
– ಫಯಾಝ್ ದೊಡ್ಡಮನೆ
ಪೆಗಾಸಸ್ ಪೆಗಾಸಸ್
ಸಂಸತ್ತಿನಲ್ಲೂ ಪೆಗಾಸಸ್
ವಾಟ್ಸಪ್ಪಿನಲ್ಲೂ ಪೆಗಾಸಸ್
ಫೇಸ್ಬುಕ್ನಲ್ಲೂ ಪೆಗಾಸಸ್
ಎಲ್ಲೆಲ್ಲೂ ಪೆಗಾಸಸ್
ಅಬ್ಬಾ! ಏನಿದು ಪೆಗಾಸಸ್
ಭಾವನೆಗಳ ಅರಿಯುವ ಪೆಗಾಸಸ್
ವೇದನೆಯ ತಿಳಿಸುವ ಪೆಗಾಸಸ್
ಮನಸ್ಸಿನಾಳಕ್ಕಿಳಿಯುವ ಪೆಗಾಸಸ್
ಮನಸೇ!ನೀ ಪೆಗಾಸಸ್
ಮಾತನಾಡಿದರೆ ಅಂಟುವ ಪೆಗಾಸಸ್
ಜೋರು ಕೆಮ್ಮಿದರೆ ನೋಯುವ ಪೆಗಾಸಸ್
ದನಿ ಏರಿಸಿದರೆ ಅವರ ಬೆದರಿಸುವ ಪೆಗಾಸಸ್
ಪೆಗಾಸಸ್!ಏನಿದು ಪೆಗಾಸಸ್?
ಮೊಬೈಲ್ ಬಂಧಿಸುವ ಪೆಗಾಸಸ್
ಫೋನು ಕದ್ದಾಲಿಸುವ ಪೆಗಾಸಸ್
ಕಣ್ಣಿಗೆ ಕಾಣದ ಪೆಗಾಸಸ್
ಅಬ್ಬಾ! ಈ ಪೆಗಾಸಸ್
ತಪ್ಪನು ತೋರಿಸಿದರೆ ಪೆಗಾಸಸ್
ಎಲ್ಲವನ್ನು ಒಪ್ಪಿದರೆ ಪೆಗಾಸಸ್
ಆಳುವವರ ಗೋಳು ಇದು ಪೆಗಾಸಸ್
ಸರ್ಕಾರ್! ಈ ಪೆಗಾಸಸ್
ಕಂಬಿಗಳು ಬೇಡ ಈ ಪೆಗಾಸಸ್ಗೆ
ತೋರುಬೆರಳ ತೋರಿಕೆ ಬೇಡ ಪೆಗಾಸಸ್ಗೆ
ಬಾಯಿ ಬಿಚ್ಚಿಸಲು ನಾಲ್ಕು ಗೋಡೆಗಳೇ ಬೇಕಾಗಿಲ್ಲ ಪೆಗಾಸಸ್ಗೆ ಬಂಧಿಸಲು
ನೀ ಬಂಧಿ! ಪೆಗಾಸಸ್, ಈ ಪೆಗಾಸಸ್
ಸುಮ್ಮನಿರಿ ಜೋಕೆ!ಈ ಪೆಗಾಸಸ್
ಪ್ರತಿಭಟಿಸದಿರಿ, ಜೋಕೆ! ಪೆಗಾಸಸ್
ಅವರನ್ನು ಹಿಂಬಾಲಿಸದಿರಿ, ಜೋಕೆ!ಪೆಗಾಸಸ್
ನೀನಾಗಿರಬೇಕಾ? ಜೋಕೆ! ಪೆಗಾಸಸ್
🔥
LikeLike