ರಾಜಕಾರಣಿಗಳ ಕೊರಳಿನಲ್ಲಿ ಬಿಟ್ ಕಾಯಿನ್ ಹಗರಣ

– ಇಮ್ರಾನ್ ಪಿ ಜೆ

ದೇಶದಾದ್ಯಂತ ಬಿಟ್ ಕಾಯಿನ್ ಸದ್ದು ಜೋರಾಗಿ ಕೇಳಿಬರುತ್ತಿದೆ. ಅದರಲ್ಲೂ ಕರ್ನಾಟಕದ ಆಡಳಿತದಲ್ಲಿರುವ ಬಿಜೆಪಿಯ ಹಲವು ನಾಯಕರ ಕಾಲ ಬುಡಕ್ಕೆ ಬಿಟ್ ಕಾಯಿನ್ ಹಗರಣದ ಚೆಂಡನ್ನು ವಿರೋಧ ಪಕ್ಷ ಎಸೆದಿದೆ, ಅದೇ ಚಿಂಡು ತಿರುಗಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರ ಕಾಲ ಬುಡಕ್ಕೂ ಎಸೆಯುವಲ್ಲಿ ಬಿಜೆಪಿ ಸಫಲವಾಗಿದೆ. ಇನ್ನೊಂದು ಕಡೆ ಬಿಟ್ ಕಾಯಿನ್ ಎಂದರೇನೇ ತಿಳಿಯದ ನಾವೆಲ್ಲರೂ ಮೂಕವಿಸ್ಮಿತರಾಗಿ ಆರೋಪ ಪತ್ಯಾರೋಪಗಳನ್ನು ನೋಡುತ್ತಾ ಕೂತಿದ್ದೇವೆ‌.

ಜಗತ್ತಿನಾದ್ಯಂತ ಕ್ರಿಪ್ಟೋ ಕರೆನ್ಸಿಯ ಚಲಾವಣೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏನಿದು ಕ್ರಿಪ್ಟೋ ಕರೆನ್ಸಿ? ಯಾವುದೇ ಮಧ್ಯವರ್ತಿಗಳು ಅಂದರೆ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದೇ ವ್ಯವಹಾರ ನಡೆಸಬಹುದಾದ ಕರೆನ್ಸಿಯೇ ಕ್ರಿಪ್ಟೊ ಕರೆನ್ಸಿ. ಪ್ರಸ್ತುತ ನಾವೆಲ್ಲಾ ಉಪಯೋಗಿಸುವ ಕರೆನ್ಸಿ ಫಿಸಿಕಲ್ ರೂಪದಲ್ಲಿ ಅಂದರೆ ಕಣ್ಣಿಗೆ ಕಾಣ ಸಿಗುತ್ತಿದ್ದರೆ, ಕ್ರಿಪ್ಟೋ ಕರೆನ್ಸಿ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಕಾರ್ಯಾಚರಿಸುವ ನಗದು. ಒಂದು ವರದಿಯ ಪ್ರಕಾರ ಜಗತ್ತಿನಲ್ಲಿ 6000 ಕ್ರಿಪ್ಟೋ ಕರೆನ್ಸಿಗಳು ಇದೆಯಂತೆ ಅದರಲ್ಲಿ ಒಂದು ಈ ಬಿಟ್ ಕಾಯಿನ್‌. ಇದಲ್ಲದೇ #Ripple #Litecoin, ಮುಂತಾದ ಹಲವು ಹೆಸರುಗಳಲ್ಲಿ ಈ ಕರೆನ್ಸಿಗಳಿವೆ, ಆದರೆ ಬಿಟ್ ಕಾಯಿನ್ ಅತ್ಯಂತ ಜನಪ್ರಿಯ ಕರೆನ್ಸಿಯಾಗಿದೆ.

ಬಿಟ್ ಕಾಯಿನ್ ನಲ್ಲಿ ಬ್ಲಾಕ್ ಚೈನ್ ವಿಧಾನವನ್ನು ಉಪಯೋಗಿಸುತ್ತಾರೆ ಇದು ಒಂದು ಪಬ್ಲಿಕ್ ಲೆಡ್ಜರ್, ಇಲ್ಲಿ ನಾವು ನಡೆಸುವ ಎಲ್ಲಾ ವ್ಯವಹಾರಗಳು ಪಬ್ಲಿಕ್ ಲೆಡ್ಜರ್ ನಲ್ಲಿ ದಾಖಲಾಗುತ್ತದೆ. ಮಾರುಕಟ್ಟೆಗೆ ಬರುವ ಹೊಸ ಬಿಟ್ ಕಾಯಿನ್ ಗಳು ಮೈನಿಂಗ್ ಮಾಡುವ ಮೂಲಕ ಉತ್ಪಾದನೆಯಾಗುತ್ತದೆ. ಮೈನಿಂಗ್ ಎಂದರೆ ಬ್ಲಾಕ್ ಚೈನ್ ಅಲ್ಲಿ ನಡೆಸುವ ಎಲ್ಲಾ ವ್ಯವಹಾರಗಳನ್ನು ಮಾನಿಟರ್ ಅಥವಾ ಸ್ಟೋರ್ ಮಾಡುವ ಕ್ರಿಯೆಗೆ ಮೈನಿಂಗ್ ಎನ್ನುತ್ತಾರೆ ಇದು ಬ್ಯಾಕೆಂಡ್ ನಲ್ಲಿ ಕಂಪ್ಯೂಟರ್ ಮಾಡುವ ಕೆಲಸ ಅವರಿಗೆ ಮೈನರ್ ಗಳು ಎನ್ನುತ್ತಾರೆ. ಇವರು ಮಾಡುವ ಮೈನಿಂಗ್ ಗೆ ಪ್ರತಿಯಾಗಿ ಹೊಸ ಬಿಟ್ ಕಾಯಿನ್ ಉತ್ಪತ್ತಿಯಾಗುತ್ತದೆ.

