ಚುನಾವಣಾ ರಾಜಕೀಯ ಪ್ರಚಾರಕ್ಕೆ ಬರದ ಕೊರೋನ ಜನಸಾಮಾನ್ಯರ ಹೋರಾಟಕ್ಕೆ ಬರುವುದೇ?

ಬರಹ : ಚಾಂದ್ ಸಲ್ಮಾನ್ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ಅದರ ಭಾಗವಾಗಿ ಎಲ್ಲಾ ರಾಜಕೀಯ ಪಕ್ಷಗಳು ತಮಗೆ ಬೇಕಾದ ರೀತಿಯಲ್ಲಿ ಚುನಾವಣಾ ಪ್ರಚಾರವನ್ನು ಬಾರೀ ಪ್ರಮಾಣದ ಜನರನ್ನು ಸೇರಿಸಿ ನಡೆಸುತ್ತಿವೆ. ಇನ್ನೊಂದು ಕಡೆ ನೋಡುವುದಾದರೆ ಕೇಂದ್ರ ಸರ್ಕಾರ ತಂದಂತಹ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಶತಕದ ಗಡಿ ದಾಟಿ ಸಾಗುತ್ತಿದ್ದರೂ ಸರ್ಕಾರವು ಇದನ್ನು ತಡೆಯುವ ಕುತಂತ್ರಗಳನ್ನು ಹೆಣೆಯುತ್ತಿದೆಯೇ ಹೊರತು ನ್ಯಾಯ ದೊರಕಿಸುವ ಗೋಜಿಗೆ ಹೋಗುತ್ತಿಲ್ಲ. ನಾವು ಇನ್ನು NRC,CAA ವಿರೋಧಿಸಿ ದೇಶಾದ್ಯಂತ ಜನರು ಬೀದಿಗಿಳಿದರು. ಅದೇ ಸಂದರ್ಭದಲ್ಲಿ ಇದುವರೆಗೆ ಕಾಣದ ರೀತಿಯಲ್ಲಿ ಮಹಿಳೆಯರು … Continue reading ಚುನಾವಣಾ ರಾಜಕೀಯ ಪ್ರಚಾರಕ್ಕೆ ಬರದ ಕೊರೋನ ಜನಸಾಮಾನ್ಯರ ಹೋರಾಟಕ್ಕೆ ಬರುವುದೇ?

ಕನ್ನಡಿಗೆ 5000+ ಓದುಗರು

‘ಕನ್ನಡಿ’ ಎಂಬ ನವಬರಹಗಾರರ ವೇದಿಕೆಯು ಇಂದು ಸಮಾಜದ ನಾಡಿ ಮಿಡಿತವನ್ನು ಅರಿತು ಮುಂದುವರಿಯುತ್ತಿದ್ದು,ಸಮಾಜದಲ್ಲಿ ಬೇರೂರಿರುವ ದ್ವೇಷ, ಅನ್ಯಾಯ ವನ್ನು ಪ್ರಶ್ನಿಸುತ್ತಾ, ಜನರಿಗೆ ನೈಜತೆಯ ಅರಿವು ಮೂಡಿಸಲು ಬರಹಗಳ ಮೂಲ ಪ್ರಯತ್ನಿಸುತ್ತಿದೆ. ಮಾತ್ರವಲ್ಲ ಬರವಣಿಗೆ ಕ್ಷೇತ್ರದಲ್ಲಿ ಆಭಿರುಚಿ ಇರುವ ನವಪ್ರತಿಭೆಗಳಿಗೆ ಹುರಿದುಂಬಿಸುತ್ತಾ, ಸ್ವ-ಲೇಖನಗಳನ್ನು ಬರೆಯಲು ಕನ್ನಡಿಯು ಅವಕಾಶಗಳನ್ನು ಕಲ್ಪಿಸುತ್ತಿದೆ. ಇಲ್ಲಿಯವರೆಗೆ ಕನ್ನಡಿ ವೇದಿಕೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲಾ ಬರಹಗಾರರಿಗೂ, ಚಿಂತಕರಿಗೂ ಹಾಗೂ ಓದುಗರಿಗೆ ಕನ್ನಡಿ ಸಂಪಾದಕ ಮಂಡಳಿಯು ಅಭಾರಿಯಾಗಿದೆ. ಮುಂದಕ್ಕೂ ತಮ್ಮ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ. ಕೃತಜ್ಞತೆಗಳು‘ಕನ್ನಡಿ’ ಸಂಪಾದಕ ಮಂಡಳಿ ಲೇಖನಿಗೊಂದು ವೇದಿಕೆ – (ನಿಮಗೆ ಬರಹ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ ನೀವು ಬರೆದ … Continue reading ಕನ್ನಡಿಗೆ 5000+ ಓದುಗರು

