ಜಾತಿ ಓಲೈಕೆಯ ಬಜೆಟ್

ಬರಹ : ಜಯಕುಮಾರ್ ಹಾದಿಗೆ

(ಕರ್ನಾಟಕ ರಾಜ್ಯಾಧ್ಯಕ್ಷರು-ರಾಷ್ಟ್ರೀಯ ಆದಿವಾಸಿ ಏಕತಾ ಪರಿಷತ್)

ಹಸಿರು ಶಾಲು ಧರಿಸಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪೂರ್ಣ ಬಜೆಟ್ ಅನ್ನು ಕೇಸರಿಮಯವನ್ನಾಗಿಸಿದ್ದಾರೆ.
ಈ ಬಜೆಟ್ ಕೇವಲ ಜಾತಿ ಸಮುದಾಯಗಳ ಓಲೈಕೆಗಾಗಿ ಹಣವನ್ನು ಮೀಸಲಿಡುವ ಮೂಲಕ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ನಾವು ಅರ್ಹರು ಎನ್ನುವುದನ್ನು ಸಾರಿ ಹೇಳುವಂತಿದೆ.

ಹಸಿರು ಶಾಲು ಧರಿಸಿದ ಮುಖ್ಯಮಂತ್ರಿಗಳು ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಕೃಷಿಕರ ಅಭಿವೃದ್ಧಿಗಾಗಿ ಯಾವುದೇ ಪೂರಕ ಯೋಜನೆಗಳನ್ನು ಕೈಗೆತ್ತಿಕೊಂಡಂತೆ ಕಾಣಲಿಲ್ಲ.
ಇನ್ನೂ ರಾಜ್ಯದಲ್ಲಿ ಇತ್ತೀಚೆಗಷ್ಟೇ ಜಾರಿಗೆ ತಂದ ಗೋಹತ್ಯಾ ನಿಷೇಧ ಕಾಯ್ದೆಗೆ ಪೂರಕವಾಗಿ ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ ಬಗ್ಗೆ ಬಜೆಟ್ ನಲ್ಲಿ ಘೋಷಿಸಲಾಗಿದೆ.
ಕೊರೋನ ನೆಪ ಹೇಳಿ ಶಾಲಾ ಕಾಲೇಜುಗಳನ್ನು ಮುಚ್ಚಿದ್ದ ಸರ್ಕಾರ ಗೋವುಗಳಿಗೆ ಮಾತ್ರ ಗೋಶಾಲೆ ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಬಜೆಟಿನಲ್ಲಿ ಕೇವಲ 11% ಹಣವನ್ನು ಮೀಸಲಿಟ್ಟಿದ್ದಾರೆ.

ಸದಾ ಅಲ್ಪಸಂಖ್ಯಾತರ ವಿರುದ್ಧ ತಮ್ಮ ಬಚ್ಚಲು ಬಾಯಿ ತೆರೆಯುವ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗಾಗಿ ಸಾವಿರದ ಐನೂರು ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ.
ಇನ್ನೂ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ರಾಜ್ಯದಿಂದ ಹೋಗುವ ಪ್ರವಾಸಿಗರಿಗೆ ಉತ್ತರ ಪ್ರದೇಶ ಸರ್ಕಾರವು ಐದು ಎಕರೆ ಜಮೀನು ಒದಗಿಸಲಿದ್ದು ಇದಕ್ಕೆ ರಾಜ್ಯ ಸರ್ಕಾರ ಹತ್ತು ಕೋಟಿ ಹಣ ಮೀಸಲಿಟ್ಟಿದೆ.

ಒಟ್ಟಾರೆ ಹೇಳುವುದಾದರೆ ಇದು ಹುಸಿ ಆಶ್ವಾಸನೆಯ ಸರ್ಕಾರ.
ಈ ಸರ್ಕಾರ ತರುವ ಒಂದಷ್ಟು ಕಾಯಿದೆಗಳು ಜನರ ಮುಂದೆ ಭಾಷಣ ಮಾಡುವುದಕ್ಕಾಗಿ ಇರುತ್ತದೆಯೇ ಹೊರತು ಜನರ ಅಭಿವೃದ್ಧಿಗಾಗಿ ಅಲ್ಲ ಎಂಬುದನ್ನು ಯಡಿಯೂರಪ್ಪ ಅವರು ಓಲೈಕೆಯ ಬಜೆಟ್ ಮಂಡನೆ ಮಾಡುವ ಮೂಲಕ ಸಾಬೀತು ಪಡಿಸಿದ್ದಾರೆ.

ಬಜೆಟ್ ಎಂದರೆ ಜನಸಾಮಾನ್ಯರಲ್ಲಿ ಒಂದು ನಿರೀಕ್ಷೆ ಇರುತ್ತದೆ.”ನಾವು ಚುನಾಯಿಸಿ ಗೆಲ್ಲಿಸಿದ ಸರ್ಕಾರ ನಮಗಾಗಿ ಯಾವುದಾದರೂ ಹೊಸ ಉಡುಗೊರೆಯನ್ನು ನೀಡಬಹುದು” ಎಂದು. ಆದರೆ ಅಂತಹ ಹೊಸ ಉಡುಗೊರೆ ಯಾವುದೂ ಯಡಿಯೂರಪ್ಪನವರ ಬಜೆಟಿನಲ್ಲಿ ಕಾಣಿಸಲಿಲ್ಲ.ಒಂದಷ್ಟು ಓಲೈಕೆಯ ಅನುದಾನ ಬಿಟ್ಟರೆ ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಯಾವುದೇ ಯೋಜನೆಗಳಿರಲಿಲ್ಲ.

Leave a comment