
ಬರಹ – ಜೈನುಲ್ ಅಕ್ಬರ್ ಬಿ
ಈ ಶತಮಾನದ ಹಿಟ್ಲರ್ ಎಂದೇ ಕುಖ್ಯಾತಿ ಪಡೆದ ಟ್ರಂಪ್ ಗೆ ಪ್ರಜಾಪ್ರಭುತ್ವದ ಮೇಲೆ ಎಳ್ಳಷ್ಟೂ ಭರವಸೆಯಿಲ್ಲ.ಆತನಿಗೆ ಅಧಿಕಾರದ ಹಪಾಹಪಿ ಇದೆ.ಆದ್ಧರಿಂದಲೇ ಪ್ರಜಾಪ್ರಭುತ್ವ ವ್ಯಸ್ಥೆಯಲ್ಲಿನ ಚುನಾವಣೆ ಪ್ರಕ್ರಿಯೆ ಬಗ್ಗೆ ಮೊದಲಿನಿಂದಲೂ ಟ್ರಂಪ್ ಅಮೆರಿಕಾದಾದ್ಯಂತ ಅಪಪ್ರಚಾರ ನಡೆಸುತ್ತಾ ಬಂದಿದ್ದ.
ಇತ್ತೀಚಿಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆದ್ದು ಟ್ರಂಪ್ ಸೋತ ಸುದ್ಧಿ ತಿಳಿದು ಅಮೆರಿಕಾದ ಚುನಾವಣಾ ವ್ಯವಸ್ಥೆಯ ಬಗ್ಗೆ ಟ್ರಂಪ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಈ ಫಲಿತಾಂಶವನ್ನು ಒಪ್ಪಲಾರೆ ಎಂದಿದ್ಧ.ನವೆಂಬರ್ 3 ರ ಫಲಿತಾಂಶದ ನಂತರ ನಿರಂತರವಾಗಿ ತನ್ನ ಬೆಂಬಲಿಗರನ್ನು ಹಿಂಸೆಗೆ ಪ್ರಚೋದಿಸುವಂತಹ ಟ್ವೀಟ್ ಮತ್ತು ವಿಡಿಯೋಗಳನ್ನು ಹಾಕುತ್ತಿದ್ಧ.ಇದರಿಂದ ಟ್ರಂಪ್ ನ ಟ್ವೀಟರ್ ಖಾತೆಯನ್ನು ತಾತ್ಕಾಲಿಕವಾಗಿ ಟ್ವೀಟರ್ ತಡೆ ಹಿಡಿದಿತ್ತು.ಇದೇ ರೀತಿ ಸುಳ್ಳು ಹೇಳುವುದನ್ನು ಮುಂದುವರಿಸಿದರೆ ಶಾಶ್ವತವಾಗಿ ಟ್ವೀಟರ್ ಖಾತೆಯನ್ನು ನಿಷ್ಕ್ರಿಯಗೊಳಿಸುವುದಾಗಿಯೂ ಎಚ್ಚರಿಸಿತ್ತು.
ಆದರೆ ಈಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ಮಧ್ಯೆ ಅಮೆರಿಕ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿದ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಪೊಲೀಸರ ವಿರುದ್ಧ ಘರ್ಷಣೆಯಲ್ಲಿ ಭಾಗಿಯಾದರು. ಈ ಸುದ್ದಿ ಅಂತಾರಾಷ್ಚ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡನ್ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ಪ್ರಜಾಪ್ರಭುತ್ವದ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ಹಲ್ಲೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಭಾರತ ಸೇರಿ ಜಗತ್ತಿನಾದ್ಯಾಂತ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಆತಂಕವನ್ನು ಸ್ರಷ್ಠಿಸಿದೆ.
