ಗೋ ನಮೋ

-ಎಚ್ ಪಟ್ಟಾಭಿರಾಮ ಸೋಮಯಾಜಿ

ತಟ್ಟಲು ಲೋಟ ತಟ್ಟೆ
ಕುಟ್ಟಲು ಬಟ್ಟಲು ಜಾಗಟೆ
ಊದಲು ಬಲಮುರಿ ಶಂಖ
(ಅದರ ಕೂದಲು ಕೊಂಕ)

ಪಾತ್ರೆ ಪರಡಿ
ಇರಲಿ ರೆಡಿ
ತನ್ನಿ ಬೀದಿಗೆ
ಬನ್ನಿ ಬಾಲ್ಕನಿಗೆ
ಐವತ್ತಾರಿಂಚ ಮೀರಿ
ಎದೆ ತಿದಿ ಊದಲಿ
ಶಂಖ ಪಾಂಚಜನ್ಯ ಮೊಳಗಲಿ
ತೇಲುವ ಹೆಣ ಮುಳುಗಲಿ
ಸ್ಮಶಾನ ಹೊತ್ತಿಬತ್ತಲಿ
ಹೆಣದ ಹಬ್ಬ ಮೆರವಣಿಗೆ
ನಡೆಯಲಿ ಊರೂರಲಿ
ಊರುಕೇರಿ ಉರಿದು ನರಳಲಿ

ರಕ್ತ ಪಿಪಾಸೆ ಏಕತಾರಿ
ಮಂದ್ರ ಬಿಟ್ಟು ಕೂಗುಮಾರಿ ಮಾರ್ದನಿಸಲಿ

ಏಳಿ ಎದ್ದೇಳಿ
ಮೂವತ್ತು ಮೇ ಎರಡನೆ
ವಾರ್ ಷಿಕೋತ್ ಶವ
ಗುರಿ ಮುಟ್ಟುವವರೆಗು ನಿಲ್ಲದಿರಿ
ಒಕ್ಕೊರಳಲಿ ಕೂಗಿರಿ
ಗೋ ನಮೋ ಗೋ
ಗವಾಕ್ಷಿ ಕಡೆ ಕಣ್ಣಿಡಿ
ಅಂತರ ಪಿಶಾಚಿ
ತೊಲಗಿದ ನಂತರ

ಆರಾಮಲ್ಲಿ ಮತ್ತೆ ರಾಮರಾಮ
ಎಂದು ಮೊಂಬತ್ತಿ ಬೆಳಗಿರಿ

Leave a comment