ಬಾಬರೀ ಮಸ್ಜಿದ್ ಧ್ವಂಸ:ಇದು ಮುಗಿಯದ ಅಧ್ಯಾಯ.

-ಕೋರ್ಟ್ ಪ್ರಕಟಿಸಿದ ತೀರ್ಪು ಮತ್ತು ಟೀಕೆಗಳು
-ಯಾರು ಆ 32 ಸಜೀವ ಆರೋಪಿಗಳು?
-ಈ ತೀರ್ಪು ನ್ಯಾಯಿಕ ತೀರ್ಪೇ ಹೊರತು ನೈತಿಕ ತೀರ್ಪು ಅಲ್ಲ

ಬರಹ: ಇಮ್ರಾನ್ ಝೈಫ್ ಪಾಂಡವರಕಲ್ಲು

“ನಾನು ಗಲಭೆಯಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡುವ ಸಲುವಾಗಿ ,ಸಂಘರ್ಷಗೊಂಡಿರುವ ಜನರ ನಡುವೆ ನಾನು ಹಿಸುಕು ಹಾಕಲು ಪ್ರಯತ್ನಿಸಿದೆ.ಆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ವಿವಾದಿತ ಸ್ಥಳದಲ್ಲಿ ಗರ್ಭ ಗೃಹ ಇದೆ ಮತ್ತು ರಾಮನ ಪ್ರತಿಮೆ ಇದೆ ಎಂದು ಹೇಳಿದರು.ನಿಸ್ಸಂಶಯವಾಗಿಯೇ ನಾನು ನನ್ನ ಸುತ್ತಲಿನ ಇತರರಂತೆ ಇವರನ್ನು ನಾನು ಕಾಣಲಿಲ್ಲ. ಅಲ್ಲಿ ಜೀನ್ಸ್ ಮತ್ತು ಶರ್ಟ್‌ ವಸ್ತ್ರಧಾರಿಯಾಗಿ ಇದ್ದ ಹೆಣ್ಣು ನಾನು ಒಬ್ಬಳೇ.ಹಾಗಾಗಿ ನಾನು ಆ ನೂಕು ನುಗ್ಗಲಿನೊಂದಿಗೆ ಒಳಗೆ ಪ್ರವೇಶಿಲು ಮಾಡಿದ ಪ್ರಯತ್ನ ಅವರಿಗೆ ಸರಿ ಅನಿಸಲಿಲ್ಲ.ಅಲ್ಲೊಬ್ಬ ಕಾರ್ಯಕರ್ತ ‘ಅವಳು ಮುಸ್ಲಿಂ ಆಗಿರಬೇಕು’ ಎಂದು ಹೇಳಿದ.ಇದ್ದಕ್ಕಿದ್ದಂತೆ ಎಲ್ಲರೂ ‘ಮುಸ್ಲಿಂ! ಮುಸ್ಲಿಂ! ಎಂದು ಗೋಗರೆದರು ಮತ್ತು ಅವರು ತಮ್ಮ ಕೈಗಳಿಂದ ನನ್ನ ಕತ್ತು ಹಿಸುಕಲು ಪ್ರಾರಂಭಿಸಿದರು”

  • ರುಚೀರಾ ಗುಪ್ತ
    (ಚಳುವಳಿಗಾರ್ತಿ ಮತ್ತು ಡಾಕ್ಯುಮೆಂಟರಿ ಫಿಲ್ಮ್ ಮೇಕರ್)

ಇದು 1992 ಡಿಸೆಂಬರ್ 06 ರಂದು ಬಾಬರೀ ಮಸ್ಜಿದ್ ದ್ವಂಸದ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ಹಲ್ಲೆಗೊಳಗಾದ ಒಬ್ಬ ಪತ್ರಕರ್ತೆಯ ರೋದನ.

