ ಕಲ್ಯಾಣಕ್ಕೆ ಹೆಸರುವಾಸಿಯಾಗಿದ್ದರು. ಅವರು ಮುಖ್ಯವಾಗಿ ಝಾರ್ಕಂಡ್ ನಗರದ ಬುಡಕಟ್ಟು ಜನರ … Continue reading ಸ್ಟ್ಯಾನ್ ಸ್ವಾಮಿ: ಸರಕಾರಿ ಪ್ರಾಯೋಜಿತ ಕೊಲೆಯೇ?

ಭಾರತೀಯ ಮುಸ್ಲಿಮರನ್ನು ಜರ್ಮನಿಯ ಯಹೂದಿಯರಿಗೆ ಹೋಲಿಸಿದ್ದರೇ ಸಾವರ್ಕರ್!

ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ : ಭಾಗ 04 – ರಿಯಾಝ್ ಎ ಎಸ್(ಪತ್ರಿಕೋದ್ಯಮ ವಿದ್ಯಾರ್ಥಿ – ಮಂಗಳೂರು ವಿಶ್ವವಿದ್ಯಾನಿಲಯ) ನೀವು ಎಂದಾದರೂ ಯೋಚಿಸಿದ್ದೀರಾ? ಹಿಟ್ಲರ್ ಜಗತ್ತಿನ ಜನಪ್ರೀಯ ಸರ್ವಾಧಿಕಾರಿಯಾಗಿದ್ದು ಹೇಗೆ ಎಂದು? ಜರ್ಮನಿಯ ಬಹುಸಂಖ್ಯಾತ ಸಮುದಾಯವನ್ನು “ಅಂಧಭಕ್ತ” ರಾಗಲು ಪ್ರೇರೇಪಿಸಿದ್ದು ಹೇಗೆಂದು?. ಅದಕ್ಕಾಗಿ ಹಿಟ್ಲರ್ ಜನರ ಭಾವನೆಗಳನ್ನು ಬಡಿದೆಬ್ಬಿಸಿದ್ದ ಹಾಗೂ ಮಾನವ ಕುಲದಲ್ಲೇ ಜರ್ಮನ್ ಜನರಾದ ನಾವು ಆರ್ಯ ಜನಾಂಗದ ಶುದ್ಧ ರಕ್ತ ಹೊಂದಿದವರು ಮತ್ತು ಇತರರು ಎರಡನೇ ದರ್ಜೆಯ ನಾಗರಿಕರು ಎಂದು ಸಾರಿದ್ದ. ಈ ಮೂಲಕ ಜರ್ಮನ್ ಜನರನ್ನು “ಅಂಧಭಕ್ತ” ರಾಗಿ ಪರಿವರ್ತಿಸುವಲ್ಲಿ ಹಿಟ್ಲರ್ ಯಶಸ್ವಿಯಾಗಿದ್ದ. ಒಂದು ದೇಶದ … Continue reading ಭಾರತೀಯ ಮುಸ್ಲಿಮರನ್ನು ಜರ್ಮನಿಯ ಯಹೂದಿಯರಿಗೆ ಹೋಲಿಸಿದ್ದರೇ ಸಾವರ್ಕರ್!