ಅಧಿಕಾರದ ಅತಿಯಾಸೆ ಇಟಲಿಯ ಮುಸೋಲಿನಿಯನ್ನು ಫ್ಯಾಶಿಷ್ಟ್ ಪಾರ್ಟಿ ಹುಟ್ಟು ಹಾಕಿ ತನ್ನ ವಿರೋಧಿಗಳನ್ನು ನಿರ್ದಯವಾಗಿ ಕೊಂದು ಹಾಕುವ ಹಿಂಸಿಸುವ ಪ್ರಕ್ರಿಯೆಗೆ ನಾಂದಿ ಹಾಡಿತು.ಜರ್ಮನಿಯ ಹಿಟ್ಲರ್ ಕೂಡಾ ಇದರಿಂದ ಪ್ರೇರಣೆ ಪಡೆದು ನಾಝಿ ಪಕ್ಷ ಕಟ್ಟಿ ಅಲ್ಲಿನ ಅಲ್ಪಸಂಖ್ಯಾತ ಯಹೂದಿಗಳನ್ನು ಗ್ಯಾಸ್ ಚೇಂಬರ್ ನಲ್ಲಿ ವಿಷಾನಿಲ ಹರಿಸಿ ಮಾರಣ ಹೋಮ ನಡೆಸಿದ.
ಫ್ಯಾಶಿಷ್ಟ್ ಅಥವಾ ನಾಝಿಸಂ ಹಿಂಸಾಚಾರದಲ್ಲಿ ಮೇಲ್ನೋಟಕ್ಕೆ ಜನಾಂಗೀಯ ದ್ವೇಷ ಕಂಡು ಬಂದರೂ ಮುಸೋಲಿನಿ ಮತ್ತು ಹಿಟ್ಲರ್ ಉದ್ಧೇಶ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿತ್ತು.ನಿರಂಕುಶ ಪ್ರಭುತ್ವದ ಮೇಲೆ ಅಪಾರ ಶ್ರದ್ಧೆಯಿದ್ಧ ಈ ಎರಡೂ ನಾಯಕರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಎಳ್ಳಷ್ಟೂ ಆಸಕ್ತಿಯಿರಲಿಲ್ಲ.ಅದಕ್ಕಾಗಿಯೇ ಈ ಎರಡೂ ಉಗ್ರಗ್ರಾಮಿ ಸಂಘಟನೆಯ ಸದಸ್ಯರು ತಮ್ಮ ನಾಯಕರ ವಿರೋಧಿಗಳನ್ನು,ಅವರ ಸಿದ್ಧಾಂತವನ್ನು ಪ್ರಶ್ನಿಸುವವರನ್ನು ಇನ್ನಿಲ್ಲದಂತೆ ಹಿಂಸಾಚಾರಕ್ಕೆ ಗುರಿಪಡಿಸಿದರು.ಅವರ ವಿರುದ್ಧ ಮಾತನಾಡುವವರನ್ನು,ಬರಹಗಾರರನ್ನು,ತಮ್ಮ ಹಿಂಸೆಯನ್ನು ವಿರೋಧಿಸುವ ಮಾಧ್ಯಮಗಳನ್ನೂ ಮುಸೋಲಿನಿ ಮತ್ತು ಹಿಟ್ಲರ್ ಸದ್ಧಗಿಡಿಸಿದ್ಧರು.ಇದೇ ಹಾದಿಯಲ್ಲಿ ಇವತ್ತು ಟ್ರಂಪ್ ಕೂಡಾ ಸಾಗುತ್ತಿದ್ಧಾನೆ.ಆತನಿಗೂ ತನ್ನನ್ನು ಹೊರತುಪಡಿಸಿ ಬೇರೊಬ್ಬರು ದೇಶದ ಅಧ್ಯಕ್ಷರಾಗುವುದು ಇಷ್ಟವಿರಲಿಲ್ಲ.ಈ ಕಾರಣಕ್ಕಾಗಿಯೇ ಮೊದ ಮೊದಲು ಚುನಾವಣಾ ಪ್ರಕ್ರಿಯೆಯಲ್ಲಿ ಮೋಸ ನಡೆದಿದೆ ಅಂದ ಟ್ರಂಪ್ ಇಂದು ನೇರವಾಗಿ ತನ್ನ ಬೆಂಬಲಿಗರನ್ನು ಅಮೆರಕ ಸಂಸತ್ ನೊಳಗಡೆ ಹಿಂಸಾಚಾರ ನಡೆಸಲು ಕಳುಹಿಸಿದ್ಧಾನೆ.ಪೋಲಿಸರ ಮೇಲೆಯೇ ಆಕ್ರಮಣನಡೆಸಿದ ಟ್ರಂಪ್ ಬೆಂಬಲಿಗರ ಹಿಂಸಾಚಾರದಲ್ಲಿ ಅಪಾರ ಸಾವು ನೋವು ಸಂಭವಿಸಿದೆ.