1996 ರ ಬಾಬರಿ ಮಸ್ಜಿದ್ ಧ್ವಂಸವು ಇಡೀ ದೇಶವೇ ಪಶ್ಚಾತ್ತಾಪಕ್ಕೀಡುವಹಾಗೆ ಮಾಡಿದ ವಿಧ್ವಂಸಕ ಕೃತ್ಯ.
ಈ ಕೃತ್ಯಕ್ಕೆ ಹಲವಾರು ಜೀವಗಳು ಬಲಿಯಾಗಿವೆ.ಹಲವು ಕಷ್ಟ-ನಷ್ಟಗಳು ಸಂಭವಿಸಿವೆ. ಈ ಕೃತ್ಯ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಕಪ್ಪು ಚುಕ್ಕೆ ತಂದಿರುವ ಘಟನೆ.ಒಂದು ಭ್ರಮಾಧಾರಿತ ಮತ್ತು ವಿನಾಶಕಾರಿ ಕನಸನ್ನು ನನಸುಗೊಳಿಸಲು ಉದ್ಧಟತನ ತೋರಿದ ಕೃತ್ಯ.
ಅಭಯ ಎಂಬ ಪದಕ್ಕೆ ಪ್ರತ್ಯಕ್ಷವಾಗಿ ಚೂರಿ ಹಾಕಿದ ದಿನ.ಇದೆಲ್ಲವೂ ಪ್ರಪಂಚಕ್ಕೆ ಸಾಕ್ಷಿಯಾಗುತ್ತಿರುವಂತಹ ವಿಚಾರ.

ಆದರೆ ಇಲ್ಲಿ ನಾವು ಚರ್ಚಿಸಬೇಕಾದಂತಹ ಸಂಗತಿ ಏನೆಂದರೆ ನಿನ್ನೆ ಬಾಬರಿ ಮಸ್ಜಿದ್ ಧ್ವಂಸ ಮಾಡಿದ ಕೃತ್ಯ ಆರೋಪಿಗಳ ಪರ ಪ್ರಕಟಗೊಂಡ ತೀರ್ಪಿನ ಸಾರಾಂಶಗಳು.

ಬಾಬರಿ ಮಸ್ಜಿದ್ ಧ್ವಂಸಕ್ಕೆ ಪ್ರೇರಕರಾದ 48 ಮುಖ್ಯ ಆರೋಪಿಗಳಲ್ಲಿ16 ಮಂದಿ ಮೃತಪಟ್ಟಿದ್ದಾರೆ.ಇನ್ನುಳಿದ 32 ಮಂದಿ ಎದುರಿಸುತ್ತಿರುವ ಆರೋಪಕ್ಕೆ ನಿನ್ನೆ ಸಿಬಿಐ ವಿಶೇಷ ಕೋರ್ಟ್ ಕತ್ತರಿ ಹಾಕಿದೆ.ಧ್ವಂಸವಾದ 28 ವರ್ಷಗಳ ನಂತರ ನಿನ್ನೆ ಧ್ವಂಸದ ಕುರಿತು ಲಕ್ನೊ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್ ಕೆ ಯಾದವ್ ರವರು ತೀರ್ಪು ನೀಡಿದರು.
ಈ ತೀರ್ಪು ಇಡೀ ದೇಶವೇ ತಲೆ ತಗ್ಗಿಸುವಂತಹ ತೀರ್ಪು ಎಂದು ಪ್ರತ್ಯಕ್ಷವಾಗಿ ನಾವು ಒಪ್ಪಿಕೊಳ್ಳುವಂತಹ ಸಂಗತಿ.ಏಕೆಂದರೆ ತೀರ್ಪಿನ ಸಾರಾಂಶ ನೋಡಿದರೆ ನಿಜಕ್ಕೂ ಆಶ್ವರ್ಯವಾಗುತ್ತದೆ.

ನ್ಯಾ| ಎಸ್ ಕೆ ಯಾದವ್ ಸುಮಾರು 12:10 ರ ಹೊತ್ತಿನಲ್ಲಿ ಕೇವಲ 5 ನಿಮಿಷಗಳಲ್ಲಿ 2300 ಪುಟಗಳ ವರದಿಯನ್ನು ಕಣ್ಣು ಹಾಯಿಸಿ ಒಂದು ತೀರ್ಪನ್ನು ಪ್ರಕಟಿಸಿದರು.

