ದುರ್ದೆಶೆಯ ಅಂಧಕಾರದತ್ತ ಸಾಗುತ್ತಿರುವ ಭಾರತ

ದೇವಸ್ಥಾನದಲ್ಲಿ ನೀರು ಕುಡಿದ ಕಾರಣಕ್ಕೆ ನಡೆದ ಹಲ್ಲೆಯು ಮಾನವೀಯತೆ ಮತ್ತು ಸೌಹಾರ್ದತೆಯ ಮೇಲೆ ನಡೆದ ಕಗ್ಗೊಲೆ

ಕಳೆದ ಹಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಪಶ್ಚಾತಾಪಕ್ಕೊಳಗಾಗುವಂತೆ ಮಾಡಿದೆ.
ಒಬ್ಬ ಸಣ್ಣ ಬಾಲಕ ತನಗೆ ತೀರಾ ಬಾಯಾರಿಕೆಯಾಗಿದೆಯೆಂಬ ಕಾರಣಕ್ಕೆ ಗಾಝಿಯಾಬಾದ್ ನಲ್ಲಿರುವ ಒಂದು ದೇವಸ್ಥಾನಕ್ಕೆ ನೀರು ಕುಡಿಯಲು ಹೋದ ಎಂಬ ಕಾರಣಕ್ಕೆ ಅಲ್ಲೊಬ್ಬ ಮತಾಂಧ ವ್ಯಕ್ತಿ ಈ ಬಾಲಕನ ಹೆಸರು,ಬಂದಿರುವ ಉದ್ದೇಶ ಕೇಳತೊಡಗುತ್ತಾನೆ.ಆತ ಮುಸ್ಲಿಂ ಎಂದು ಗೊತ್ತಾದ ತಕ್ಷಣ ಆ ಬಾಲಕನಿಗೆ ಯರ್ರಾಬಿರ್ರಿಯಾಗಿ ಥಳಿಸುತ್ತಾನೆ.ಆ ಯುವಕನ ಕೈ ಮುರಿಯಲು ಪ್ರಯತ್ನಿಸುತ್ತಾನೆ.

ನಿಜವಾಗಿ ಈ ಬಾಲಕ ಮಾಡಿದ ತಪ್ಪೇನು?
ತನ್ನ ಬಾಯಾರಿಕೆ ನೀಗಿಸಲು
ಸರ್ವೇಜನ ಸುಖಿನೋ ಭವಂತು ಎಂಬ ತತ್ವವನ್ನು ಪಾಲಿಸುವ ಹಿಂದೂ ಧರ್ಮಕ್ಕೆ ಸಂಬಂಧಿಸಿದ ದೇವಸ್ಥಾನದಲ್ಲಿ ತನಗಾದ ಬಾಯಾರಿಕೆ ನೀಗಿಸಲು ನೀರು ಕುಡಿದದ್ದು ತಪ್ಪಾಯಿತೇ?

ಇಲ್ಲಿ ನಾವು ಆಳವಾಗಿ ಚಿಂತಿಸುವ ವಿಚಾರವೇನೆಂದರೆ,
ಹಲ್ಲೆ ಮಾಡಿದ ವ್ಯಕ್ತಿಯನ್ನು ಸಮರ್ಥಿಸಿ ಮತ್ತು ಆ ಹಲ್ಲೆಗೆ ಇನ್ನಷ್ಟು ಪುಷ್ಟಿ ನೀಡಲು ಪ್ರಯತ್ನಿಸುತ್ತಿರುವ ಒಂದು ಮನಸ್ಥಿತಿಯು ನಮ್ಮ ದೇಶದಲ್ಲಿ ಪ್ರಚಲಿತದಲ್ಲಿದೆ.
ಇದನ್ನು ಸಮರ್ಥಿಸಿ ಇಂದು ಕೆಲವರು ‘ಆ ಹುಡುಗ ದೇವಸ್ಥಾನಕ್ಕೆ ಮತ್ತು ವಿಗ್ರಹಗಳ ಮೇಲೆ ಮೂತ್ರ ವಿಸರ್ಜನೆ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅವನನ್ನು ತಡೆಯಲಾಗಿದೆ’ ಎಂಬ ಸುಳ್ಳಿನ ಕಂತೆಯೂ ನಮಗೆ ಕಾಣಲು ಸಾಧ್ಯವಾಗಿದೆ.
ಇದು ಶುದ್ಧ ಸುಳ್ಳು ಎಂದು ಉನ್ನತ ಮೂಲಗಳು ತಿಳಿಸಿವೆ.