ಗೋ ನಮೋ

-ಎಚ್ ಪಟ್ಟಾಭಿರಾಮ ಸೋಮಯಾಜಿ ತಟ್ಟಲು ಲೋಟ ತಟ್ಟೆಕುಟ್ಟಲು ಬಟ್ಟಲು ಜಾಗಟೆಊದಲು ಬಲಮುರಿ ಶಂಖ(ಅದರ ಕೂದಲು ಕೊಂಕ) ಪಾತ್ರೆ ಪರಡಿಇರಲಿ ರೆಡಿತನ್ನಿ ಬೀದಿಗೆಬನ್ನಿ ಬಾಲ್ಕನಿಗೆಐವತ್ತಾರಿಂಚ ಮೀರಿಎದೆ ತಿದಿ ಊದಲಿಶಂಖ ಪಾಂಚಜನ್ಯ ಮೊಳಗಲಿತೇಲುವ ಹೆಣ ಮುಳುಗಲಿಸ್ಮಶಾನ ಹೊತ್ತಿಬತ್ತಲಿಹೆಣದ ಹಬ್ಬ ಮೆರವಣಿಗೆನಡೆಯಲಿ ಊರೂರಲಿಊರುಕೇರಿ ಉರಿದು ನರಳಲಿ ರಕ್ತ ಪಿಪಾಸೆ ಏಕತಾರಿಮಂದ್ರ ಬಿಟ್ಟು ಕೂಗುಮಾರಿ ಮಾರ್ದನಿಸಲಿ ಏಳಿ ಎದ್ದೇಳಿಮೂವತ್ತು ಮೇ ಎರಡನೆವಾರ್ ಷಿಕೋತ್ ಶವಗುರಿ ಮುಟ್ಟುವವರೆಗು ನಿಲ್ಲದಿರಿಒಕ್ಕೊರಳಲಿ ಕೂಗಿರಿಗೋ ನಮೋ ಗೋಗವಾಕ್ಷಿ ಕಡೆ ಕಣ್ಣಿಡಿಅಂತರ ಪಿಶಾಚಿತೊಲಗಿದ ನಂತರ ಆರಾಮಲ್ಲಿ ಮತ್ತೆ ರಾಮರಾಮಎಂದು ಮೊಂಬತ್ತಿ ಬೆಳಗಿರಿ Continue reading ಗೋ ನಮೋ

ಮಲಬಾರ್ ಪ್ರಾಂತ್ಯದ ಧೀರ ಹೋರಾಟಗಾರ ವೆಲಿಯಂಗೋಡ್ ಉಮರ್ ಖಾಝಿ

– ಅರ್ಫೀದ್ ಅಡ್ಕಾರ್ ಇಸ್ಲಾಮಿ ಪಂಡಿತರಾದ ಉಮರ್ ಖಾಝಿಯವರು ಧೀರತನದಿಂದ ಬ್ರಿಟಿಷರ ವಿರುದ್ದ ಸೆಣಸಾಡಿದ ಹೋರಾಟಗಾರರಲ್ಲಿ ಒಬ್ಬರು. ಆಲಿ ಮುಸ್ಲಿಯಾರ್ ಮತ್ತು ಕಾಕತರ ಆಮೀನಾ ರ ಆರು ಮಕ್ಕಳಲ್ಲಿ ಎರಡನೇ ಮಗನಾಗಿ 1765ರಲ್ಲಿ ಜನಿಸಿದರು. ಮಲಬಾರ್ ಪ್ರಾಂತ್ಯದಲ್ಲಿದ್ದ ಉಮರ್‌ರವರು ಬ್ರಿಟಿಷರ ಸಿಂಹಸ್ವಪ್ನರಾಗಿದ್ದು, ಸೂಫಿ ಸಾಹಿತ್ಯದಲ್ಲಿ ಹೆಸರುವಾಸಿಯಾಗಿದ್ದರು. ಇಸ್ಲಾಮಿ ಪಂಡಿತ ಉಮರ್ ಖಾಝಿಉಮರ್‌ರವರು ಸಣ್ಣ ವಯಸ್ಸಿನಲ್ಲಿಯೇ ಇಸ್ಲಾಮಿನ ಬಗ್ಗೆ ತನ್ನ ತಂದೆಯಾದ ಆಲಿ ಮುಸ್ಲಿಯಾರ್‌ರ ಬಳಿ ಅದ್ಯಯನ ನಡೆಸುತ್ತಿದ್ದರು.ತನ್ನ ಹತ್ತನೇ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದರು. ನಂತರ ಚಿಕ್ಕಪ್ಪ ರವರ ಆಶ್ರಯದಲ್ಲಿ ಬೆಳೆದರು. ಹನ್ನೊಂದನೆ ವಯಸ್ಸಿನಲ್ಲಿ ತಾನೂರು‌ನಲ್ಲಿರುವ ದರ್ಸ್ ಒಂದರಲ್ಲಿ ಸೇರಿಕೊಂಡರು. … Continue reading ಮಲಬಾರ್ ಪ್ರಾಂತ್ಯದ ಧೀರ ಹೋರಾಟಗಾರ ವೆಲಿಯಂಗೋಡ್ ಉಮರ್ ಖಾಝಿ

