
– ಇಮ್ರಾನ್ ಪಿಜೆ
ದೇಶದ ಹಲವು ರಾಜ್ಯದಲ್ಲಿ ಇತ್ತೀಚೆಗೆ ಬಂದ ಉಪ ಚುನಾವಣೆಯ ಫಲಿತಾಂಶವು ಉತ್ತಮ ಸಂದೇಶವನ್ನು ಸಾರಿದೆ, ಜನರೇ ಆಡಳಿತದಲ್ಲಿರುವ #BJP ಸರಕಾರದ ವಿರುದ್ಧ ಸಮರಕ್ಕೆ ಸನ್ನದ್ಧರಾಗಿದ್ದಾರೆ ಎಂಬ ಸಂದೇಶ ಮೂಡಿದೆ. ಆದರೆ ವಿರೋಧ ಪಕ್ಷಗಳ ಪಾತ್ರವನ್ನು ನೋಡುವಾಗ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಇದನ್ನೆಲ್ಲಾ ಬಹಳ ಸುಲಭವಾಗಿ ಓವರ್‌ಕಮ್ ಮಾಡಿದರೂ ಅಚ್ಚರಿಯಿಲ್ಲ.
3 ಲೋಕಸಭೆ ಹಾಗೂ 11 ರಾಜ್ಯಗಳ 29 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶದ ಮೇಲ್ನೋಟವು ಮತದಾರರು ಬಿಜೆಪಿಗೆ ಎಚ್ಚರಿಕೆ ನೀಡಿದರೆ, ಇತರ ಪಕ್ಷಗಳತ್ತ ಒಲವು ತೋರಿಸಿದ್ದಾರೆ. ವಿಷೇಶವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ J.P.Nadda ಅವರ ರಾಜ್ಯ ಹಿಮಾಚಲ ಪ್ರದೇಶದಲ್ಲಿ ನಡೆದ ಒಂದು ಲೋಕ ಸಭೆ ಮತ್ತು ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶೂನ್ಯ ಸಂಪಾದನೆಯು #RSS ವಲಯದಲ್ಲಿ ಹಲವು ಚರ್ಚೆಯಾಗಿದೆಯಂತೆ. ಅಲ್ಲಿ ಆಡಳಿತದಲ್ಲಿರುವ ಮುಖ್ಯಮಂತ್ರಿ ಬಿಜೆಪಿಯ ಜೈ ರಾಮ್ ಠಾಕೂರ್ ಗೂ ಬಹಳ ತಲೆನೋವಾಗಿದೆ.
ಇನ್ನು ಕರ್ನಾಟಕದ ಎರಡು ಉಪ ಚುನಾವಣಾ ಫಲಿತಾಂಶ ನೋಡವುದಾದರೆ, ಸಿಂದಗಿ ಕ್ಷೇತ್ರ ಬಿಜೆಪಿ ವಶವಾದರೂ ಕಾಂಗ್ರೆಸ್ ಪಡೆದ ಮತವು ಕಳೆದ ಬಾರಿಗಿಂತ ಎರಡು ಪಟ್ಟು ಜಾಸ್ತಿಯಾಗಿದೆ. ಸಿಂದಗಿಯಲ್ಲಿ 2018 ರಲ್ಲಿ ಕಾಂಗ್ರೆಸ್ 22,818 ಮತ ಪಡೆದಿತ್ತು ಆ ಮತಗಳು ಬಾರಿ 62 ಸಾವಿರ ದಾಟಿದೆ. ಇನ್ನು ಮುಖ್ಯಮಂತ್ರಿ Basavaraj Bommai ಅವರ ತವರು ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರಿನಿವಾಸ್ ಮಾನೆ ಬಗ್ಗೆ ಅಲ್ಪಸಂಖ್ಯಾತರಿಗೆ ಅವರು ಮೃದು ಹಿಂದುತ್ವವಾದಿ ಮತ್ತು ಆರ್ ಎಸ ಎಸ್ ನಂಟಿನ ಬಗ್ಗೆ ಹಲವು ಅನುಮಾನಗಳಿತ್ತು. ಈ ಅಸಮಾಧಾನದಿಂದ ಚುನಾವಣಾ ಪ್ರಚಾರಕ್ಕೆ ಮುಸ್ಲಿಂ ಯುವಕರು ಬೀದಿಗೆ ಬಂದಿರಲಿಲ್ಲ ಕೊನೆಯ ಕ್ಷಣದಲ್ಲಿ B.Z Zameer Ahmed Khan ನಡೆಸಿದ ಚುನಾವಣಾ ಪ್ರಚಾರವು ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮತ್ತು ಅಲ್ಲಿನ ಉಸ್ತುವಾರಿಯನ್ನು ಕೂಡ ಮುಸ್ಲಿಂ ನಾಯಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಗೆ ಪಕ್ಷ ವಹಿಸಿತ್ತು ಈ ತಂತ್ರಗಾರಿಕೆ ಕೂಡ ಸ್ವಲ್ಪ ಮಟ್ಟಿಗೆ ವರ್ಕೌಟ್ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ Nalin Kumar Kateel ಎಲ್ಲಾ ಭಾಷಣಗಳಲ್ಲಿ ಈ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎನ್ನುತ್ತಿದ್ದರು, ಆದರೆ ಫಲಿತಾಂಶವು ಬಿಜೆಪಿಗರ ಪಾಲಿಗೆ ನಿರಾಸೆ ಮೂಡಿಸಿದೆ.
ಒಟ್ಟಾರೆಯಾಗಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಮೋದಿ ಆಡಳಿತದ ವಿರುಧ್ದ ಜನರು ತಿರುಗಿ ಬೀಳುವ ಎಲ್ಲಾ ಸಾಧ್ಯತೆಗಳಿವೆ. ಬಿಜೆಪಿಯೇತರ ಎಲ್ಲಾ ಪಕ್ಷಗಳು ಜನರ ಸಮಸ್ಯೆ, ಆಡಳಿತದ ವೈಫಲ್ಯ, ಮುಂತಾದ ಉತ್ತಮ ವಿಷಗಳಲ್ಲಿ ಚುನಾವಣೆಗೆ ಸಿದ್ದರಾಗಿ ಕಾರ್ಯಕರ್ತರನ್ನು ತಕ್ಷಣವೇ ತಯಾರಿ ಮಾಡಬೇಕಾದ ಅವಶ್ಯಕತೆಯಿದೆ.