ತೀರ್ಪಿನ ಮುಖ್ಯಾಂಶಗಳು ಮತ್ತು ಟೀಕೆಗಳು:-
> ವಿವಾದಿತ ಬಾಬರಿ ಮಸ್ಜಿದ್ ಕಟ್ಟಡ ಧ್ವಂಸ ಪೂರ್ವ ನಿಯೋಜಿತ ಕೃತ್ಯವಲ್ಲ.

-ಕೋರ್ಟ್ ಹೇಳುತ್ತಿರುವಂತಹದ್ದು ಬಾಬರಿ ಮಸ್ಜಿದನ್ನು ಯಾರೂ ಕೂಡ ಪೂರ್ವನಿಯೋಜಿತವಾಗಿ ಹೊಡೆದುರುಳಿಸಿದ್ದಲ್ಲ.ಅದು ಆಕಸ್ಮಿಕ ಘಟನೆಯೆಂದು.ಈ ವಿಚಾರದಲ್ಲಿ ಇಡೀ ದೇಶಕ್ಕೆ ಗೊತ್ತಿದೆ ಇದು ಬಿಜೆಪಿಯ ರಾಜಾಕೀಯ ಬೂಟಾಟಿಕೆಯ ಪ್ರತಿರೂಪದ ಧ್ವಂಸ ಮತ್ತು ಬಿಜೆಪಿಯ ಪೂರ್ವ ನಿಯೋಜಿತ ಕೃತ್ಯ ಎಂದು.ಮಾಜಿ ಉಪ ಪ್ರಧಾನಿ,ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ದೇಶದಾದ್ಯಂತ ರಥಯಾತ್ರೆ ಮಾಡಿರೋದು ಇಡೀ ದೇಶದ ಜನತೆಗೆ ತಿಳಿದಿದೆ.ಆ ರಥಯಾತ್ರೆಯಿಂದ ದೇಶದಲ್ಲಿ 10000 ಗಲಭೆಗಳು ನಡೆದಿದ್ದೂ ದೇಶದ ಜನತೆಗೆ ತಿಳಿದಿದೆ.’ಏಕ್ ಥಕ್ಕ ಓರ್ ದೋ,ಬಾಬರಿ ಮಸ್ಜಿದ್ ಥೋಡ್ ದೊ,ಮಸ್ಜಿದ್ ಗಿರಾವೊ,ಮಂದಿರ್ ಬನಾವೋ’ ಎಂಬ ಹಲವು ಘೋಷಾ ವಾಕ್ಯಗಳು ಎಷ್ಟರ ಮಟ್ಟಿಗೆ ಪೂರ್ವ ನಿಯೋಜಿತ ಎಂಬ ಸಾಕ್ಷಿಗೆ ಪ್ರೇರಣೆ ನೀಡಿದೆ ಎಂಬುವುದು ಕೂಡ ಇಡೀ ದೇಶದ ಜನತೆಗೆ ತಿಳಿದಿದೆ.ಆದರೆ ವಿಪರ್ಯಾಸ ಏನೆಂದರೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಯದೇ ಇದ್ದದ್ದು.