ಈ ಪಬ್ಲಿಕ್ ಲೆಡ್ಜರ್ ನಲ್ಲಿ ದಾಖಲಾಗುವ ವ್ಯವಹಾರಗಳನ್ನು ಯಾರಿಗೆ ಬೇಕಾದರೂ ಮಾಹಿತಿ ಪಡೆಯಬಹುದು ಆದರೆ ಹೆದರಬೇಕಾಗಿಲ್ಲ. ಇಡೀ ವ್ಯವಹಾರ ನಮ್ಮ ಹೆಸರಿನಲ್ಲಿ ಇರುವುದಿಲ್ಲ ಬದಲಾಗಿ ಕೇವಲ ಕೋಡ್ ವರ್ಡ್ ಮೂಲಕ ಇರುತ್ತದೆ. ಬಿಟ್ ಕಾಯಿನ್ ಹಲವು ದಂದೆಕೋರರಿಗೆ ಬಾಗಿಲು ತೆರೆದಿರುವುದು ಇಲ್ಲೇ. ಕರ್ನಾಟಕದಲ್ಲಿ ಸದ್ಯ ಕೇಳಿ ಬಂದಿರುವ ಆರೋಪ, ಬಿಟ್ ಕಾಯಿನ್ ಮೂಲಕ ಹಲವು ವ್ಯಕ್ತಿಗಳಿಂದ ತಮ್ಮ ಕೆಲಸ ಮಾಡಲು ಲಂಚ ಪಡೆದಿರುವುದು ಮತ್ತು ಡ್ರಗ್ಸ್ ಕೇಸ್ ಗಳನ್ನು ಮುಚ್ಚಿ ಹಾಕಲು ಲಂಚವನ್ನು ಇದೇ ಬಿಟ್ ಕಾಯಿನ್ ಮೂಲಕ ಪಡಯಲಾಗಿದೆ ಎಂದು ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಹಗರಣದಲ್ಲಿ BJP Karnataka ದ ಪ್ರಭಾವಿ ನಾಯಕರು ಇರುವ ಬಗ್ಗೆ ಕಾಂಗ್ರೆಸ್ ಬಹಿರಂಗವಾಗಿ ಹೇಳುತ್ತಿದೆ,ಇರಲೂಬಹುದು ಬ್ಲ್ಯಾಂಕ್ ಚೆಕ್ ಮೂಲಕ ಲಂಚ ಪಡೆದವರಿಗೆ ಇದೇನು ದೊಡ್ಡ ವಿಚಾರವಲ್ಲ ಬಿಡಿ.

ಒಟ್ಟಾರೆ ಭಾರತದಲ್ಲಿ ನೋಟು ನಿಷೇಧದ ನಂತರ ಆರ್ಥಿಕ ವ್ಯವಹಾರವು ಸಂಪೂರ್ಣ ಡಿಜಿಟಲೀಕರಣವಾದ ಪರಿಣಾಮ ಹೊಸ ಆವಿಷ್ಕಾರ, ಹೊಸ ತಂತ್ರಜ್ಞಾನಗಳು ಈ ರೀತಿಯ ಸಾಮಾಜಿಕ ಪಿಡುಗುಗಳಿಗೆ ಕಾರಣವಾಗುತ್ತಿರವುದು ವಿಪರ್ಯಾಸ. ಬಿಟ್ ಕಾಯಿನ್ ಹಗರಣದ ಬಗ್ಗೆ ನಿಷ್ಪಕ್ಷ ತನಿಖೆಯಾಗಲಿ ಈ ಹಗರಣದಲ್ಲಿ ಇರುವ ಎಲ್ಲಾ ವೈಟ್ ಕಾಲರ್ ಗಳಿಗೆ ಕಾನೂನಿ ರುಚಿ ಗೊತ್ತಾಗಲಿ. ದೇಶವು ಇಂತಹಾ ಡಿಜಿಟಲ್ ಕರೆನ್ಸಿಗಳ ಬಗ್ಗೆ ಸರಿಯಾದ ಕಾನೂನನ್ನು ರೂಪಿಸಲಿ.

Leave a comment