ಅಮೆರಿಕದ ಸಂಸತ್ ಮೇಲಿನ ದಾಳಿಯನ್ನು ನೋಡಿದ ಭಾರತದ ಪ್ರಧಾನಿ ಇದೊಂದು ನೋವಿನ ಸಂಗತಿ ಈ ಹಿಂಸಾಚಾರ ಇಲ್ಲಿಗೇ ಕೊನೆಗೊಳ್ಳಲಿ ಅಂದಿದ್ಧಾರೆ.ವಿಪರ್ಯಾಸವೆಂದರೆ ಚುನಾವಣೆಯ ಸಂದರ್ಭದಲ್ಲಿ ಇದೇ ಮೋದಿಯವರು ಟ್ರಂಪ್ ಪರ ಚುನಾವಣಾ ಪ್ರಚಾರ ಮಾಡಿ ಅಮೆರಿಕಾದ ನಾಗರಿಕರಲ್ಲಿ ಟ್ರಂಪನ್ನು ಬೆಂಬಲಿಸುವಂತೆ ಕೋರಿದ್ಧಾರೆ.
ಅಮೆರಿಕಾಗೆ ಹೋಲಿಸಿದರೆ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎಂದೋ ಶಿಥಿಲಾವಸ್ಥೆಗೆ ತಲುಪಿದೆ.ಆದ್ಧರಿಂದಲೇ ತನ್ನ ಕಚೇರಿಯಿಂದ 10ಕಿಲೋಮೀಟರ್ ದೂರದ ದೆಹಲಿಯ ಬೀದಿಗಳಲ್ಲಿ ಉಪವಾಸ ಕೂತಿರುವ ರೈತರ ನೋವಾಗಲೀ ,ಸರ್ಕಾರದ ಕರಾಳ ಕಾನೂನುಗಳನ್ನು ವಿರೋಧಿಸಿ ಆತ್ಮಹತ್ಯೆಗೆ ಶರಣಾಗುತ್ತಿರುವ ಸಾವಿರಾರು ರೈತರ ಆರ್ತನಾದವಾಗಲೀ ಭಾರತ ದೇಶದ ಪ್ರಧಾನಿಗೆ ಕೇಳುತ್ತಿಲ್ಲ.ಆದರೆ ಹದಿಮೂರುವರೆ ಸಾವಿರ ದೂರದ ಅಮೆರಿಕಾದ ಸಂಸತ್ ನಲ್ಲಿ ನಡೆದ ಹಿಂಸಾಚಾರದ ಸುದ್ಧಿ ಪ್ರಧಾನಿಗೆ ಬಹುಬೇಗ ತಲುಪುತ್ತದೆ.
