ಕೊರೊನಾ ಲಸಿಕೆಯಲ್ಲಿ ಸರಕಾರದ ಮತ ಬೇಟೆ

-ಬಿಹಾರ ಚುಣಾವಣಾ ಪ್ರಣಾಳಿಕೆಯ ವಿರುದ್ಧ ಎಲ್ಲೆಡೆ ಆಕ್ರೋಶ !!-ರಾಜಕೀಯ ಪಕ್ಷಗಳ ಪಾಲಿಗೆ ಚುಣಾವಣಾ ಅಸ್ತ್ರವಾಯ್ತು ಇನ್ನೂ ತಯಾರಾಗದ ಕೊರೊನಾ‌ ಲಸಿಕೆ !! ಬರಹ : ಸಿದ್ದೀಕ್ ಜಾರಿಗೆಬೈಲ್ ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಪಕ್ಷ ಇದೀಗ ಬಿಹಾರದಲ್ಲೂ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದೆ. ಅಕ್ಟೋಬರ್ 28 ರಂದು ಮೊದಲ ಹಂತದ ಮತದಾನ ಪ್ರಕ್ರಿಯೆಗೆ ಸಿದ್ಧಗೊಳ್ಳುತ್ತಿರುವ ಬಿಹಾರ ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ನಿತೀಶ್​ ಕುಮಾರ್​ ನೇತೃತ್ವದಲ್ಲಿ ಎನ್​ಡಿಎ ಮೈತ್ರಿಕೂಟ ಅಧಿಕಾರ ಅನುಭವಿಸುತ್ತಿದೆ. ಆದರೆ, ಈ ಬಾರಿಯೂ ಎನ್​ಡಿಎ ಮೈತ್ರಿಕೂಟ ಬಿಹಾರದಲ್ಲಿ ಗೆಲುವು ಸಾಧಿಸುವುದು … Continue reading ಕೊರೊನಾ ಲಸಿಕೆಯಲ್ಲಿ ಸರಕಾರದ ಮತ ಬೇಟೆ

ಆ ದೇಶದಲ್ಲೂ…

ಆ ದೇಶದಲ್ಲೂಮುಂಜಾನೆ ಸೂರ್ಯ ಉದಯಿಸುತ್ತಾನೆಸಂಜೆ ಕತ್ತಲಾದ ನಂತರನೀಲಿಭಾನಿನಲ್ಲಿ ಚಂದ್ರ ಉದಯಿಸುತ್ತಾನೆ ಆ ದೇಶದಲ್ಲೂಗಾಳಿಬೀಸುತ್ತದೆ ಒಮ್ಮೊಮ್ಮೆಬಿಸಿ ಒಮ್ಮೊಮ್ಮೆ ತಂಗಾಳಿಒಮ್ಮೊಮ್ಮೆ ಬಿರುಗಾಳಿಯೂ ಸಹಹಿಗ್ಗಾಳಿ ಮುಗ್ಗಾಳಿ ಬೀಸುತ್ತದೆದೇವರುಗಳು ಘಟ್ಟಕ್ಕೆ ಕುಂತಾಗ ಆ ದೇಶದಲ್ಲೂಮುಂಗಾರಿನಲ್ಲಿ ಮಳೆಹಿಂಗಾರಿನಲ್ಲಿ ಛಳಿಭೀಕರ ಬೇಸಿಗೆಯ ತಾಪಮಾನಪಾಪ ಜನರಿಗೋ ಭೀಷಣ ತಾಪತ್ರಯಕ್ಯಾಲೆಂಡರ್ ಬದಲಾಗುತ್ತಲೇ ಇರುತ್ತದೆ ಆ ದೇಶದಲ್ಲೂನಮ್ಮ ಹಾಗೆಯೇ ಇರುವಮನುಷ್ಯರಿದ್ದಾರೆ ಆಮ್ ಆದ್ಮಿಗಳುಅವರಿಗೆ ನಮಗಿರುವಂತೆಕೈಕಾಲು ಕಣ್ಣು ಮೂಗು ತುಟಿಹಣೆ ತಲೆ ತಲೆಯಮೇಲೆ ಕೂದಲುಥೇಟ್ ನಮ್ಮಂತೆಯೇಅವರ ಮೈಯಲ್ಲಿರುವ ರಕ್ತವೂ ಕೆಂಪೇ ಆ ದೇಶದಲ್ಲೂಬರಗಾಲದಲ್ಲಿ ರಂಜಾನ್ ಮೊಹರಂಅತೀವೃಷ್ಟಿ ಅನಾವೃಷ್ಟಿಯಲ್ಲಿ ದೀಪಾವಳಿರಣಬೇಸಿಗೆಯ ಕೇಕೆಯಲ್ಲಿ ಉಗಾದಿಮನಸ್ಸಿನ ಕ್ಲೇಶ ಕಳೆಯಲು ಬರುತ್ತಲೇ ಇರುತ್ತವೆಜನ ಕಾಳುಕಡಿ ಸಕ್ಕರೆ ಖರ್ಜೂರತುಟ್ಟಿಯಾದರೂ ಬೈಶಾಖಿಯ ಸುಗ್ಗಿ ಸಂಭ್ರಮ … Continue reading ಆ ದೇಶದಲ್ಲೂ…

