‘ದಡ ಸೇರಿಸುವ ಅಂಬಿಗ’

ಈ ಮೇಲಿನ ಚಿತ್ರವನ್ನು ವಿಮರ್ಶಿಸಿ ರಚಿಸಿದ ಕವನ

– ಜಯಕುಮಾರ್ ಹಾದಿಗೆ

ಜಗತ್ತೆಲ್ಲ ತುಂಬಿರಲು ಕೊಳಕು
ಅಮ್ಮ ಹಿಡಿದೆತ್ತಿದಳು ನನ್ನನ್ನು
ನನಗಂಟದಂತೆ ಕೊಳಕು.

ಮೊಗದ ಬೆಳಕ ಕಾಣಲೆಂದು ಒಂಬತ್ತು ತಿಂಗಳು ಹೊತ್ತಿಕೊಂಡಳವಳ ಹೊಟ್ಟೆಯಲಿ
ಜಗದ ಕೊಳಕ ತುಳಿಯದಂತೆ ಎತ್ತಿಕೊಂಡಳೀಗ ಅವಳ ರಟ್ಟೆಯಲ್ಲಿ

ನೋಡಲು ನನ್ನ ಅಮ್ಮ ನನಗಿಂತಲೂ ಸಪೂರ
ನನ್ನನ್ನು ಎತ್ತಿಕೊಳ್ಳಲು ಅವಳಿಗೆ ನಾನು ಗಾಳಿ ತುಂಬಿದ ಬಲೂನಿನಂತೆ ಹಗುರ

ಅಮ್ಮನೆಂದರೆ ನನಗೆ ಮುಳುಗದಂತೆ ದಡ ಸೇರಿಸುವ ಅಂಬಿಗ
ನಾನೀಗ ಅಮ್ಮನ ದೋಣಿಯಲ್ಲಿ ದಡ ಸೇರಿದ ಪಯಣಿಗ.

Leave a comment