>32 ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ಇಲ್ಲ.
-ಇದು ತುಂಬಾ ಅಸಹ್ಯ ಅನಿಸುತ್ತಾ ಇದೆ.ಯಾಕೆಂದರೆ ಮೊದಲೇ ಹೇಳಿದ ಹಾಗೆ ರಥಯಾತ್ರೆ ಮೂಲ ಪುರುಷ ಅಡ್ವಾಣಿಯವರ ಮೂಲ ಉದ್ದೇಶ ಬಾಬರಿ ಕೆಡವಿ ರಾಮ ಮಂದಿರ ನಿರ್ಮಿಸುವುದು.ಕೋರ್ಟ್ ಗೆ ಅಡ್ವಾಣಿಯ ರಥಯಾತ್ರೆ ಸಾಕ್ಷಿಯಾಗಿ ಕಾಣಲಿಲ್ಲ.ಖುದ್ದಾಗಿ ಸಾಧ್ವಿ ಪ್ರಗ್ಯಾ ಸಿಂಗ್ ‘ನಾನು ಬಾಬರಿ ಮಸ್ಜಿದನ್ನು ಕೆಡವಿದ್ದೇನೆ” ಎಂದು ಹೇಳಿದರೂ ಕೂಡ ಕೋರ್ಟ್ ಗೆ ಸಾಕ್ಷಿ ಸಿಗಲಿಲ್ಲ.ಇವರೆಲ್ಲಾ ಕೋರ್ಟ್ ಪ್ರಕಟಿಸಿರುವ 32 ನಿರ್ದೋಷಿಗಳು.
>ಸಿ ಬಿ ಐ ನೀಡಿದ ವೀಡಿಯೋ, ಆಡಿಯೋ ಖಚಿತತೆ ನೀಡುತ್ತಿಲ್ಲ.ಆಡಿಯೋ ಶಬ್ದ ಕೇಳಿಸುತ್ತಿಲ್ಲ
-ಅಂದು ಪ್ರಚೋದನಕಾರಿ ಭಾಷಣಗಳು ಮಾಡಿದ ಹಿಂದುತ್ವ ನಾಯಕರ ಡಾಕ್ಯುಮೆಂಟರಿ,ವೀಡಿಯೋಗಳು,ಆಡಿಯೋಗಳು ಜಾಲತಾಣದಲ್ಲಿ ಸಂಗತಗೊಳ್ಳುತ್ತಿರುವಾಗ ಕೋರ್ಟ್ ಗೆ ತಲುಪಿದಾಗ ಅದು ಖಚಿತತೆ ಅಲ್ಲ.ಅದು ಎಡಿಟೆಡ್ ವೀಡಿಯೋ ಗಳು ಆಡಿಯೋಗಳು.
>ಕಟ್ಟಡ ಕೆಡವಲು ಪ್ರಯತ್ನಿಸಿದ್ದು ಸಮಾಜ ವಿದ್ರೋಹಿಗಳು.
-ಹೌದು ರೀ.ಸಮಾಜ ವಿದ್ರೋಹಿಗಳೇ ಇದನ್ನು ಕೆಡವಲು ಪ್ರಯತ್ನಿಸಿದ್ದು.
ಅದು ಇವರುಗಳೇ.ಈ 32 ಆರೋಪಿಗಳೇ.”ಅಂದು ಬಿಜೆಪಿ ನಾಯಕರು ಮತ್ತು ವಿ ಹೆಚ್ ಪಿ ನಾಯಕರು ಮಸೀದಿಯನ್ನು ರಕ್ಷಿಸಲು ತುಂಬಾ ಪ್ರಯತ್ನಿಸುತ್ತಿದ್ದರು.ಇವರು ಅಂದು ಮಸೀದಿಯ ಸಂರಕ್ಷಕರಾಗಿದ್ದರು” ಇದೆಲ್ಲಾ ಒಂದು ತೀರ್ಪು. ಪ್ರತ್ಯಕ್ಷ ಸಾಕ್ಷಿ ಅದೆಷ್ಟೋ ಮೂಲಗಳಿರುವಾಗ ಇವರುಗಳಿಗೆ ಇವರು ಕೃತ್ಯನೇ ಮಾಡಿಲ್ಲ ಎಂಬುವುದರ ಸಮರ್ಥನೆಯ ಕೆಲ ಆಯ್ದ ಸಾಕ್ಷಿಗಳೇ ಲಭಿಸಿದ್ದು ಎಲ್ಲಾ ವಲಯಗಳಲ್ಲಿ ನೋಡಿದರೂ ಕೂಡ ಸಂಶಯಾಸ್ಪದ ವಿಚಾರವಾಗಿದೆ.

