ಬರಹ : ಚಾಂದ್ ಸಲ್ಮಾನ್
ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ಅದರ ಭಾಗವಾಗಿ ಎಲ್ಲಾ ರಾಜಕೀಯ ಪಕ್ಷಗಳು ತಮಗೆ ಬೇಕಾದ ರೀತಿಯಲ್ಲಿ ಚುನಾವಣಾ ಪ್ರಚಾರವನ್ನು ಬಾರೀ ಪ್ರಮಾಣದ ಜನರನ್ನು ಸೇರಿಸಿ ನಡೆಸುತ್ತಿವೆ.
ಇನ್ನೊಂದು ಕಡೆ ನೋಡುವುದಾದರೆ ಕೇಂದ್ರ ಸರ್ಕಾರ ತಂದಂತಹ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಶತಕದ ಗಡಿ ದಾಟಿ ಸಾಗುತ್ತಿದ್ದರೂ ಸರ್ಕಾರವು ಇದನ್ನು ತಡೆಯುವ ಕುತಂತ್ರಗಳನ್ನು ಹೆಣೆಯುತ್ತಿದೆಯೇ ಹೊರತು ನ್ಯಾಯ ದೊರಕಿಸುವ ಗೋಜಿಗೆ ಹೋಗುತ್ತಿಲ್ಲ. ನಾವು ಇನ್ನು NRC,CAA ವಿರೋಧಿಸಿ ದೇಶಾದ್ಯಂತ ಜನರು ಬೀದಿಗಿಳಿದರು. ಅದೇ ಸಂದರ್ಭದಲ್ಲಿ ಇದುವರೆಗೆ ಕಾಣದ ರೀತಿಯಲ್ಲಿ ಮಹಿಳೆಯರು ನಡೆಸಿದ ಶಾಹಿನ್ ಬಾಗ್ ಹೋರಾಟವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಕೂಡ ವರದಿ ಮಾಡಿದವು. ಶಾಹಿನ್ ಬಾಗ್ ಹೋರಾಟವನ್ನು ತಡೆಯಲು ಹಲವು ರೀತಿಯ ಕಸರತ್ತು ನಡೆಸಿ ವಿಫಲ ವಾದ ಫ್ಯಾಶಿಸ್ಟ್ ಸರ್ಕಾರಕ್ಕೆ ಕೋರೋನ ಸೃಷ್ಟಿಸಿದ ಲಾಕ್ಡೌನ್ ಎಂಬ ಅಸ್ತ್ರವನ್ನು ಮುಂದಿಟ್ಟು ಮಹಿಳಾ ಹೋರಾಟವನ್ನು ಸ್ಥಗಿತಗೊಳಿಸ ಬೇಕಾದ ಅನಿವಾರ್ಯ ಎದುರಾದಾಗ ಸಂಘಟಕರು ಜನರ, ದೇಶದ ಹಿತ ಬಯಸಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಹಾಕಿದರು
ಹಲವಾರು ವಿವಾದಗಳಿಗೆ(ಅಶ್ಲೀಲ ವಿವಾದ) ಸಿಲುಕಿ ಅದರಿಂದ ಹೊರ ಬರಲಾಗದೆ ನಲುಗುತ್ತಿರುವ ರಾಜ್ಯ ಬಿಜೆಪಿ ಸರಕಾರ ಸಹಜವಾಗಿ ರಾಜ್ಯದ ಜನರಿಂದ ಶಕ್ತವಾದ ಪ್ರತಿಭಟನೆಗಳನ್ನು ಎದುರಿಸ ಬೇಕಾಗಿ ಬರಬಹುದು ಎಂಬುವುದನ್ನು ಮನಗಂಡು ಜಿಲ್ಲಾಆಡಳಿತಗಳ ಮೂಲಕ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ನಿರ್ಬಂಧಿಸಿದೆ, ಆದರೆ ಇನ್ನೊಂದು ಕಡೆ ಚುನಾವಣೆ ಪ್ರಚಾರಗಳು ಬರದಿಂದ ನಡೆಯುತ್ತಿದೆ, ಚುನಾವಣಾ ಪ್ರಚಾರಕ್ಕೆ ಅಡ್ಡಿಯಾಗದ ಕೊರೋನ, ಜನಸಾಮಾನ್ಯರು ತಮ್ಮ ಹಕ್ಕುಗಳಿಗಾಗಿ ಒಗ್ಗೂಡಿದಾಗ ಮಾತ್ರ ಕೊರೋಣ ಎಲ್ಲಿಂದ ಉದ್ಭವಿಸುತ್ತವೆ ಎನ್ನುವ ಪ್ರಶ್ನೆ ಎಲ್ಲೆಡೆ ಕೇಳುತ್ತಿವೆ?