ಗೋ ಹತ್ಯೆ,ಮತಾಂತರ,ಲವ್ ಜಿಹಾದ್ ವಿಷಯಗಳನ್ನು ಮುಂದಿಟ್ಟು ಭಾರತದ ಫ್ಯಾಶಿಷ್ಟರು ಇಲ್ಲಿನ ಅಲ್ಪಸಂಖ್ಯಾತರನ್ನು,ಈ ನೆಲದ ಮೂಲ ನಿವಾಸಿಗಳನ್ನು ದಿನ ನಿತ್ಯ ಮಾರಣ ಹೋಮ ನಡೆಸುತ್ತಿದೆ.ರೈತರ ಭೂಮಿಯನ್ನು ಕಿತ್ತು ಅಂಬಾನಿ,ಅದಾನಿಯಂತಹ ಬಂಡವಾಳಶಾಹೀಗಳ ಪಾದದಡಿಯಲ್ಲಿ ಅರ್ಪಿಸುತ್ತಿದೆ.ರಾಮ ಮಂದಿರ,ತ್ರಿಪಳಿ ತಲಾಕ್,ಏಕ ರೂಪ ಕಾನೂನು,CAA,NRC ಇನ್ನಿತರ ಅನಗತ್ಯ ವಿಷಯಗಳನ್ನು ಮುನ್ನೆಲೆಗೆ ತಂದು ದೇಶದ ನಾಗರೀಕರನ್ನು ಪರಸ್ಪರ ಹಿಂಸಾಚಾರದಲ್ಲಿ ತೊಡಗುವಂತೆ ಪ್ರಚೋದಿಸುತ್ತಿದೆ.ಸರ್ಕಾರವನ್ನು ಪ್ರಶ್ನಿಸಬೇಕಾದ ವಿರೋಧ ಪಕ್ಷದ ಸದಸ್ಯರು ತಮ್ಮ ಸ್ವಾರ್ಥಹಿತ ಕಾಯುವ ಭರದಲ್ಲಿ ಮಕಾಡೆ ಮಲಗಿದ್ಧಾರೆ.ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳು ಸರ್ಕಾರ ಚೆಲ್ಲುವ ಎಂಜಲು ಕಾಸಿಗಾಗಿ ತಮ್ಮನ್ನು ಮಾರಿಕೊಂಡು ಬಿಟ್ಟಿವೆ.ತಮ್ಮನ್ನು ವಿರೋಧಿಸಿ ಜನಜಾಗ್ರತಿ ಮೂಡಿಸುತ್ತಿರುವ ಸಾಮಾಜಿಕ ಹೋರಾಟಗಾರರನ್ನು ದೇಶದ ಸ್ವತಂತ್ರ ಸಂಸ್ಥೆಯಾದ ED,CBI ಯನ್ನು ಬಳಸಿ ಸದೆಬಡಿಯಲಾಗುತ್ತಿದೆ.
ಇವೆಲ್ಲವನ್ನೂ ಗಮನಿಸಿದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿರುವುದು ಸ್ಪಷ್ಟವಾಗುತ್ತಿದೆ.ಭಾರತದಲ್ಲಿಯೂ ಮುಂಬರುವ ಚುನಾವಣೆಯಲ್ಲಿ ಪ್ರಜೆಗಳು ಜಾಗ್ರತಗೊಂಡು ಎಲ್ಲಿಯಾದರು ಈಗಿರುವ ಸರ್ಕಾರದ ವಿರುದ್ಧ ಮತ ಚಲಾಯಿಸಿ ಫ್ಯಾಶಿಷ್ಟ್ ವರ್ಗದವರ ಕೈಯಿಂದ ಆಡಳಿತ ತಪ್ಪಿ ಹೋದರೆ
ಭಾರತದಲ್ಲಿ ಅಮೆರಿಕಾಗಿಂತಲೂ ಭೀಕರ ಹಿಂಸಾಚಾರ ನಡೆಯುವುದು ಸತ್ಯ.
ಹಿಟ್ಲರ್,ಮುಸೋಲಿನಿ,ಟ್ರಂಪ್ ಗಿಂತಲೂ ಅಪಾಯಕಾರಿಯಾದ ಫ್ಯಾಶಿಷ್ಟ್ ನಿರಂಕುಶ ನಾಯಕರಿಂದ ಈ ದೇಶವನ್ನು ,ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಬೇಕಾದ ತುರ್ತು ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ.