1
ಮೌನವು ಸದ್ದಿಲ್ಲದೆ ನನ್ನ ಹೃದಯವನ್ನಾವರಿಸಿದೆ
ಪ್ರೀತಿಯು ಮನಸ್ಸನ್ನಾರೈಸಿ ಮೌನಿ ಪ್ರೇಮಿಯನ್ನಾಗಿಸಿದೆ
ಈ ತುಂತುರು ಮಳೆಯೋ ಸುರಿಯುತಲಿರಲು
ನನ್ನ ಹೆಬ್ಬೆರಲನ್ನೇ ಲೇಖನಿಯನ್ನಾಗಿಸಿದೆ
2
ಮಿಡಿಯುವ ಹೃದಯಗಳನ್ನು ಮುಗುಳ್ನಗುವಿನ ಬೆಲೆಗೆ ಮಾರುತ್ತಿದ್ದ ವರ್ತಕ
ತನ್ನ ಹೃದಯದ ಬಾಗಿಲನ್ನು ಮಾತ್ರ ಆಕೆಯ ಅಧರಗಳಿಗೆ ಅರ್ಪಿಸಿ ಬಿಟ್ಟ
3
ಹಣ,ಅಧಿಕಾರ,ಯಶಸ್ಸು,ಇವೆಲ್ಲವನ್ನೂ ತಾನಾಗಿಯೇ ಸಂಪಾದಿಸಿದ
ಆತ ಮಂಡಿಯೂರಿ ದೇವರಲ್ಲಿ ಬೇಡಿದ್ದು
ಒಂದು ರಾತ್ರಿಯ ಸುಖ ನಿದ್ರೆ ಮಾತ್ರ
4
ಕೊರೋನದ ರುದ್ರತಾಂಡವ ಕಂಡು ಜನರೆಲ್ಲ ಪರಿತಪಿಸುತ್ತಿರುವಾಗ
ಬಡವನ ಉದರದ ಹಸಿವೆಂಬ ಮಹಾಮಾರಿಯ ಕಂಡು ಕೊರೋನ ದಿಗ್ಬ್ರಮೆಗೊಂಡಿತಂತೆ
5
ಮಾನವ ಕುಲದ ರಕ್ತಪಾತ ಮಾಡಿ ಇಲ್ಲೊಬ್ಬ ಪರಾಕ್ರಮಕದ ಉನ್ಮಾದದಲ್ಲಿ ತೇಲುತ್ತಿರುವಾಗ
ನನ್ನ ರಕ್ತ ಹೀರಿದ ಸೊಳ್ಳೆಯ ಪ್ರಾಣಪಕ್ಷಿಯ ದಮನದ ಪ್ರಾಯಶ್ಚಿತೆ ನನ್ನ ಎದೆಗವಚ ಹಿಂಡುತಿದೆ
-ಮಹಮ್ಮದ್ ತೌಸಿಫ್
Bhagna Premi
LikeLike