ಕೋವಿಡ್ – 19 ಪರಿಣಾಮ : ವಿದ್ಯಾರ್ಥಿಗಳ ಶೈಕ್ಷಣಿಕ ಹಾದಿ ಅತಂತ್ರ

ಬರಹ : ಸಿದ್ದೀಕ್ ಜಾರಿಗೆಬೈಲು ಕೋವಿಡ್ – 19 ಪರಿಣಾಮವಾಗಿ ಮಾರ್ಚ್ ತಿಂಗಳ ಬಳಿಕ ಮುಚ್ಚಿದ ಶಾಲೆಗಳನ್ನು ಸರ್ಕಾರವೂ ಸೂಕ್ತ ವ್ಯವಸ್ಥೆಯೊಂದಿಗೆ ತೆರೆಯುವ ವಿಚಾರವಾಗಿ ಅಂತಿಮ‌ ತೀರ್ಮಾನ ಕೈಗೊಳ್ಳದೇ ಇರುವುದರಿಂದ, ಮಕ್ಕಳು‌ ಮನೆಯಲ್ಲಿ ಮತ್ತು ಶಿಕ್ಷಕರು ಶಾಲೆಯಲ್ಲಿ ಎನ್ನುವ ಪರಿಸ್ಥಿತಿ ಎದುರಾಗಿದೆ. ಮಾರ್ಚ್ ತಿಂಗಳಿನಿಂದ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಒಂದು ರೀತಿಯ ಗೊಂದಲದ ಮನಸ್ಥಿತಿಯೇ ಉಂಟಾಗಿರುವುದು ಸುಳ್ಳಲ್ಲ. ದೇಶದಲ್ಲಿ ಈ ಮೊದಲೇ ಅನಕ್ಷರಸ್ಥರು ಹೆಚ್ಚುತ್ತಿರವಾಗ ಈ ಕೊರೋನಾ ಮಹಾಮಾರಿ ಶೈಕ್ಷಣಿಕ ಕ್ಷೇತ್ರದಲ್ಲಿ ಊಹಿಸಲೂ ಅಸಾಧ್ಯವಾದ ರೀತಿಯ ಅವ್ಯವಸ್ಥೆಗೆ ಕಾರಣವಾಗಿದೆ.ಕೋವಿಡ್ -19 ನೊಂದಿಗೆ ಹೊಂದಿಕೊಂಡು ಎಲ್ಲಾ ಕ್ಷೇತ್ರಗಳೂ ತಮ್ಮ ಕಾರ್ಯಚಟುವಟಿಕೆಯನ್ನು ಆರಂಭಿಸುವಾಗ, ಶಿಕ್ಷಣ … Continue reading ಕೋವಿಡ್ – 19 ಪರಿಣಾಮ : ವಿದ್ಯಾರ್ಥಿಗಳ ಶೈಕ್ಷಣಿಕ ಹಾದಿ ಅತಂತ್ರ