ಬ್ಲೂ ಫ್ಲಾಗ್ ತೆರೆದಿಟ್ಟ ಅಸಹಿಷ್ಣುತೆ

ಬರಹ : ಸುಮಯ್ಯಾ ಅಥಾವುಲ್ಲಾ ಜಾತಿ-ಧರ್ಮದ ಜೇಡರ ಬಲೆಯಲ್ಲಿ ಸಿಲುಕಿರುವ ದಕ್ಷಿಣ ಕನ್ನಡದ ಸಮುದ್ರದಲೆಗಳ ರೋದನೆ ದಿನೇದಿನೇ ಹೆಚ್ಚುತ್ತಲಿವೆ. ಇತ್ತೀಚಿಗೆ ಪಡುಬಿದ್ರಿ ಬೀಚ್ ನಲ್ಲಿ ನಡೆದ ಘಟನೆ ಈ ಪಟ್ಟಿಗೆ ಹೊಸ ಸೇರ್ಪಡೆ. ಕಾನೂನು ಉಲ್ಲಂಘನೆಯ (ಸಮುದ್ರ ಕಿನಾರೆಯಲ್ಲಿ ನಮಾಜ್ ನಿರ್ವಹಿ ನಿರ್ವಹಿಸುವುದು)ಹೆಸರಿನಲ್ಲಿ ಮುಸ್ಲಿಂ ಕುಟುಂಬವನ್ನು ಅಲ್ಲಿನ ಅಧಿಕಾರಿಗಳು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅರಿವಿಲ್ಲದೆ ನಡೆದ ಘಟನೆ ಸಂವಾದದ ಮುಖಾಂತರ ಅದೇ ದಿನ ಕೊನೆಗೊಂಡಿತು. ಆದರೆ ಆಯಾಸವಿಲ್ಲದೆ ಕಾರ್ಯಪ್ರವೃತ್ತಿಯಲ್ಲಿರುವ ಸಾಮಾಜಿಕ ಜಾಲತಾಣವೆಂಬ ಮಾರುಕಟ್ಟೆ,ನಡೆದ ಘಟನೆಗೆ ಕೋಮು ಬಣ್ಣ ಹಚ್ಚಿ, ವಾರವಿಡೀ ವ್ಯಾಪಾರ ನಡೆಸಿತು. ಏನಿದು ಬ್ಲೂ ಫ್ಲಾಗ್ ಮಾನ್ಯತೆ ? ಹಾಗಿದ್ದರೆ ಸಮುದ್ರಕಿನಾರೆಯಲ್ಲಿ … Continue reading ಬ್ಲೂ ಫ್ಲಾಗ್ ತೆರೆದಿಟ್ಟ ಅಸಹಿಷ್ಣುತೆ

ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ!

ಬರಹ : ಮಹಮ್ಮದ್ ರಿಯಾಝ್(ವಿದ್ಯಾರ್ಥಿ- ಮಂಗಳೂರು ವಿಶ್ವವಿದ್ಯಾನಿಲಯ) ಅಸ್ತಿತ್ವಕ್ಕಾಗಿ ನಡೆದ ಹೋರಾಟಗಳೆಷ್ಟೋ, ಕ್ರಾಂತಿಗಳೆಷ್ಟೋ. ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗಿ ಹೆಚ್ಚಿನ ಹೋರಾಟಗಳೂ, ಕ್ರಾಂತಿಗಳೂ ಅಸ್ತಿತ್ವಕ್ಕಾಗಿಯೇ ನಡೆದಿದೆ ಎನ್ನಬಹುದು. ಒಂದು ಸಮುದಾಯದ ಅಥವಾ ಒಬ್ಬ ವ್ಯಕ್ತಿಯ ಅಸ್ತಿತ್ವದ ಪ್ರಶ್ನೆ ಬಂದಾಗ ಪರಸ್ಪರ ನಮ್ಮ ಭಿನ್ನಾಭಿಪ್ರಾಯಗಳನ್ನು, ಅಡ್ಡಲಾಗಿರುವ ಗೋಡೆಗಳನ್ನು, ಸವಾಲುಗಳನ್ನು ಎದುರಿಸಿ ಐಕ್ಯ ಸಾಧಿಸುವುದು ಅನಿವಾರ್ಯ. ಇಲ್ಲದಿದ್ದರೆ ಯಾವ ರೀತಿ ಚರಿತ್ರೆಯ ಪುಟಗಳಲ್ಲಿ ಕರಾಳ ಹತ್ಯಾಕಾಂಡ, ನರಮೇಧಗಳು ನಡೆಯಿತೋ, ಅದು ಮತ್ತೆ ಪುನರಾವರ್ತನೆಗೊಳ್ಳಬಹುದು. ಇಂದಿನ ಸಮಾಜವನ್ನು ಸ್ಪಷ್ಟವಾಗಿ ಗಮನಿಸಿದಾಗ ಕೆಲವೊಂದು ಅಪಾಯಕಾರಿ ಬದಲಾವಣೆಗಳು ನಮ್ಮ ಕಣ್ಣ ಮುಂದಿದೆ. ಇಂದು ಸಮಾಜದಲ್ಲಿ ಬೆಳೆಯುತ್ತಿರುವ ದ್ವೇಷದ ಚಿಂತನೆಗಳು, … Continue reading ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ!