ಇನ್ನು ಯಾರೆಲ್ಲಾ ಆ 32 ಸಜೀವ ಆರೋಪಿಗಳು ಎಂದು ನೋಡುವುದಾದರೆ ಅವರ ಪಟ್ಟಿ ಇಲ್ಲಿದೆ.
ಲಾಲ್ ಕೃಷ್ಣ ಅಡ್ವಾಣಿ,ಮುರಳಿ ಮನೋಹರ ಜೋಶಿ,ಕಲ್ಯಾಣ್ ಸಿಂಗ್,ಉಮಾ ಭಾರತಿ,ವಿನಯ್ ಕಟಿಯಾರ್,ಸಾಕ್ಷಿ ಮಹಾರಾಜ್,ಸಾಧ್ವಿ ರಿತಾಂಬರ,ಮಹಾಂತ ನೃತ್ಯ ಗೋಪಾಲ ದಾಸ್ ,ರಾಮ್ ವಿಲಾಸ್ ವೇದಾಂತಿ,ಚಂಪತ್ ರಾಯ್,ಸತೀಶ್ ಪ್ರಧಾನ್ ,ಧರಂ ದಾಸ್,ಬ್ರಿಜ್ ಭೂಷಣ್ ಸಿಂಗ್,ಪವನ್ ಕುಮಾರ್ ಪಾಂಡೆ,ಜೈ ಭಗವಾನ್ ಗೋಯಲ್,ಲಲ್ಲೂ ಸಿಂಗ್,ಜೈಭಾನ್ ಸಿಂಗ್ ಪವಯ್ಯ,ಅಚಾರ್ಯ ಧರ್ಮೇಂದ್ರ ದೇವ್,ರಾಮ್ ಜೀ ಗುಪ್ತಾ,ಪ್ರಕಾಶ್ ಶರ್ಮಾ,ಧರ್ಮೇಂದ್ರ ಸಿಂಗ್ ಗುರ್ಜರ್,ಆರ್ ಎಂ ಶ್ರೀ ವತ್ಸವ ,ಸತೀಶ್ ಪ್ರಧಾನ್,
ರಾಮ ಚಂದ್ರ ಖತ್ರಿ ,ಸುಧೀರ್ ಕಕ್ಕರ್,ಅಮರ್ ನಾಥ್ ಗೋಯಲ್,ಸಂತೋಷ್ ದುಬೆ ,
ವಿನಯ್ ಕುಮಾರ್ ರೈ,ಕಮಲೇಶ್ ತ್ರಿ ಪಾಠಿ ,
ಗಾಂಧಿ ಯಾದವ್ ,ವಿಜಯ್ ಬಹದೂರ್ ಸಿಂಗ್, ನವೀನ್ ಭಾಯ್ ಶುಕ್ಲಾ.
(ಇದರಲ್ಲಿ ದೇಶದ ಕೆಲ ಉನ್ನತ ಹುದ್ದೆಗಳಾದ ಉಪ ಪ್ರಧಾನಿ,ಮುಖ್ಯಮಂತ್ರಿ, ರಾಜ್ಯಪಾಲ,ಸಂಸದ ಮುಂತಾದ ಜವಾಬ್ದಾರಿ ಈ ಹಿಂದೆ ವಹಿಸಿಕೊಂಡವರೂ ಇದ್ದಾರೆ)