ನೋಡಿ,ನಮ್ಮ ದೇಶದ ಸ್ಥಿತಿಗತಿ ಎಲ್ಲಿಗೆ ಮುಟ್ಟಿತು.ಗುಣಾತ್ಮಕ ಚಿಂತನೆಯುಳ್ಳ ದೇಶ ಎನ್ನುವುದಕ್ಕೆ ನಾಚಿಕೆಯಾಗುತ್ತಿದೆ.

ಇಲ್ಲಿ ಆ ಮತಾಂಧ ವ್ಯಕ್ತಿಗೆ ಕೆಂಗಣ್ಣಾಗಿ ಕಂಡದ್ದು ಆತನ ಇಸ್ಲಾಂ ಎಂಬ ಧರ್ಮ.
ಒಬ್ಬ ಮುಸ್ಲಿಂ ವ್ಯಕ್ತಿ ದೇವಸ್ಥಾನದಲ್ಲಿ ನೀರು ಕುಡಿದ ಕಾರಣಕ್ಕೆ ಮತಾಂಧನಿಂದ ಹಲ್ಲೆ ಎಂಬ ದಾರುಣ ಸ್ಥಿತಿಗೆ ನಮ್ಮ ದೇಶ ತಲುಪಿತು.
ಆದರೆ ಎಲ್ಲೂ ಒಬ್ಬ ಹಿಂದೂ ಮಸೀದಿಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಥಳಿತ ಎಂಬ ಸುದ್ದಿಯು ಈವರೆಗೆ ಸಂಭವಿಸಿಲ್ಲ.
ಅದೆಷ್ಟೋ ಸಂದರ್ಭದಲ್ಲಿ ಮಸೀದಿಯು ಹಿಂದೂ ಧರ್ಮದವರಿಗೆ ಆಶ್ರಯ ತಾಣವಾಗುವ ಮೂಲಕ ಸಹೋದರತೆ ಬೆಳೆಸಿತ್ತು.ಅದೇ ರೀತಿ ಹಲವು ಬಾರಿ ದೇವಸ್ಥಾನಗಳೂ ಮುಸಲ್ಮಾನರಿಗೆ ಆಶ್ರಯತಾಣವಾಗಿ ಪ್ರೌಢಿಮೆ ಮೆರೆದ ಕ್ಷಣಗಳೂ ಇವೆ.
ಆದರೆ ಇಲ್ಲಿವರೆಗೆ ಕೇಳದ ದಾರುಣ ಘಟನೆಗೆ ಒಬ್ಬ ಮತಾಂಧ ಮನಸ್ಥಿತಿಯವನು ಸಾಕ್ಷಿಯಾಗಿದ್ದಾನೆ.ಇಲ್ಲಿ ಆರೋಪ ಸ್ಥಾನದಲ್ಲಿರುವುದು ದೇವಸ್ಥಾನವಲ್ಲ.ಆ ವ್ಯಕ್ತಿಯ ವಿಷಪೂರಿತ ಮತಾಂಧ ಮನಸ್ಥಿತಿ.

ಈ ಘಟನೆಯು ಭಾರತ ದೇಶವು ದುರ್ದಶೆಯ ಅಂಧಕಾರದತ್ತ ಸಾಗುತ್ತಿರುವ ಲಕ್ಷಣವಾಗಿದೆ.ಈ ಘಟನೆಯು ಮಾನವೀಯತೆ ಮತ್ತು ಸಹೋದರತೆಯ ಕಗ್ಗೊಲೆಗೆ ಸಾಕ್ಷಿಯಾಗಿದೆ.
ಈ ಘಟನೆಯ ವಿರುದ್ಧ ಸರ್ವ ಭಾರತೀಯರು ಧ್ವನಯೆತ್ತಬೇಕಾಗಿದೆ.
ಇದರ ಬಗ್ಗೆ ಆಯಾಯ ಧರ್ಮಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ.ಅಂತಹ ವಿಷಪೂರಿತ ಮತಾಂಧ ಮನಸ್ಥಿತಿಯುಳ್ಳ ಕುಲದ ಬೇರನ್ನೇ ಕಿತ್ತೆಸೆಯಬೇಕಾಗಿದೆ.
ಈ ದೇಶವನ್ನು ಮಾನ್ಯತೆಯುಳ್ಳ ಸುಸ್ಥಿರತೆಗೆ ನಾವು ಕೊಂಡುಹೋಗಬೇಕಾಗಿದೆ.

Leave a comment