ಒಡೆದು ಆಳುವ ನೀತಿಯ ಮುಂದಿನ ಅಧ್ಯಾಯದ ಗುರಿಗೆ ಲಕ್ಷದ್ವೀಪದ ಜನರನ್ನು ಬಲಿಪಡಿಸಲಾಗುತ್ತಿದೆ

ಏನಿದು ಲಕ್ಷದ್ವೀಪ ವಿವಾದ : ಸಂಪೂರ್ಣ ಮಾಹಿತಿ ಇಂದಿನ ಸಂಪಾದಕೀಯದಲ್ಲಿ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಭಾರತ. ಹಲವು ಭಾಷೆ, ವಿವಿಧ ಜಾತಿ, ಧರ್ಮದ ಜನರು ಸಾಮರಸ್ಯದಿಂದ ಬಾಳಿ ಬದುಕಬೇಕಾದ ಸುಂದರ ಸಂವಿಧಾನದ ತವರು ಭಾರತ. ಪರಕೀಯರ ಕಪಿಮುಷ್ಟಿಯಿಂದ ಲಕ್ಷಾಂತರ ಹೋರಾಟಗಾರರ ಸಾವು ನೋವುಗಳ ಪರಿಣಾಮವಾಗಿ ಭಾರತ ಇಂದು ಉಸಿರಾಡುತ್ತಿದೆ. ಅವರ ತ್ಯಾಗ, ಪರಿಶ್ರಮದ ಆ ಹೋರಾಟಗಳಿಗೆ ಬ್ರಿಟೀಷರು ಈ ದೇಶವನ್ನು ಬಿಟ್ಟು ಹೋದಾಗ ಕೋಟ್ಯಾಂತರ ಭಾರತೀಯರು ನೆಮ್ಮದಿಯ ಜೀವನದ ಕನಸು ಕಂಡಿದ್ದರು. ಆದರೆ ದಿನಕಳೆದಂತೆ ಬಂದ ಒಂದೊಂದು ವಿನಾಶಕಾರಿ ತತ್ವ ಸಿದ್ಧಾಂತಗಳು ದೇಶವನ್ನು ಒಡೆದು … Continue reading ಒಡೆದು ಆಳುವ ನೀತಿಯ ಮುಂದಿನ ಅಧ್ಯಾಯದ ಗುರಿಗೆ ಲಕ್ಷದ್ವೀಪದ ಜನರನ್ನು ಬಲಿಪಡಿಸಲಾಗುತ್ತಿದೆ

Lakshadeep: An evil tale in a beautiful land

– Niyif Ashfi Lakshadweep, an archipelago of 36 islands in the Arabian Sea did not report a single case of COVID-19 in 2020. While health officials in the Union Territory received widespread acclaim for their early preparedness, the situation this year was not the same, with the island reporting its first case in January. The UT has since registered 4,986 cases and 14 deaths with … Continue reading Lakshadeep: An evil tale in a beautiful land