ದುರ್ದೆಶೆಯ ಅಂಧಕಾರದತ್ತ ಸಾಗುತ್ತಿರುವ ಭಾರತ

ದೇವಸ್ಥಾನದಲ್ಲಿ ನೀರು ಕುಡಿದ ಕಾರಣಕ್ಕೆ ನಡೆದ ಹಲ್ಲೆಯು ಮಾನವೀಯತೆ ಮತ್ತು ಸೌಹಾರ್ದತೆಯ ಮೇಲೆ ನಡೆದ ಕಗ್ಗೊಲೆ ಕಳೆದ ಹಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಪಶ್ಚಾತಾಪಕ್ಕೊಳಗಾಗುವಂತೆ ಮಾಡಿದೆ.ಒಬ್ಬ ಸಣ್ಣ ಬಾಲಕ ತನಗೆ ತೀರಾ ಬಾಯಾರಿಕೆಯಾಗಿದೆಯೆಂಬ ಕಾರಣಕ್ಕೆ ಗಾಝಿಯಾಬಾದ್ ನಲ್ಲಿರುವ ಒಂದು ದೇವಸ್ಥಾನಕ್ಕೆ ನೀರು ಕುಡಿಯಲು ಹೋದ ಎಂಬ ಕಾರಣಕ್ಕೆ ಅಲ್ಲೊಬ್ಬ ಮತಾಂಧ ವ್ಯಕ್ತಿ ಈ ಬಾಲಕನ ಹೆಸರು,ಬಂದಿರುವ ಉದ್ದೇಶ ಕೇಳತೊಡಗುತ್ತಾನೆ.ಆತ ಮುಸ್ಲಿಂ ಎಂದು ಗೊತ್ತಾದ ತಕ್ಷಣ ಆ ಬಾಲಕನಿಗೆ ಯರ್ರಾಬಿರ್ರಿಯಾಗಿ ಥಳಿಸುತ್ತಾನೆ.ಆ ಯುವಕನ ಕೈ ಮುರಿಯಲು ಪ್ರಯತ್ನಿಸುತ್ತಾನೆ. ನಿಜವಾಗಿ ಈ ಬಾಲಕ ಮಾಡಿದ ತಪ್ಪೇನು?ತನ್ನ … Continue reading ದುರ್ದೆಶೆಯ ಅಂಧಕಾರದತ್ತ ಸಾಗುತ್ತಿರುವ ಭಾರತ

ಜಾತಿ ಓಲೈಕೆಯ ಬಜೆಟ್

ಬರಹ : ಜಯಕುಮಾರ್ ಹಾದಿಗೆ (ಕರ್ನಾಟಕ ರಾಜ್ಯಾಧ್ಯಕ್ಷರು-ರಾಷ್ಟ್ರೀಯ ಆದಿವಾಸಿ ಏಕತಾ ಪರಿಷತ್) ಹಸಿರು ಶಾಲು ಧರಿಸಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪೂರ್ಣ ಬಜೆಟ್ ಅನ್ನು ಕೇಸರಿಮಯವನ್ನಾಗಿಸಿದ್ದಾರೆ.ಈ ಬಜೆಟ್ ಕೇವಲ ಜಾತಿ ಸಮುದಾಯಗಳ ಓಲೈಕೆಗಾಗಿ ಹಣವನ್ನು ಮೀಸಲಿಡುವ ಮೂಲಕ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ನಾವು ಅರ್ಹರು ಎನ್ನುವುದನ್ನು ಸಾರಿ ಹೇಳುವಂತಿದೆ. ಹಸಿರು ಶಾಲು ಧರಿಸಿದ ಮುಖ್ಯಮಂತ್ರಿಗಳು ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಕೃಷಿಕರ ಅಭಿವೃದ್ಧಿಗಾಗಿ ಯಾವುದೇ ಪೂರಕ ಯೋಜನೆಗಳನ್ನು ಕೈಗೆತ್ತಿಕೊಂಡಂತೆ ಕಾಣಲಿಲ್ಲ.ಇನ್ನೂ ರಾಜ್ಯದಲ್ಲಿ ಇತ್ತೀಚೆಗಷ್ಟೇ ಜಾರಿಗೆ ತಂದ ಗೋಹತ್ಯಾ ನಿಷೇಧ ಕಾಯ್ದೆಗೆ ಪೂರಕವಾಗಿ ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ … Continue reading ಜಾತಿ ಓಲೈಕೆಯ ಬಜೆಟ್

