– ಅಫ್ರಾ

ಆದಿವಾಸಿಗಳ ಮಧ್ಯೆ ಸಾಗಿ ಹಲವಾರು ವರುಷಗಳಿಂದ ಅವರ ಸೇವೆಯಲ್ಲಿ ನಿರತರಾಗಿದ್ದ, ಅವರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದ ಫಾದರ್ ಸ್ಟಾನ್ ಸ್ವಾಮಿ ಜೈಲಿನಲ್ಲಿಯೇ ಮರಣವಪ್ಪಿದ್ದಾರೇ ಅಥವಾ ಈ ದೇಶದ ವ್ಯವಸ್ಥೆ ಅವರನ್ನು ಕೊಂದು ಹಾಕಿತೇ? ಹಲವು ಬಾರಿ ಅನಾರೋಗ್ಯದ ಕಾರಣಕ್ಕಾಗಿ ಜಾಮೀನಿಗೆ ಅಪೇಕ್ಷಿಸಿದರೂ ನಿರಾಕರಿಸಲಾಯಿತು. ಆಡಳಿತದ ವಿರುದ್ಧದ ಬಿನ್ನಾಭಿಪ್ರಾಯದ ಧ್ವನಿಗಳನ್ನು ಬಲಿಯಾಗಿಸುವ ಭಾಗವಾಗಿ ಸ್ಟಾನ್ ಸ್ವಾಮಿಯವರ ಜೀವ ಹೀರಲಾಗಿದೆ.
ಸ್ಟ್ಯಾನ್ ಸ್ವಾಮಿ ಭಾರತದ ಪಾದ್ರಿ ಹಾಗೂ ಹೋರಾಟಗಾರ, ಸಮಾಜವಾದಿ ಮತ್ತು ಉದ್ಯಮಿಯಾಗಿದ್ದರು. ಅವರು ಕೇರಳದ ನಿವಾಸಿಯಾಗಿದ್ದರು. ದೇಶದ ಸಾಮಾಜಿಕ ಕಲ್ಯಾಣಕ್ಕೆ ಹೆಸರುವಾಸಿಯಾಗಿದ್ದರು. ಅವರು ಮುಖ್ಯವಾಗಿ ಝಾರ್ಕಂಡ್ ನಗರದ ಬುಡಕಟ್ಟು ಜನರ ಮೂಲಭೂತ ಹಕ್ಕುಗಳಿಗಾಗಿ ಕೆಲಸ ಮಾಡಿದರು.
NIA ಯ ದಾಳಿಯ ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಸರು ವಾಸಿಯಾದರು. ಸ್ಟ್ಯಾನ್ ಸ್ವಾಮಿಯವರು 1937, 26 ಏಪ್ರಿಲ್ ರಲ್ಲಿ ಕೇರಳ ರಾಜ್ಯದಲ್ಲಿ ಜನಿಸಿದರು. ಸ್ವಾಮಿ ತಮಿಳುನಾಡಿನ ತಿರುಚಿಯಿಂದ ಬಂದವರು. 1970 ರ ದಶಕದಲ್ಲಿ ಅವರು ದೇವತಾಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ಫಿಲಿಪೈನ್ನಲ್ಲಿ ಸಮಾಜ ಶಾಸ್ತ್ರದಲ್ಲಿ ಸ್ನಾತಕ್ಕೋತರ ಪದವಿಯನ್ನು ಪಡೆದರು. ಅಲ್ಲಿ ಅವರು ಆಡಳಿತದ ವಿರುದ್ಧ ಸರಣಿ ಪ್ರತಿಭಟನೆಗಳು ಮಾತ್ತು ಪ್ರದರ್ಶನಗಳನ್ನು ಎದುರಿಸಿದರು. ಅವರು ಹೆಚ್ಚಿನ ಅಧ್ಯಯನದ ಸಮಯದಲ್ಲಿ, ಅವರು ಬ್ರೆಜಿಲಿಯನ್ ಕ್ಯಾಥೋಲಿಕ್ ಹೇಳ್ದರ್ ಸೆಮಾರಾ ಅವರೊಂದಿಗೆ ಸ್ನೇಹ ಬೆಳೆಸಿದರು, ಬಡ ಜನರೊಂದಿಗೆ ಅವರ ಕೆಲಸವು ಅವರ ಮೇಲೆ ಪ್ರಭಾವ ಬೀರಿತು.