ಮಸೀದಿ ನಾಶ ಪಡಿಸಿದ್ದು ವಿಧ್ವಂಸಕ ಕೃತ್ಯ ಎಂದು ತೀರ್ಪು ಹೇಳಿದೆ.ಆದರೆ ಧ್ವಂಸ ಮಾಡಿದ ಕೃತ್ಯಗಳಲ್ಲಿ 32 ಆರೋಪಿಗಳ ಭಾಗವಹಿಸುವಿಕೆ ಹಲವು ರಿಸೋರ್ಸ್ ಮೂಲಗಳಿಗೆ ಗೊತ್ತಿದ್ದರೂ ಕೂಡ ಸಾಕ್ಷ್ಯವಿಲ್ಲ ಎಂಬ ಕಾರಣಕ್ಕೆ ಅವರೆಲ್ಲರನ್ನೂ ನಿರ್ದೋಷಿಗಳೆಂದು ತೀರ್ಪು ಪ್ರಕಟಿಸಿತು.ಇದೇ ರೀತಿ ಭಾರತದಲ್ಲಿ 1954 ರಿಂದ ಈಚೆಗೆ 54000 ಹೆಚ್ಚೂ ಗುಂಪು ಧ್ವಂಸ-ಕೃತ್ಯಗಳಲು ನಡೆದದ್ದರಲ್ಲಿ ಹೆಚ್ಚಿನ ಕೃತ್ಯಗಳಲ್ಲಿ ಕೆಲ ಮುಖ್ಯ ಆರೋಪಿಗಳು ನೇರ ಭಾಗಿ ಎಂದು ಗೊತ್ತಿದ್ದೂ ಕೇವಲ ಪ್ರಬಲ ಸಾಕ್ಷಿಗಳಿಲ್ಲ ಎಂಬ ಕಾರಣಕ್ಕೆ ಅಲ್ಲಗಳೆದು ಅವರನ್ನು ನಿರ್ದೋಷಿಗಳಾಗಿ ಪ್ರಕಟಿಸಿದೆ.ಅದೂ ಕೂಡ ಪ್ರಬಲ ಸಾಕ್ಷಿಗಳಿಲ್ಲ ಎಂಬ ಕಾರಣಕ್ಕೆ. ಸಾಕ್ಷಿ ಇದೆ.ಇನ್ನೂ ಪ್ರಬಲ ಸಾಕ್ಷಿ ಬೇಕಂತೆ.ಗೊತ್ತಿದ್ದೂ ಈ ರೀತಿಯಲ್ಲಿ ಅಲ್ಲಗಳೆಯುವ ವ್ಯವಸ್ಥೆ ನೋಡಿದರೆ ಎಲ್ಲೋ ಒಂದು ಕಡೆ ದೇಶ ಅವನತಿಗೆ ಹೋಗುತ್ತಿದೆ ಎಂದು ಭಾಸವಾಗುತ್ತಿದೆ.
ನಾವು ಭಿಮಾ ಕೋರೆಗಾಂವ್ ಪ್ರಕರಣ ತೀರ್ಪು ಮತ್ತು ಬಾಬರಿ ಧ್ವಂಸ ಆರೋಪಿಗಳ ತೀರ್ಪು ತುಲನೆ ಮಾಡಿ ನೋಡಿದರೆ ನಮಗೆ ಸ್ಪಷ್ಟವಾಗಿ ಅರಿವಾಗುತ್ತದೆ ಏನು ಇದರ ಮೂಲ ರೂಪ,ಉದ್ದೇಶ ಮತ್ತು ಇದರ ಹಿಂದೆ ಇರುವ ಅಜೆಂಡಾ.

ಇನ್ನೊಂದು ಸೂಕ್ಷ್ಮವಾಗಿ ಗಮನಿಸುವ ವಿಚಾರವೇನೆಂದರೆ ಈ ಆರೋಪಿಗಳ ವಿರುದ್ಧ ಒಟ್ಟು 1026 ಇದ್ದ ಸಾಕ್ಷಿಗಳಲ್ಲಿ ಅದರಲ್ಲಿ ಕೆಲವುದನ್ನು ಅಲ್ಲಗಳೆದು 351 ಸಾಕ್ಷಿಗಳಿಗೆ ಮಾತ್ರ ಅವಕಾಶ ನೀಡಿತ್ತು. ಈ 351 ಸಾಕ್ಷಿಗಳಲ್ಲಿ ಹೆಚ್ಚಿನ ಸಾಕ್ಷಿಗಳು ಪತ್ರಕರ್ತರು.ಇದರ ಬಗ್ಗೆ ಡಿಫೆನ್ಸ್ ಲಾಯರ್ ಬಳಿ ‘ದಿ ಪ್ರಿಂಟ್’ ಮಾಧ್ಯಮದವರು ಪ್ರಶ್ನಿಸಿದಾಗ ಅವರು ಉತ್ತರಿಸಿದ್ದು “ಈ ಎಲ್ಲಾ ಸಾಕ್ಷಿ ಇದ್ದರೂ ಆ ಘಟನೆಗೆ ಪ್ರಚೋದಿಸಿದ್ದು ಈ 36 ಜನರು ಎಂದು ಉಲ್ಲೇಖಿಸಲು ಸಾಧ್ಯವಾಗಲಿಲ್ಲ,ಹೇಳಲಿಕ್ಕೆ ವಿಫಲರಾದರು”.

