“ಜ್ಙಾನದ ಅರಿವು, ವಿಜ್ಙಾನದ ನೆರವು,ಕಾವ್ಯದ ಗಣನೆ ,ಭಾವನೆಗಳ ಸ್ಮರಣೆ ,ಕಲಿಕೆಯ ಮನನ ,ರಸದ ರುಚಿಯ ಪದಗಳ ಗುಚ್ಛ,ಅನುಭವ ನವೀನ”
ಬರವಣಿಗೆ ಕ್ಷೇತ್ರದಲ್ಲಿ ಬರಹಗಾರರಿಗೆ ವಿಶೇಷವಾಗಿ ಯುವ ಬರಹಗಾರರಿಗೆ ವಿಚಾರಧಾರೆಗಳನ್ನು ಹಬ್ಬಲು ಮುಕ್ತ ವೇದಿಕೆಯನ್ನು ಕಲ್ಪಿಸುತ್ತಾ, ವಿಮರ್ಶಕರ ಚಿಂತನೆಗಳಿಗೆ ಸ್ವರೂಪದರ್ಶಿಯಾಗಿ,ಯುವಮನಸ್ಸುಗಳಿಗೆ ಸಾಹಿತ್ಯ ಕ್ಷೇತ್ರದಲ್ಲಿ ಆಳವಾದ ಒಲವು ಮೂಡಿಸುವ ಸಲುವಾಗಿ,ವೈಚಾರಿಕ ಚಿಂತನೆಗಳನ್ನು ಬೆಳಕು ಚೆಲ್ಲಲು ಹುರಿದುಂಬಿಸುತ್ತಾ,ಜ್ಙಾನ ಭಂಡಾರಗಳ ಹುರುಪಿನೊಂದಿಗೆ,ಓದುಗರ ಅಭಿರುಚಿಯ ಉತ್ಸುಕತೆಗಾಗಿ,ಎಲ್ಲಾ ರೀತಿಯ ಉತ್ತಮ ಬರಹಗಳನ್ನು ಇಡುಗಂಟಾಗಿಸಿ ಅಂತರ್ಜಾಲ ಲೋಕಕ್ಕೆ ‘ಕನ್ನಡಿ’ ಎಂಬ ಕನ್ನಡ ಬ್ಲಾಗ್ ದಾಪುಗಾಲಿಡುತ್ತಾ ಇದೆ.
ನಿಮ್ಮಜ್ಙಾನ-ರಸಧಾರೆಯನ್ನು ಹಂಚುವ ಮೂಲಕ ಜ್ಞಾನದಾತರಾಗಲು ಮುಕ್ತ ವೇದಿಕೆ ಕಲ್ಪಿಸುತ್ತಿದೆ.
ಕವನ,ಗಾದೆ,ಸಣ್ಣ ಕಥೆ,ಚುಟುಕುಗಳು,ಹಾಸ್ಯ ಬರಹಗಳು,ಚಿತ್ರಕ ಬರಹಗಳು,ಸಮಯೋಚಿತವಾದ ವಿಶೇಷ ಬರಹಗಳು,ಸಂಯೋಜಿತ ಸಂಕಲನಗಳ ಬರಹಗಳು,ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಬರಹಗಳು,ಟೀಕಾ ಬರಹಗಳು,ರಾಜಕೀಯ,ಬೌದ್ಧಿಕ,ಶೈಕ್ಷಣಿಕ,ಲೌಖಿಕ,ಧಾರ್ಮಿಕ,ಸಾಮಾಜಿಕ ,ಪೃಕೃತಿ ಚಿಂತನೆಗಳ ಬರಹಗಳು ,ಸಾಹಿತ್ಯಿಕ ಬರಹಗಳು,ವೈಚಾರಿಕ ಬರಹಗಳು, ಐತಿಹಾಸಿಕ ಬರಹಗಳು,ಧಾರವಾಹಿ ಬರಹಗಳು,ಪ್ರವಾಸ ಕಥನಗಳು ಹಾಗೂ ಇನ್ನಿತರ ಓದುಗರ ಅಂತಃಕರಣವನ್ನು ಆರ್ದ್ರಗೊಳಿಸುವ ಎಲ್ಲಾ ರೀತಿಯ ಬರವಣಿಗೆಗೆ ‘ಕನ್ನಡಿ ಬ್ಲಾಗ್’ ಮುಕ್ತವಾಗಿ ಅಹವಾಲಿಡುತ್ತಾ ಇದೆ.ಆಯ್ದ ಬರಹಗಳನ್ನು ‘ಕನ್ನಡಿ ಬ್ಲಾಗ್’ ಮೂಲಕ ಪ್ರಕಟಿಸಲಾಗುವುದು.
‘ಕನ್ನಡಿ’ಯು ಯುವ ಪ್ರತಿಭೆಗಳಿಗೆ ರೂಪಕವಾಗಲಿಕ್ಕಿದೆ.’ಕನ್ನಡಿ’ ನೆಚ್ಚಿನ ಓದುಗರಿಗೆ ಅತ್ಯುಪಯುಕ್ತ ಅಂತರ್ಜಾಲ ಕೈಪಿಡಿಯಾಗಲಿಕ್ಕಿದೆ.
ಸಹೃದಯರು ಬರಹಗಳನ್ನು ಕಳುಹಿಸುವ ಮೂಲಕ ಮತ್ತು ಓದುವ ಮೂಲಕ ಪ್ರೋತ್ಸಾಹಿಸಬೇಕೆಂದು ವಿನಂತಿಸುತ್ತಿದ್ದೇವೆ.
ನಿಮ್ಮ ಬರಹಗಳನ್ನು ಈ ಕೆಳಗಿನ ಸಂಪರ್ಕಕ್ಕೆ ಕಳುಹಿಸಿ.
(ನೀವು ಕಳುಹಿಸುವಾಗ ನಿಮ್ಮ ಸಂಪೂರ್ಣ ಹೆಸರು,ವಿಳಾಸ,ಮೊಬೈಲ್ ನಂಬರ್ ಗಳನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು)
Kannadiblog12@gmail.com
ಇತೀ
‘ಕನ್ನಡಿ’ ಕನ್ನಡ ಬ್ಲಾಗ್ ಟೀಂ
(ಲೇಖನಿಗೊಂದು ವೇದಿಕೆ)