ಕೋವಿಡ್ ನ ನೆಪದಲಿ

1ಮೌನವು ಸದ್ದಿಲ್ಲದೆ ನನ್ನ ಹೃದಯವನ್ನಾವರಿಸಿದೆಪ್ರೀತಿಯು ಮನಸ್ಸನ್ನಾರೈಸಿ ಮೌನಿ ಪ್ರೇಮಿಯನ್ನಾಗಿಸಿದೆಈ ತುಂತುರು ಮಳೆಯೋ ಸುರಿಯುತಲಿರಲುನನ್ನ ಹೆಬ್ಬೆರಲನ್ನೇ ಲೇಖನಿಯನ್ನಾಗಿಸಿದೆ2ಮಿಡಿಯುವ ಹೃದಯಗಳನ್ನು ಮುಗುಳ್ನಗುವಿನ ಬೆಲೆಗೆ ಮಾರುತ್ತಿದ್ದ ವರ್ತಕತನ್ನ ಹೃದಯದ ಬಾಗಿಲನ್ನು ಮಾತ್ರ ಆಕೆಯ ಅಧರಗಳಿಗೆ ಅರ್ಪಿಸಿ ಬಿಟ್ಟ3ಹಣ,ಅಧಿಕಾರ,ಯಶಸ್ಸು,ಇವೆಲ್ಲವನ್ನೂ ತಾನಾಗಿಯೇ ಸಂಪಾದಿಸಿದಆತ ಮಂಡಿಯೂರಿ ದೇವರಲ್ಲಿ ಬೇಡಿದ್ದುಒಂದು ರಾತ್ರಿಯ ಸುಖ ನಿದ್ರೆ ಮಾತ್ರ4ಕೊರೋನದ ರುದ್ರತಾಂಡವ ಕಂಡು ಜನರೆಲ್ಲ ಪರಿತಪಿಸುತ್ತಿರುವಾಗಬಡವನ ಉದರದ ಹಸಿವೆಂಬ ಮಹಾಮಾರಿಯ ಕಂಡು ಕೊರೋನ ದಿಗ್ಬ್ರಮೆಗೊಂಡಿತಂತೆ5ಮಾನವ ಕುಲದ ರಕ್ತಪಾತ ಮಾಡಿ ಇಲ್ಲೊಬ್ಬ ಪರಾಕ್ರಮಕದ ಉನ್ಮಾದದಲ್ಲಿ ತೇಲುತ್ತಿರುವಾಗನನ್ನ ರಕ್ತ ಹೀರಿದ ಸೊಳ್ಳೆಯ ಪ್ರಾಣಪಕ್ಷಿಯ ದಮನದ ಪ್ರಾಯಶ್ಚಿತೆ ನನ್ನ ಎದೆಗವಚ ಹಿಂಡುತಿದೆ -ಮಹಮ್ಮದ್ ತೌಸಿಫ್ Continue reading ಕೋವಿಡ್ ನ ನೆಪದಲಿ

►ಸಂಪಾದಕೀಯ►’ಉತ್ತರ ಪ್ರದೇಶ ಸರಕಾರವು ತನ್ನ ಅನಿಯಮಿತ ಉದ್ಧಟತನಕ್ಕೆ ಕಡಿವಾಣ ಹಾಕಲಿ’

[ ಸಂತ್ರಸ್ತೆಗೆ ನ್ಯಾಯ ಒದಗಿಸುವಲ್ಲಿ ಯು.ಪಿ ಸರಕಾರವು ಆಶಾದಾಯಕವಾಗಿ ಸಹಕರಿಸಲಿ] ಕಳೆದ ಹಲವಾರು ದಿನಗಳಿಂದ ಸುದ್ದಿಯಾಗುತ್ತಿರುವ ಹಥರಾಸ್ ಅತ್ಯಾಚಾರ ಪ್ರಕರಣದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ.ಆರೋಪಕ್ಕೆ ಸಂಬಂಧಪಟ್ಟಂತೆ ಹಲವು ಟ್ವಿಸ್ಟ್ ಗಳು ಬೆಳಕಿಗೆ ಬರುತ್ತಾ ಇದೆ.ಏನೇ ಇದ್ದರೂ ಅಲ್ಲಿ ಒಂದು ಅಮಾಯಕ ದಲಿತ ಹೆಣ್ಣು ಮಗಳು ಜೀವ ಕಳೆದುಕೊಂಡಿದ್ದಾಳೆ.20 ರ ಹರೆಯದ ಹೆಣ್ಣು ಮಗಳನ್ನು ಕ್ರೂರವಾಗಿ ಹಲ್ಲೆಗೈದು ಕೊಂದಿದ್ದಾರೆ.ಸೆಪ್ಟೆಂಬರ್ 14 ರಂದು ನಡೆದ ಈ ಕೃತ್ಯ ನಂತರದ ಹಲವು ದಿನಗಳ ನಂತರ ಬೆಳಕಿಗೆ ಬಂದಾಗ ಇಡೀ ದೇಶವೇ ಸ್ತಬ್ಧಗೊಂಡಿತು. ದೇಶದಾದ್ಯಂತ ಆಕ್ರೋಶಗಳು ವ್ಯಕ್ತವಾಯಿತು. ಇದರಿಂದ ಹಲವು ರಾಜಕೀಯ ಮುಖಂಡರು,ಸಾಮಾಜಿಕ ಹೋರಾಟಗಾರರು,ಮಹಿಳಾ … Continue reading ►ಸಂಪಾದಕೀಯ►’ಉತ್ತರ ಪ್ರದೇಶ ಸರಕಾರವು ತನ್ನ ಅನಿಯಮಿತ ಉದ್ಧಟತನಕ್ಕೆ ಕಡಿವಾಣ ಹಾಕಲಿ’