ಅದಕ್ಕೆ ದೃಶ್ಯಮಾಧ್ಯಮದ ಮೂಲಕ ಪ್ರಬಲ ಸಾಕ್ಷಿ ಯನ್ನು ತೋರಿಸಲು ಸಾಧ್ಯವಾಗಲಿಲ್ಲ ಯಾಕೆ ? ಎಂದು ಪ್ರಶ್ನೆ ಮೂಡುವಾಗ ಕೆಲ ಮಾಧ್ಯಮ ಮುಖಂಡರು “ಅಂದು ಸ್ಯಾಟ್ ಲೈಟ್ ವ್ಯವಸ್ಥೆ ಇರಲಿಲ್ಲ,ಅಂದು ಪತ್ರಕರ್ತರನ್ನೇ ಗುರಿಯಾಗಿಸಿಕೊಂಡಿದ್ದರು,ಅವರ ಮೇಲೆ ಕೃತ್ಯ ಎಸಗುತ್ತಿದ್ದರು,ಡಾಕ್ಯಮೆಂಟರಿ ರಿಲೀಸ್ ಮಾಡಲು ಮುಖ್ಯವಾಗಿ ಬಿಡುತ್ತಿರಲಿಲ್ಲ. ಒತ್ತಡಗಳು ಇದ್ದವು “ಎಂದು ಉತ್ತರಿಸಿದರು.

ಆ ಕೃತ್ಯದ ಡಾಕ್ಯುಮೆಂಟರಿ,ಮಾಧ್ಯಮ ರಿಪೋರ್ಟ್ ಮಾಡಲೂ ಕೂಡ ಅಲ್ಲಿನ ಹಲವು ಪತ್ರಕರ್ತರಿಗೆ ಈ ಕರಸೇವಕರು ಬಿಡಲಿಲ್ಲ.ಅವರ ಮೇಲೆ ಹಲ್ಲೆಗಳು,ಲೈಂಗಿಕ ದಾಳಿಗಳನ್ನು ಎಸಗಿದ್ದಾರೆ.
ಈ ತೀರ್ಪಿನ ಸಾಧಕ-ಬಾಧಕ ದ ಬಗ್ಗೆ ಚರ್ಚೆ ಮಾಡಿ ಸತ್ಯ ವಿಶ್ಲೇಷಣೆ ಮತ್ತು ನ್ಯಾಯ ವಿಶ್ಲೇಷಣೆ ಮಾಡಬೇಕಾದ ಹಲವು ಮಾಧ್ಯಮಗಳು,ಪತ್ರಿಕೆಗಳು ಯಾವ ರೀತಿಯಲ್ಲಿ ನ್ಯಾಯದ ಶತ್ರುಗಳಾಗಿ ವರ್ತಿಸುತ್ತಿದೆ ಎನ್ನುವುದಕ್ಕೆ ಇಂದಿನ ಕೆಲ ಪತ್ರಿಕೆಗಳ ಸಂಪಾದಕೀಯ ,ಮುಖಪುಟ ಮತ್ತು ಕೆಲ ದೃಶ್ಯ ಮಾಧ್ಯಮಗಳ ಸೆಗ್ಮೆಂಟ್ ಗಳು ನಮಗೆ ಸಾಕ್ಷಿಯಾಗಿ ಗೋಚರಿಸುತ್ತಿದೆ.