ವಿಮರ್ಶಾ ಕವನ

– ಪಟ್ಟಾಭಿರಾಮ ಸೋಮಯಾಜಿ(ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯ ಹಂಪನಕಟ್ಟೆ) ಕಾಳಕಪ್ಪು ಅಕರಾಳವಿಕರಾಳ ರಾತ್ರಿಉಸಿರಡಗಿನೆಲ ಕುಸಿದುಎದೆ ನಡುಗಿತರಗೆಲೆಚರಪರ ಸದ್ದುಎಲೆಯಲೆಯಲೆನಾಯಿ ನರಿಯೂಳುಗೂಗೆ ಘೂಕ್ಕ ಹಿಂಡಿ ಕರುಳುಮಸಣ ಹೊಕ್ಕುಳಲ್ಲಿ ಹೂವಿಲ್ಲಮೂಳೆಯಷ್ಟೆ ಮಾಂಸವಿಲ್ಲಆತ್ಮ ಬರ್ಬರಬುರುಡೆ ಸೀದುಚಟಪಟಸ್ಮಶಾನ ರೋದನಅಬ್ಬ ಖಾಲಿ ಕೊಟ್ಟಿಗೆಹೆಣದ ಪುಣ್ಯಸ್ಮಶಾನ ಸಿಕ್ಕು ಒಟ್ಟಿಗೆಕದ್ದ ಕಟ್ಟಿಗೆಉರಿ ಬೆಂಕಿ ನಾಟ್ಯ ನಾಲಿಗೆ ತೇಲುತಿರುವ ಹೆಣಗಳೆನೀರ ಮೇಲೆ ನಡೆದಿರೆಜಲ ಸಮೂಹ ಸಮಾಧಿಯೆನಮಾಮಿ ಗಂಗೆಇಡಿಇಡಿ ನುಂಗಳೆಗಂಗಾಜಲ ಮಂಗಳೆ ಮೈಯೆಲ್ಲ ಕಣ್ಣುವೃಣಗಳೆನೆತ್ತರಿರದ ಕಂಗಳೆಅಂಧರೆಜೀವಂತ ಹೆಣಗಳೆಎಲ್ಲಿಶೋಕೀಲಾಲಸಂಘಿ ಡೊಂಕು ಬಾಲಎಲ್ಲಿ ಯಾವ ಹುತ್ತ ಬಿಲಚೌಕೀದಾರ ಖಿದರ Continue reading ವಿಮರ್ಶಾ ಕವನ

ಮೂರೇ ದಿನಗಳು ಬಾಕಿ

ಕನ್ನಡಿ ಬ್ಲಾಗ್ ಪ್ರಾಯೋಜಿಸುತ್ತಿರುವ ‘ಕಥಾಮಂಥನ’ ಕಥಾ ಸ್ಪರ್ಧೆಗೆ ಕಥೆಗಳನ್ನು ಕಳಿಸಲು ಮೂರೇ ದಿನಗಳು ಬಾಕಿ ನಾಡಿನ ಎಲ್ಲಾ ಆಸಕ್ತಿ ಕಥಾ ಬರಹಗಾರರು ಈ ಸುವರ್ಣಾವಕಾಶದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರಥಮ ಬಹುಮಾನ : 1000/- ಹಾಗೂ ಪ್ರಮಾಣ ಪತ್ರ ದ್ವಿತೀಯ ಬಹುಮಾನ : 500/- ಹಾಗೂ ಪ್ರಮಾಣ ಪತ್ರ ಸೂಚನೆಗಳು :- ಕಥೆಯ ಉಪಸಂಹಾರ ಸ್ವಾರಸ್ಯಕರ ಸಂದೇಶದೊಂದಿರಬೇಕು. ಕಥೆಯು 1500 ಪದಗಳಿಗಿಂತ ಹೆಚ್ಚು ಮೀರಬಾರದು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಆದ್ಯತೆ. ಮೇ 23 ರ ಒಳಗೆ ನೀವು ಬರೆದ ಕಥೆಯನ್ನು ಕೆಳಗಿನ ಇಮೇಲ್ ಲಿಂಕ್ ಗೆ ಕಳಿಸಬೇಕು.kannadiblog12@gmail.com ಮೇ 30 … Continue reading ಮೂರೇ ದಿನಗಳು ಬಾಕಿ