
ಹರ್ಷದ್ ಎಸ್.ಕೆ.
ಕೊಟ್ಟೆವು ಮತವನ್ನು
ಜ್ಯಾತ್ಯಾತೀತ ವೆಂದು
ಇಟ್ಟೆವು ನಂಬಿಕೆಯನ್ನು
ನಮ್ಮದೆ ಜನರೆಂದು
ಚುಚ್ಚಿತು ಮುಳ್ಳಾಗಿ
ಆರೆಸೆಸ್ಸಿನ ಬೀಜವಾಗಿ
ಹಬ್ಬಿತು ವಿಷವಾಗಿ
ಕೊಂದಿತು ಜೀವಂತವಾಗಿ
ಕಾಣದ ಕಣ್ಣಿಗೆ ಮಣ್ಣನ್ನು ಎರಚಿ
ಬಾಬರಿಯನ್ನು ನೆಲಸಮವನ್ನಾಗಿಸಿ
ಹೇಳಿದರು ಶಾಂತಿ ಕಾಪಾಡಿ ಯೆಂದು
ನಾವೆಲ್ಲರೂ ಶಾಂತಿ ಪ್ರಿಯರೆಂದು
ಅರಿವಿಲ್ಲದ ಸಮುದಾಯ
ಹಿಂಬಾಲಿಸಿತು ಪಕ್ಷವನ್ನು
ತಿಳಿದಿರಲಿಲ್ಲ ಅಂದು
ಕಾಂಗ್ರೆಸ್ ಆರೆಸೆಸ್ಸಿನ ಮರಿ ಎಂದು
ಕಾಲವು ಬದಲಾಯಿತು
ಬಾಬರಿಯು ಬರಡಾಯಿತು
ಪೌರತ್ವವು ಪರೀಕ್ಷೆಯಾಯಿತು
ಜೈಲುಗಳು ನಮಗೆಂದೆ ಮೀಸಲಾಯಿತು
ಗುಂಡಿಟ್ಟ ಜೀವಗಳಿಗೆ ಬೆಲೆಯೆ ಇಲ್ಲದಂತಾಯಿತು
ನೋವುಂಡಾಗ ಕಾಣದ ಮುಖಗಳು
ಮುಂದೆ ಕಾಣುತ್ತಿದೆ ಇಂದು
ಮತ ನಮಗೇನೆ ನೀಡಬೇಕೆಂದು
ನೋವುಗಳು ಧ್ವನಿಯಾಗಿ ಬದಲಾಗಿದೆ ಇಂದು
ನಮ್ಮ ನಿಲುವು ಏನೆಂದು
ತೀರ್ಮಾನಿಸಬೇಕಾಗಿದೆ ಇಂದು
