
ಆತ್ಮನಿರ್ಭರತೆಯೆಂಬ
ಗಾಳಿ ಗೋಪುರ
ಆತ್ಮವಂಚನೆಯನ್ನಷ್ಟೆ
ಸಮ್ಮಾನಿಸಿತು.
ಭಾರತ್ ಮಾತಾಕೀ
ಜೈಸಿದಳೋ ಇಲ್ಲವೋ
ಮಕ್ಕಳಂತೂ ಅನಾಥರಾದರು.
ಜೈ ಶ್ರೀರಾಂ ಎಂದು
ಕಿರುಚಿದ ವಾನರರು
ಮರ್ಯಾದಾ ಪುರುಷೋತ್ತಮನ
ಮಾನ ಕಳೆದರು.
ದನಗಳ ರಕ್ಷಣೆಯ
ಬೀದಿ ರೌಡಿಗಳು
ಜನಗಳ ರಕ್ಷಣೆಗೆ
ನಾಪತ್ತೆಯಾದರು.
ನಾವೆಲ್ಲ ಹಿಂದು
ನಾವೆಲ್ಲ ಒಂದೆಂದ ಮಂದಿ,
ದವಾಯಿ-ದಫನಿಗೂ
ಬೆನ್ನು ತಿರುಗಿಸಿದರು.
ಪ್ರಾಣವಾಯು ನೀಡಲು
ಮುಂದೆ ಬಂದ ಅದಾರೋ
ಅನ್ಯ ಅರಬ-ಅರಬೇತರ
ಮನುಷ್ಯ ಪ್ರಾಣಿಗಳು.
ಮಹಾಮಾರಿ ಇಂದೋ
ನಾಳೆಯೋ
ತೊಲಗಬಹುದೆಂಬ
ನಮ್ಮೆಲ್ಲರ ನಿರೀಕ್ಷೆ.
ಆದರೆ ದೇಶಪ್ರೇಮಿಗಳಿಗಂತೂ
ಈ ಕೋಮು ವೈರಸ್
ನಿತ್ಯ ಪರೀಕ್ಷೆ..!
– ಆರ್ ಕೆ
Super and vandarfull message
LikeLike