ಒಟ್ಟಾರೆಯಾಗಿ ಈ ಒಂದು ತೀರ್ಪು ಕೇವಲ ನ್ಯಾಯಿಕ ತೀರ್ಪು ಮಾತ್ರ.ಇದು ನೈತಿಕ ತೀರ್ಪಾಗಲು ಸಾಧ್ಯವಿಲ್ಲ.ಇದು ಪ್ರಭುತ್ವವನ್ನು ಆಧರಿಸಿ ಹೊರಡಿಸಿದಂತಹ ತೀರ್ಪು.ಇದು ದೇಶದ ಬಹುತೇಕ ಜನರು ಈ ರೀತಿಯಲ್ಲೇ ತೀರ್ಪು ಬರಬಹುದೆಂದು ನಿರೀಕ್ಷಿಸಿದ ತೀರ್ಪೇ ಹೊರತು ಐತಿಹಾಸಿಕ ತೀರ್ಪಲ್ಲ.ಕೇವಲ ಭಾವನೆಯ ವಿಚಾರಕ್ಕೆ ಪ್ರಕ್ಷುಬ್ಧ ಸ್ಥಿತಿಯನ್ನು ನಿರ್ಮಿಸಿ,ಕೆಲ ವೈಯುಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗೆ ಈ ಕೃತ್ಯ ಮಾಡಿದ್ದಾರೆ ಮತ್ತು ಅಲ್ಲಿ ಬಾಬರಿ ಮಸ್ಜಿದ್ ಕೆಡವಿದ್ದು ತಪ್ಪೆಂದು ,ಅದನ್ನು ಕೆಡವಲು ಪ್ರೇರಣೆ ನೀಡಿದ್ದು ಇದೇ 48 ವ್ಯಕ್ತಿಗಳು ಎಂದು ಸಾರ್ವಕಾಲಿಕವಾಗಿ ಎಲ್ಲಾ ಹಿಂದುಗಳೂ,ಮುಸಲ್ಮಾನರೂ,ಇನ್ನಿತರ ಧರ್ಮದವರೂ ಪ್ರತ್ಯಕ್ಷವಾಗಿ ಒಪ್ಪಿಕೊಳ್ಳುವಂತಹ ಕಟುಸತ್ಯ.ನ್ಯಾಯಾಲಯದ ಕಣ್ಣಿಗೆ ಆ 32 ಆರೋಪಿಗಳು ನಿರ್ದೋಷಿಗಳಾಗಿರಬಹುದು.ಆದರೆ ಸತ್ಯ ಮತ್ತು ನ್ಯಾಯಕ್ಕೆ ಆ 32 ಮತ್ತು ಮೃತಪಟ್ಟ 16 ಮಂದಿ ಒಟ್ಟು 48 ಮಂದಿ ಆರೋಪಿಗಳು ದೋಷಿಗಳೇ.ಅದಕ್ಕೆ ಹಲವಾರು ಕಣ್ಣೀರುಗಳು ಸಾಕ್ಷಿ.ಹಲವಾರು ಸಾವುಗಳು ನೋವುಗಳು ಸಾಕ್ಷಿ. ಹಲವಾರು ಪಾರದರ್ಶಕ ಘಟನೆಗಳೇ ಸಾಕ್ಷಿ.
ಬಾಬರಿ ಮಸ್ಜಿದನ್ನು ಅಲ್ಲಿ ಪುನರ್ ನಿರ್ಮಿಸುವವರೆಗೂ ಅದು ಮುಗಿಯದ ಅಧ್ಯಾಯ.ಅಲ್ಲಿ ನ್ಯಾಯದ ಸ್ಥಾಪನೆ ಆಗಬೇಕೇ ಹೊರತು ಅಸತ್ಯ ಮತ್ತು ಅನ್ಯಾಯದ ನೆಲಗೊಳ್ಳುವಿಕೆ ಆಗಬಾರದು.
ನಿನ್ನೆ ಪ್ರಕಟಿಸಿದ ತೀರ್ಪನ್ನು ನೋಡುವುದಾದರೆ ದೇಶದ ಪ್ರಗತಿಪರರು,ಉತ್ತಮ ಪ್ರಜೆಗಳು, ದಲಿತರು,ಅಲ್ಪಸಂಖ್ಯಾತರು,ಹಿಂದುಳಿದ ವರ್ಗದವರು ಸಂಪೂರ್ಣವಾಗಿ ಬದಲಾಗಬೇಕಿದೆ.ಎಲ್ಲಾ ಚಿಂತನೆಗಳಿಗೆ ಒಂದು ಕೇಂದ್ರ ಬಿಂದುವನ್ನು ಹಾಕುವ ಮೂಲಕ ಭಾರತ ಹಿಟ್ಲರ್ ನ ಜರ್ಮನ್ ಆಗುವುದನ್ನು ತಡೆಯಬೇಕಾಗಿದೆ.

Leave a comment