ಮೊಂಬತ್ತಿ ಉರಿಯತ್ತಲೇ ಇದೆ.ಅತ್ಯಾಚಾರ ಹೆಚ್ಚುತ್ತಲೇ ಇದೆ.

ಬರಹ:ಸಿದ್ದೀಕ್ ಜಾರಿಗೆಬೈಲು ಅಂದು ಭಾರತವು ಮಹಿಳೆಗೆ ಅತ್ಯುನ್ನತ ಸ್ಥಾನವನ್ನು ಕಲ್ಪಿಸುವ ದೇಶವಾಗಿತ್ತು.ಆದರೆ ವಾಸ್ತವದಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಎನ್ನುವಂಥ ಅಪಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಪಡೆಯುತ್ತಿದೆ. ಅದಕ್ಕೆ ಕಾರಣ ಇತ್ತೀಚೆಗೆ ನಡೆಯುತ್ತಿರುವ ಭೀಕರ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು.‌ಭಾರತವು ಆರ್ಥಿಕತೆ ಹಾಗೂ ಬಾಹ್ಯಾಕಾಶ ವಿಜ್ಙಾನದಲ್ಲಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು,ವಿಶ್ವದಲ್ಲಿ ಭಾರತ ಮಹಿಳಾ ಸುರಕ್ಷತೆ ವಿಷಯದಲ್ಲಿ ಮಾತ್ರ ಇಡೀ ವಿಶ್ವದ ಮುಂದೆ ತಲೆ ತಗ್ಗಿಸುವಂತಾಗಿದೆ. ಹಾಗೆಯೇ ಇನ್ನೊಂದು ವರದಿಯ ಪ್ರಕಾರ ಒಬ್ಬಂಟಿ ಹೆಣ್ಣು ಮಕ್ಕಳ ಪ್ರವಾಸಕ್ಕೆ ಭಾರತ ವಿಶ್ವದಲ್ಲಿ 9ನೇ ಅಪಾಯಕಾರಿ ದೇಶ ಎಂಬುವಷ್ಟರಮಟ್ಟಿಗೆ ಇರುವ ಅನೈತಿಕತೆಯ … Continue reading ಮೊಂಬತ್ತಿ ಉರಿಯತ್ತಲೇ ಇದೆ.ಅತ್ಯಾಚಾರ ಹೆಚ್ಚುತ್ತಲೇ ಇದೆ.

ಬಾಬರೀ ಮಸ್ಜಿದ್ ಧ್ವಂಸ:ಇದು ಮುಗಿಯದ ಅಧ್ಯಾಯ.

