ಬುಲೆಟ್ಟುಗಳು ನೋವು ತರಿಸುವಷ್ಟು
ನುಣುಪಾಗಿಲ್ಲ,ಅಮ್ಮಾ
ಟಿಯರ್ ಗ್ಯಾಸ್ ಗಳೇನು ಮೂಗಿಗೆ ಬಡಿಯುವಷ್ಟು ಶಕ್ತವಾಗಿಲ್ಲ ಅಮ್ಮ
ಸುರಿಯುವ ರಕ್ತದಿ ಕೆಂಪಾದ ಪಾದ
ಮೈ ತುಂಬೆಲ್ಲಾ ಬೆವರಮಳೆ
ಏದುಸಿರು ಬಿಡುತ್ತಾ ಓಡಿ ಬಂದ ಪೋರನ
ಸಾಹಸದ ತುಸು ಹೆಮ್ಮೆಯಿಂದಲೇ
ಅವನತ್ತ ಧಾವಿಸಿದಳು
ನೋವೇನೋ?
ಅಂಬೆಗಾಲಿಡುವಾಗ “ಪ್ಯಾಲೆಸ್ತೀನ್ ನಮ್ಮದು “
ಎಂದವಳು ನೀನೇ ಅಮ್ಮಾ
ಪ್ಯಾಂಟು ಹಾಕಲು ಬರದಾಗ
ಹೊರಗೋಡಿ ಎಸೆದ ಕಲ್ಲು
ಅವರ ನೆತ್ತಿ ಒಡೆದದ್ದು ನೆನಪಿದೆ ಅಮ್ಮಾ
ಈಗ ಹದಿಮೂರರ ಯುವಕ ನಾನು
ಬುಲೆಟ್ಟಿನ ನೋವನು
ಟಿಯರ್ ಗ್ಯಾಸಿನ ಅಮಲನು
ತಡೆಯುವ ಶಕ್ತಿ ಇದೆ ಅಮ್ಮಾ
ಯಾಕಮ್ಮ ತೆಗೆದಿಲ್ಲ ಬುಲೆಟ್ಟನ್ನು?
ಕಸಕ್ಕನೆ ಕಸಿದು
ಸತ್ತೇ ಹೋದೆನೆನ್ನುವಂತೆ
ನೋವನುಂಗಿ
‘ಅಮ್ಮಾ’ ಎಂದು ಚೀರುತ್ತಾ
ಚಿಕ ಚಿಕನೇ ಬುಲೆಟ್ಟನ್ನು ಹೊರಗೆಳೆದ ಪೋರ
ಬ್ಯಾಂಡೇಜು ಹಾಕು ಮಗನೆ
ರಕ್ತ ಚೆಲ್ಲಿತು, ಜೋಕೆ !
ಮಾಡಲಿನ್ನು ಬಾಕಿಯಿದೆ ಕೆಲಸುಗಳು ನೂರಾರು
ಇದು ನಮ್ಮ ಪ್ಯಾಲೆಸ್ತೀನ್
ಅಮ್ಮಾ, ಇದು ನಮ್ಮದಾಗಲಿದೆ
ನಮ್ಮದೇ ಆಗಲಿದೆ , ಅಮ್ಮಾ
ಉಳಿದರೆ ಮತ್ತೇ ನೋಡುವೆ ನಿನ್ನಾ
ಅಸ್ಸಲಾಂ ಅಸ್ಸಲಾಂ ಅಮ್ಮಾ
ಮಿಂಚಿನ ವೇಗದಲಿ
ಸಿಡಿಲು ಬಡಿದ ಜೋರಿನ ಹೆಜ್ಜೆಗಳ ಸಪ್ಪಳ-
ದೊಂದಿಗೆ ಮತ್ತೆ
ಜೆರ್ರಾದೆಡೆಗೆ ಓಡಿದ ಪೋರ
