– ಪಟ್ಟಾಭಿರಾಮ ಸೋಮಯಾಜಿ
(ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯ ಹಂಪನಕಟ್ಟೆ)
ಕಾಳಕಪ್ಪು ಅಕರಾಳ
ವಿಕರಾಳ ರಾತ್ರಿ
ಉಸಿರಡಗಿ
ನೆಲ ಕುಸಿದು
ಎದೆ ನಡುಗಿ
ತರಗೆಲೆ
ಚರಪರ ಸದ್ದು
ಎಲೆಯಲೆಯಲೆ
ನಾಯಿ ನರಿಯೂಳು
ಗೂಗೆ ಘೂಕ್ಕ
ಹಿಂಡಿ ಕರುಳು
ಮಸಣ ಹೊಕ್ಕು
ಳಲ್ಲಿ ಹೂವಿಲ್ಲ
ಮೂಳೆಯಷ್ಟೆ ಮಾಂಸವಿಲ್ಲ
ಆತ್ಮ ಬರ್ಬರ
ಬುರುಡೆ ಸೀದು
ಚಟಪಟ
ಸ್ಮಶಾನ ರೋದನ
ಅಬ್ಬ ಖಾಲಿ ಕೊಟ್ಟಿಗೆ
ಹೆಣದ ಪುಣ್ಯ
ಸ್ಮಶಾನ ಸಿಕ್ಕು ಒಟ್ಟಿಗೆ
ಕದ್ದ ಕಟ್ಟಿಗೆ
ಉರಿ ಬೆಂಕಿ ನಾಟ್ಯ ನಾಲಿಗೆ
ತೇಲುತಿರುವ ಹೆಣಗಳೆ
ನೀರ ಮೇಲೆ ನಡೆದಿರೆ
ಜಲ ಸಮೂಹ ಸಮಾಧಿಯೆ
ನಮಾಮಿ ಗಂಗೆ
ಇಡಿಇಡಿ ನುಂಗಳೆ
ಗಂಗಾಜಲ ಮಂಗಳೆ
ಮೈಯೆಲ್ಲ ಕಣ್ಣು
ವೃಣಗಳೆ
ನೆತ್ತರಿರದ ಕಂಗಳೆ
ಅಂಧರೆ
ಜೀವಂತ ಹೆಣಗಳೆ
ಎಲ್ಲಿ
ಶೋಕೀಲಾಲ
ಸಂಘಿ ಡೊಂಕು ಬಾಲ
ಎಲ್ಲಿ ಯಾವ ಹುತ್ತ ಬಿಲ
ಚೌಕೀದಾರ ಖಿದರ