-ಕೋರ್ಟ್ ಪ್ರಕಟಿಸಿದ ತೀರ್ಪು ಮತ್ತು ಟೀಕೆಗಳು-ಯಾರು ಆ 32 ಸಜೀವ ಆರೋಪಿಗಳು?-ಈ ತೀರ್ಪು ನ್ಯಾಯಿಕ ತೀರ್ಪೇ ಹೊರತು ನೈತಿಕ ತೀರ್ಪು ಅಲ್ಲ ಬರಹ: ಇಮ್ರಾನ್ ಝೈಫ್ ಪಾಂಡವರಕಲ್ಲು “ನಾನು ಗಲಭೆಯಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡುವ ಸಲುವಾಗಿ ,ಸಂಘರ್ಷಗೊಂಡಿರುವ ಜನರ ನಡುವೆ ನಾನು ಹಿಸುಕು ಹಾಕಲು ಪ್ರಯತ್ನಿಸಿದೆ.ಆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ವಿವಾದಿತ ಸ್ಥಳದಲ್ಲಿ ಗರ್ಭ ಗೃಹ ಇದೆ ಮತ್ತು ರಾಮನ ಪ್ರತಿಮೆ ಇದೆ ಎಂದು ಹೇಳಿದರು.ನಿಸ್ಸಂಶಯವಾಗಿಯೇ ನಾನು ನನ್ನ ಸುತ್ತಲಿನ ಇತರರಂತೆ ಇವರನ್ನು ನಾನು ಕಾಣಲಿಲ್ಲ. ಅಲ್ಲಿ ಜೀನ್ಸ್ ಮತ್ತು ಶರ್ಟ್‌ ವಸ್ತ್ರಧಾರಿಯಾಗಿ ಇದ್ದ ಹೆಣ್ಣು ನಾನು ಒಬ್ಬಳೇ.ಹಾಗಾಗಿ ನಾನು ಆ … Continue reading ಬಾಬರೀ ಮಸ್ಜಿದ್ ಧ್ವಂಸ:ಇದು ಮುಗಿಯದ ಅಧ್ಯಾಯ.

ಕಾಲಚಕ್ರ

ಕಾಲ ಎಂದಿಗೂ ನಿಲ್ಲದುಹಿಂದೆಯೂ ಅದು ಸಾಗದುಒಂದೇ ರೀತಿಯು ಇರದುನಮಗಾಗಿ ಎಂದೂ ಕಾಯದು ಕಾಲಚಕ್ರ ಉರುಳಿದಂತೆ ಬಾಳುಒಮ್ಮೆ ಬಡತನ ಒಮ್ಮೆ ಸಿರಿತನ ಕೇಳುಕಾಲ ಬದಲಾಗದು ಆದರೆಲ್ಲವೂ ಬದಲುಕತ್ತಲು ಕಳೆದರೆ ಬರುವುದು ಹಗಲು ಅವರವರ ಕಷ್ಟಕ್ಕೆ ಅವರು ಅದಲುಸ್ವಾರ್ಥ ಸಾಧನೆಗೆ ಇವರು ಬದಲುಕಾಣಿಸದ ಕಣ್ಣೀರು ಮರೆಯದ ನೆನಪುಗಳುಕಾಲದೊಂದಿಗಿಹವು ಅಂತರಾಳಗಳು ಬೇಕು ಬದುಕಿಗೊಂದು ಚೈತ್ರಕಾಲಮೂಡಣದ ರಂಗಿನಂತೆ ಹೊಂಬಣ್ಣ ಜಾಲಹಾಡಲು ಬದುಕಿಗೊಂದು ಅರುಣರಾಗಸುಂದರ ಜೀವನದ ತ್ಯಾಗ ಭೋಗ -ಸುಮಸ್ಮಿತೆ ವಿಜಯಪುರ Continue reading ಕಾಲಚಕ್ರ

ಕೃಷಿ ಮಸೂದೆ:ಯಾಕಿಷ್ಟು ವಿರೋಧ?

ಇಂದು ದೇಶದಲ್ಲಿ ಅತೀ ಹೆಚ್ಚು ಚರ್ಚೆಗೊಳಪಡುವ ವಿಷಯ ಎಂದರೆ, ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣ ಗೊಳಿಸುವ ಮತ್ತು ಆಹಾರ ಸಮಗ್ರತೆಯ ಕಾರಣ ನೀಡಿ ಜಾರಿಗೆ ತಂದ ಕೃಷಿ ಸುಧಾರಣಾ ಕಾಯ್ದೆ.ಇದಕ್ಕೆ ದೇಶಾದ್ಯಂತ ಅನೇಕ ಕಡೆಗಳಲ್ಲಿ, ಮುಖ್ಯವಾಗಿ ಪಂಜಾಬ್, ಹರಿಯಾಣದಲ್ಲಿ ರೈತರ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮೂರು ಬಿಲ್ ಗಳನ್ನು ಮಂಡಿಸಿತು ಮತ್ತು ಜೂನ್ 5 ರಂದು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿತ್ತು. ಅವುಗಳೆಂದರೆ, 1) ಕೃಷಿ ಉತ್ಪನ್ನಗಳ ವಾಣಿಜ್ಯ ಮತ್ತು ವ್ಯಾಪಾರ ಮಸೂದೆ (ಉತ್ತೇಜನ ಹಾಗೂ ಸೌಕರ್ಯ), 2) ಬೆಲೆ ಭರವಸೆ & … Continue reading ಕೃಷಿ ಮಸೂದೆ:ಯಾಕಿಷ್ಟು ವಿರೋಧ?