‘ಒನ್ ನೇಷನ್ ಒನ್ ಎಲೆಕ್ಷನ್’ ಯಾಕಾಗಿ ಈ ವರ್ಣರಂಜಿತ ಘೋಷಣೆ?

ಬರಹ : ಎಮ್ಮೆಸ್ಸೆ ಸವಣೂರು ಒಂದು ದೇಶ- ಒಂದು ಚುನಾವಣೆ ಎಂಬ ವರ್ಣರಂಜಿತ ಘೋಷಣೆಯು ಚಾಲ್ತಿಯಲ್ಲಿರುವುದು ಇದೇ ಮೊದಲೇನಲ್ಲ. ಕಳೆದ ಲೋಕಸಭಾ ಚುನಾವಣೆಯ ಮುಂಚೆ ಬಿಜೆಪಿಯು ಚುನಾವಣಾ ಆಯೋಗಕ್ಕೆ ಒಂದು ದೇಶ- ಒಂದು ಚುನಾವಣೆ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದರು. ಅಷ್ಟಕ್ಕೂ ಬಿಜೆಪಿ ಮಹತ್ವ ಕೊಡುವ ಈ ಅಜೆಂಡಾ ಏನು? ಇದರ ಹಿಂದಿರುವ ಷಡ್ಯಂತ್ರಗಳೇನು? ಹಿಂದೂರಾಷ್ಟ್ರದ ಪರಿಕಲ್ಪನೆಯೊಂದಿಗೆ ಅಧಿಕಾರಕ್ಕೆ ಏರಿದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಸದಾ ಸಂವಿಧಾನದ ಮೂಲ ಆಶಯಕ್ಕೆ ತಿದ್ದುಪಡಿ ತರಲು ಶ್ರಮಿಸುತ್ತಿದೆ. ಆರ್ಟಿಕಲ್ 370 ತಿದ್ದುಪಡಿ, ಏಕರೂಪ ನಾಗರಿಕ ಸಂಹಿತೆ ಈ ರೀತಿಯ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ತನ್ನ … Continue reading ‘ಒನ್ ನೇಷನ್ ಒನ್ ಎಲೆಕ್ಷನ್’ ಯಾಕಾಗಿ ಈ ವರ್ಣರಂಜಿತ ಘೋಷಣೆ?

ಫ್ಯಾಶಿಷ್ಟರಿಂದ ಅಮೆರಿಕ ಸಂಸತ್ ಮೇಲೆ ದಾಳಿ;ಭಾರತವು ಎಚ್ಚರದಿಂದ ಇರಲಿ!!!

ಬರಹ – ಜೈನುಲ್ ಅಕ್ಬರ್ ಬಿ ಈ ಶತಮಾನದ ಹಿಟ್ಲರ್ ಎಂದೇ ಕುಖ್ಯಾತಿ ಪಡೆದ ಟ್ರಂಪ್ ಗೆ ಪ್ರಜಾಪ್ರಭುತ್ವದ ಮೇಲೆ ಎಳ್ಳಷ್ಟೂ ಭರವಸೆಯಿಲ್ಲ.ಆತನಿಗೆ ಅಧಿಕಾರದ ಹಪಾಹಪಿ ಇದೆ.ಆದ್ಧರಿಂದಲೇ ಪ್ರಜಾಪ್ರಭುತ್ವ ವ್ಯಸ್ಥೆಯಲ್ಲಿನ ಚುನಾವಣೆ ಪ್ರಕ್ರಿಯೆ ಬಗ್ಗೆ ಮೊದಲಿನಿಂದಲೂ ಟ್ರಂಪ್ ಅಮೆರಿಕಾದಾದ್ಯಂತ ಅಪಪ್ರಚಾರ ನಡೆಸುತ್ತಾ ಬಂದಿದ್ದ. ಇತ್ತೀಚಿಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆದ್ದು ಟ್ರಂಪ್ ಸೋತ ಸುದ್ಧಿ ತಿಳಿದು ಅಮೆರಿಕಾದ ಚುನಾವಣಾ ವ್ಯವಸ್ಥೆಯ ಬಗ್ಗೆ ಟ್ರಂಪ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಈ ಫಲಿತಾಂಶವನ್ನು ಒಪ್ಪಲಾರೆ ಎಂದಿದ್ಧ.ನವೆಂಬರ್ 3 ರ ಫಲಿತಾಂಶದ ನಂತರ ನಿರಂತರವಾಗಿ ತನ್ನ ಬೆಂಬಲಿಗರನ್ನು ಹಿಂಸೆಗೆ ಪ್ರಚೋದಿಸುವಂತಹ ಟ್ವೀಟ್ ಮತ್ತು … Continue reading ಫ್ಯಾಶಿಷ್ಟರಿಂದ ಅಮೆರಿಕ ಸಂಸತ್ ಮೇಲೆ ದಾಳಿ;ಭಾರತವು ಎಚ್ಚರದಿಂದ ಇರಲಿ!!!

