ದಾರಂಗ್ ನ ಹುತಾತ್ಮರೇ

-ರಿಯಾಝ್ ಕಡಂಬು

ನೀವು ಮಣಿಯಲಿಲ್ಲ
ಬಂದೂಕುಗಳಿಗೆ ಎದೆಯೊಡ್ಡಿ
ವೀರ ಹುತಾತ್ಮತೆಗೆ
ಸಾಕ್ಷಿಯಾದಿರಿ…

ಫ್ಯಾಶಿಸಂನ ಚಿಂತನೆಗಳು
ದ್ವೇಷದ ಗುಂಡನ್ನು
ತುಂಬಿಸಿದ್ದ ಬಂದೂಕು
ನಿಮ್ಮೆದೆಯ ಸೀಳಿತು..

ನಿಮ್ಮ ಎದೆಯೊಳಗಿನಿಂದ
ಚಿಮ್ಮಿದ ರಕ್ತ..
ಸಂವಿಧಾನವ , ಪ್ರಜಾಪ್ರಭುತ್ವವ
ಅಣಕಿಸಿ ಬಿಟ್ಟಿತು

ಛಾಯಾಗ್ರಹಕ ಪತ್ರಕರ್ತ
ನಿಮ್ಮ ಎದೆ ಮೇಲೆ
ತುಳಿದು, ಅಮಾನವೀಯತೆಗೆ
ಉದಾಹರಣೆಯಾದ..

ಅವರಿಗೆ ನಿಮ್ಮ
ನೆಲ, ಸಂಪತ್ತಿಗಿಂತ
ನಿಮ್ಮ ಅಸ್ತಿತ್ವವ
ಕಸಿದುಕೊಳ್ಳಬೇಕಿತ್ತು…

ನೀವಂತು ಬಿಟ್ಟು
ಬಿಡಲು ಒಪ್ಪದೇ
ಅವರೆದುರು ಸಿಡಿದು
ಸೆಟೆದು ನಿಂತಿರಿ

ಅಂದು ಬ್ರಿಟೀಷರೆದುರು
ನಮ್ಮ ಪೂರ್ವಜರು
ಜೀವ ನೀಡಿದ ಅದೇ
ಚಿತ್ರಣ ಇದಾಗಿತ್ತು

ನಿಮ್ಮ ಹುತಾತ್ಮತೆ
ಬರಿದಾಗದು, ಈ ಹೋರಾಟದ
ಕಿಚ್ಚು ಹೊಸ
ತಲೆಮಾರುಗಳ ಪಸರಿಸಲಿಕ್ಕಿದೆ

ಅವರು ಹಚ್ಚಿದ
ಜ್ವಾಲೆಗಳ ನಂದಿಸಲಿದೆ
ನಿಮ್ಮ ತ್ಯಾಗಕ್ಕೆ
ನ್ಯಾಯ ದೊರಕಲಿದೆ ..

ಅಂದು ಫ್ಯಾಶಿಸಂ
ನೆಲಕಚ್ಚಿ ಹೋಗಲಿದೆ
ನ್ಯಾಯದ ಮೇಲೆ
ರಾಷ್ಟ್ರ ತಲೆಯೆತ್ತಲಿದೆ..

ಇದು ನಿಮ್ಮ
ಹುತಾತ್ಮತೆಯ ಮೈಗೂಡಿಸಿ
ಸೃಷ್ಟಿಕರ್ತನೊಂದಿಗೆ ಮಾಡಿದ
ಪ್ರತಿಜ್ಞೆಯಾಗಿದೆ…

Leave a comment