ಫಾದರ್ ಸ್ಟ್ಯಾನ್ ಸ್ವಾಮಿ ಝಾರ್ಕಂಡ್ನ ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ 30 ಕ್ಕೂ ಹೆಚ್ಚು ವರ್ಷಗಳಿಂದ ಭೂಮಿ, ಅರಣ್ಯ ಮತ್ತು ಕಾರ್ಮಿಕ ಹಕ್ಕುಗಳ ಕುರಿತು ಆದಿವಾಸಿ ಸಮುದಾಯಗಳ ವಿವಿಧ ವಿಷಯಗಳ ಕುರಿತು ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸದಿರುವುದನ್ನು ಪ್ರಶ್ನಿಸುವುದು ಇದರಲ್ಲಿ ಸೇರಿದೆ, ಇದು ರಾಜ್ಯದ ರಕ್ಷಣ, ಯೋಗಕ್ಷೇಮ ಮತ್ತು ಅಭಿವೃದ್ಧಿಗಾಗಿ ಕೇವಲ ಆದಿವಾಸಿ ಸಮುದಾಯದ ಸದಸ್ಯರೊಂದಿಗೆ ಬುಡಕಟ್ಟು ಸಲಹಾ ಮಂಡಳಿಯನ್ನು ಸ್ಥಾಪಿಸಲು ಷರತ್ತು ವಿಧಿಸಿದೆ.
ಭೀಮ ಕೋರ್ನ್ಗಾವ್ ಪ್ರಕರಣದ ತನಿಖೆಯನ್ನು ವಹಿಸಿಕೊಂಡ NIA, ಎಲ್ಲಾ ಆರೋಪಿಗಳಿಗೆ ನಿಷೇಧಿತ CPI ಜೊತೆ ಸಂಬಂಧವಿದೆ ಎಂದು ಆರೋಪಿಸಿತು. ಈ ಪ್ರಕರಣದಲ್ಲಿ 2018ರಿಂದ ಬಂಧನಗಳು ನಡೆದಿದೆ, 16 ಜನರನ್ನು ಬಂಧಿಸಲಾಗಿತ್ತು, ಅದರಲ್ಲಿ ಸ್ಟ್ಯಾನ್ ಸ್ವಾಮಿ ಕೂಡ ಸೇರಿದ್ದರು.
ಕಳೆದ ವರ್ಷ ಅಕ್ಟೋಬರ್ 7 ರಂದು ರಾಂಚಿಯಿಂದ ಸ್ವಾಮಿಯನ್ನು NIA ಬಂದಿಸಿತು, ಮರುದಿನ ಮುಂಬೈ ಗೆ ಕರೆತಂದು, ಸ್ವಾಮಿಯನ್ನು ನ್ಯಾಯಾಂಗ ವಶಕ್ಕೆ ಕಳುಹಿಸಲಾಗಿತ್ತು. ನವೆಂಬರ್ 6, 2020 ರಂದು ಪಾದ್ರಿ ಸ್ಟ್ಯಾನ್ ಸ್ವಾಮಿಯವರು ಸ್ಟ್ರಾ ಮತ್ತು ಸಿಪ್ಪೆರ್ ಅನ್ನು ಅನುಮತಿಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ತೆರಳಿದರು. ಮೇ 4 ರಂದು ಸ್ವಾಮಿ ತನ್ನ ವೈದ್ಯಕೀಯ ಜಮೀನು ನಿರಾಕರಣೆ ವಿರುದ್ಧ ಮೇಲ್ಮನವಿಯನ್ನು ಹೈ ಕೋರ್ಟ್ ಗೆ ತೆರಳಿದರು. ಜೂಲೈ 4 ರಂದು ಹ್ರದಯಾಘಾತದಿಂದ ಬಳಲುತಿದ್ದರು ಮತ್ತು ಅವರನ್ನು ವೆಂಟಿಲೇಟರ್ ಮೇಲೆ ಹಾಕಲಾಯಿತು ಮತ್ತು ಜೂಲೈ 5 ರಂದು ವಿದಾಯ ಹೇಳಿದರು.
ಒಟ್ಟಿನಲ್ಲಿ ಜನಪರವಾದ ಚಿಂತನೆಇರುವವರು, ಸರಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುತ್ತಲೇ ಇರುತ್ತಾರೆ. ಅದು ಜನವಿರೋಧಿ ಆಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿರುವಾಗ ಬಿನ್ನಾಭಿಪ್ರಾಯದ ಧ್ವನಿಗಳನ್ನು ಅಡಗಿಸುವ ಅಜೆಂಡಾಗಳ ಭಾಗವಾಗಿ ಸ್ಟಾನ್ ಸ್ವಾಮಿಯವರ ನಿಧನವಾಗಿದೆ.ಮೋದಿ ಸರಕಾರದ ಕರಾಳ ಹೆಜ್ಜೆಗಳು ಇನ್ನಷ್ಟು ಜೀವಗಳನ್ನು ಹೀರಬಹುದು, ಜೈಲಲ್ಲಿ ಕೂಡಿ ಹಾಕಬಹುದು. ಇದನ್ನು ಪ್ರಶ್ನೆಸುವ ಒಂದು ಶಕ್ತಿಯಾಗಿ ಪ್ರಜಾಪ್ರಭುತ್ವ ಸ್ನೇಹಿಗಳು ಮೌನಮುರಿದು ಸೆಟೆದುನಿಲ್ಲಬೇಕಿದೆ.
🔥👍
LikeLike