ಜಾತಿ ಜಿಹಾದ್

– ಜಯಕುಮಾರ್ ಹಾದಿಗೆ ಕೆಲವು ದಿನಗಳ ಹಿಂದೆ ಆಂದ್ರಪ್ರದೇಶದಲ್ಲಿ ದಲಿತ ಹುಡುಗನೊಬ್ಬ ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದ ಎಂಬ ಕಾರಣಕ್ಕಾಗಿ ಹುಡುಗನ ತಾಯಿಯನ್ನು ಅರೆ ಬೆತ್ತಲೆ ಗೊಳಿಸಿ ಹಗ್ಗದಿಂದ ಕೈಯನ್ನು ಹಿಂಬದಿಗೆ ಕಟ್ಟಿ ಮನಬಂದಂತೆ ಹೊಡೆದು ವಿಕೃತ ಆನಂದಿಸಿ ಮಹಿಳೆಗೆ ಚಿತ್ರಹಿಂಸೆ ಕೊಟ್ಟಿರುವ ಘಟನೆಯ ಫೋಟೊ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ದಲಿತ ಹುಡುಗ ಸವರ್ಣೀಯ ಹುಡುಗಿಯನ್ನು ಪ್ರೀತಿಸಿದ್ದು ಬಹುಶಃ ಸಾಂಪ್ರದಾಯವಾದಿಗಳಿಗೆ ಜಾತಿ ಜಿಹಾದ್ (ಜಾತಿಯ ಹೋರಾಟ) ಆಗಿ ಕಂಡಿರಬಹುದು.ಬಿಜೆಪಿ ಮತ್ತು ಸಂಘಪರಿವಾರದವರು ಲವ್ ಜಿಹಾದ್ ನಿಷೇಧ ಮಾಡಬೇಕು ಎಂದು ಗಂಟೆಗಟ್ಟಲೆ ಕೇಸರಿ ಬಣ್ಣದ ಭಾಷಣ ಮಾಡಿ ತಮ್ಮ ಅಭಿಮಾನಿಗಳಿಂದ ಒಂದಷ್ಟು … Continue reading ಜಾತಿ ಜಿಹಾದ್

ಪ್ರತೀ ಸೋಮವಾರ ಮತ್ತು ಶುಕ್ರವಾರದಂದು ಸಂಪಾದಕೀಯ ಲೇಖನ

ನಿಮ್ಮ ನೆಚ್ಚಿನ ಕನ್ನಡಿ ಬ್ಲಾಗ್ ನಲ್ಲಿ ಇನ್ನು ಮುಂದೆ ವಾರದ ಪ್ರತೀ ಸೋಮವಾರ ಮತ್ತು ಶುಕ್ರವಾರ ದಂದು ಸಾಂದರ್ಭಿಕ ಆಗುಹೋಗುಗಳ ವಿಮರ್ಶೆ ಮತ್ತು ವಿಚಾರ ಸಂಕಿರಣವನ್ನು ಸಂಪಾದಕೀಯ ರೂಪದಲ್ಲಿ ಲೇಖನವನ್ನು ಪ್ರಕಟಿಸಿಲಾಗುವುದು.ಓದುಗರು ಪ್ರೋತ್ಸಾಹಿಸಬೇಕಾಗಿ ವಿನಂತಿ. Continue reading ಪ್ರತೀ ಸೋಮವಾರ ಮತ್ತು ಶುಕ್ರವಾರದಂದು ಸಂಪಾದಕೀಯ ಲೇಖನ