ಕಾಲಚಕ್ರ

ಕಾಲ ಎಂದಿಗೂ ನಿಲ್ಲದು
ಹಿಂದೆಯೂ ಅದು ಸಾಗದು
ಒಂದೇ ರೀತಿಯು ಇರದು
ನಮಗಾಗಿ ಎಂದೂ ಕಾಯದು

ಕಾಲಚಕ್ರ ಉರುಳಿದಂತೆ ಬಾಳು
ಒಮ್ಮೆ ಬಡತನ ಒಮ್ಮೆ ಸಿರಿತನ ಕೇಳು
ಕಾಲ ಬದಲಾಗದು ಆದರೆಲ್ಲವೂ ಬದಲು
ಕತ್ತಲು ಕಳೆದರೆ ಬರುವುದು ಹಗಲು

ಅವರವರ ಕಷ್ಟಕ್ಕೆ ಅವರು ಅದಲು
ಸ್ವಾರ್ಥ ಸಾಧನೆಗೆ ಇವರು ಬದಲು
ಕಾಣಿಸದ ಕಣ್ಣೀರು ಮರೆಯದ ನೆನಪುಗಳು
ಕಾಲದೊಂದಿಗಿಹವು ಅಂತರಾಳಗಳು

ಬೇಕು ಬದುಕಿಗೊಂದು ಚೈತ್ರಕಾಲ
ಮೂಡಣದ ರಂಗಿನಂತೆ ಹೊಂಬಣ್ಣ ಜಾಲ
ಹಾಡಲು ಬದುಕಿಗೊಂದು ಅರುಣರಾಗ
ಸುಂದರ ಜೀವನದ ತ್ಯಾಗ ಭೋಗ

-ಸುಮಸ್ಮಿತೆ ವಿಜಯಪುರ

Leave a comment