ಹೊಸ ಹುರುಪಿನೊಂದಿಗೆ ಅಂತರ್ಜಾಲ ಲೋಕಕ್ಕೆ ‘ಕನ್ನಡಿ’ ಬ್ಲಾಗ್ ದಾಪುಗಾಲು:

“ಜ್ಙಾನದ ಅರಿವು, ವಿಜ್ಙಾನದ ನೆರವು,ಕಾವ್ಯದ ಗಣನೆ ,ಭಾವನೆಗಳ ಸ್ಮರಣೆ ,ಕಲಿಕೆಯ ಮನನ ,ರಸದ ರುಚಿಯ ಪದಗಳ ಗುಚ್ಛ,ಅನುಭವ ನವೀನ” ಬರವಣಿಗೆ ಕ್ಷೇತ್ರದಲ್ಲಿ ಬರಹಗಾರರಿಗೆ ವಿಶೇಷವಾಗಿ ಯುವ ಬರಹಗಾರರಿಗೆ ವಿಚಾರಧಾರೆಗಳನ್ನು ಹಬ್ಬಲು ಮುಕ್ತ ವೇದಿಕೆಯನ್ನು ಕಲ್ಪಿಸುತ್ತಾ, ವಿಮರ್ಶಕರ ಚಿಂತನೆಗಳಿಗೆ ಸ್ವರೂಪದರ್ಶಿಯಾಗಿ,ಯುವಮನಸ್ಸುಗಳಿಗೆ ಸಾಹಿತ್ಯ ಕ್ಷೇತ್ರದಲ್ಲಿ ಆಳವಾದ ಒಲವು ಮೂಡಿಸುವ ಸಲುವಾಗಿ,ವೈಚಾರಿಕ ಚಿಂತನೆಗಳನ್ನು ಬೆಳಕು ಚೆಲ್ಲಲು ಹುರಿದುಂಬಿಸುತ್ತಾ,ಜ್ಙಾನ ಭಂಡಾರಗಳ ಹುರುಪಿನೊಂದಿಗೆ,ಓದುಗರ ಅಭಿರುಚಿಯ ಉತ್ಸುಕತೆಗಾಗಿ,ಎಲ್ಲಾ ರೀತಿಯ ಉತ್ತಮ ಬರಹಗಳನ್ನು ಇಡುಗಂಟಾಗಿಸಿ ಅಂತರ್ಜಾಲ ಲೋಕಕ್ಕೆ ‘ಕನ್ನಡಿ’ ಎಂಬ ಕನ್ನಡ ಬ್ಲಾಗ್ ದಾಪುಗಾಲಿಡುತ್ತಾ ಇದೆ. ನಿಮ್ಮಜ್ಙಾನ-ರಸಧಾರೆಯನ್ನು ಹಂಚುವ ಮೂಲಕ ಜ್ಞಾನದಾತರಾಗಲು ಮುಕ್ತ ವೇದಿಕೆ ಕಲ್ಪಿಸುತ್ತಿದೆ.ಕವನ,ಗಾದೆ,ಸಣ್ಣ ಕಥೆ,ಚುಟುಕುಗಳು,ಹಾಸ್ಯ ಬರಹಗಳು,ಚಿತ್ರಕ ಬರಹಗಳು,ಸಮಯೋಚಿತವಾದ ವಿಶೇಷ … Continue reading ಹೊಸ ಹುರುಪಿನೊಂದಿಗೆ ಅಂತರ್ಜಾಲ ಲೋಕಕ್ಕೆ ‘ಕನ್ನಡಿ’ ಬ್ಲಾಗ್ ದಾಪುಗಾಲು: